ಟಾಲಿವುಡ್ ನಟ ನಾಗಚೈತನ್ಯ (Nagachaitanya) ಅವರು ಸಿನಿಮಾಗಿಂತ ಹೆಚ್ಚು ಖಾಸಗಿ ವಿಚಾರವಾಗಿ ಸಖತ್ ಸುದ್ದಿಯಾಗ್ತಿದ್ದಾರೆ. ಇದೀಗ ಭಾವಿ ಪತ್ನಿ ಶೋಭಿತಾ (Sobhita) ಜೊತೆ ಸಿನಿಮಾ ಮಾಡ್ತೀರಾ ಎಂದು ಕೇಳಲಾದ ಪ್ರಶ್ನೆಗೆ ನಾಗಚೈತನ್ಯ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಶೋಭಿತಾ ಜೊತೆ ಸಿನಿಮಾ ಮಾಡಲ್ಲ ಎಂದು ಮಾತನಾಡಿದ್ದಾರೆ.
ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಅತಿಥಿಯಾಗಿ ನಾಗಚೈತನ್ಯ ಭಾಗವಹಿಸಿದ್ದರು. ಆಗ ಸೂಕ್ತ ಕಥೆ ಸಿಕ್ಕರೆ ಶೋಭಿತಾ ಜೊತೆ ನಟಿಸುತ್ತೀರಾ ಎಂದು ಪ್ರಶ್ನೆ ಕೇಳಲಾಗಿದೆ. ಆ ರೀತಿ ಯಾವುದೇ ಪ್ಲ್ಯಾನ್‌ಗಳಿಲ್ಲ ಎಂದು ಮಾತನಾಡಿದ್ದಾರೆ. ಇದನ್ನೂ ಓದಿ:ತಮಿಳು ನಟಿ ರೇಖಾ ನಾಯರ್ ಕಾರು ಅಪಘಾತ: ವ್ಯಕ್ತಿಯೋರ್ವ ಸಾವು
ಇನ್ನೂ ಆ.8ರಂದು ಶೋಭಿತಾಗೆ ನಾಗಚೈತನ್ಯ ರಿಂಗ್ ತೊಡಿಸುವ ಮೂಲಕ ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟಿದ್ದರು. ಇನ್ನೂ ಮುಂದಿನ ವರ್ಷದ ಅಂತ್ಯದಲ್ಲಿ ಈ ಜೋಡಿ ವಿದೇಶದಲ್ಲಿ ಡೆಸ್ಟಿನೇಷನ್ ವೆಡ್ಡಿಂಗ್‌ಗೆ ಪ್ಲ್ಯಾನ್ ಮಾಡಿದ್ದಾರೆ. ಅದಕ್ಕೂ ಮುನ್ನ ಇಬ್ಬರೂ ಒಪ್ಪಿಕೊಂಡಿರುವ ಸಿನಿಮಾಗಳನ್ನು ಪೂರ್ಣಗೊಳಿಸಬೇಕಿದೆ.
ಅಂದಹಾಗೆ, 2017ರಲ್ಲಿ ಸ್ಟಾರ್ ನಟಿ ಸಮಂತಾ (Samantha) ಜೊತೆ ನಾಗಚೈತನ್ಯ ಮದುವೆಯಾಗಿದ್ದರು. ಕೆಲ ಮನಸ್ತಾಪಗಳಿಂದ 2021ರಲ್ಲಿ ಇಬ್ಬರೂ ಡಿವೋರ್ಸ್ ಪಡೆದುಕೊಂಡರು.