ಟಾಲಿವುಡ್ ನಟ ನಾಗಚೈತನ್ಯ (Nagachaitanya) ಅವರು ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಶೋಭಿತಾ (Sobhita) ಜೊತೆಗಿನ ಮದುವೆ ಹೇಗಿರಬೇಕು ಎಂದು ನಾಗಚೈತನ್ಯ ವಿವರಿಸಿದ್ದಾರೆ. ಮದುವೆ ಕುರಿತಾದ ಕನಸನ್ನು ನಟ ರಿವೀಲ್ ಮಾಡಿದ್ದಾರೆ. ಇದನ್ನೂ ಓದಿ:ಇಂದು ದರ್ಶನ್‌ಗೆ ಸಿಗಲಿದೆ 90 ಗ್ರಾಂ ಮಟನ್
ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಮದುಮಗನ ಗೆಟಪ್‌ನಲ್ಲಿ ಅತಿಥಿಯಾಗಿ ನಾಗಚೈತನ್ಯ ಭಾಗಿಯಾಗಿದ್ದರು. ಈ ವೇಳೆ, ಮದುವೆ ಹೇಗೆ ನಡೆಯಬೇಕು ಎಂದು ಎದುರಾದ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ಮದುವೆ ಯಾವಾಗಲೂ ದೊಡ್ಡದಾಗಿ ನಡೆಯಬೇಕು ಎಂದೇನು ಇಲ್ಲ. ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯದಂತೆ ಮದುವೆ (Wedding) ಆಗಬೇಕೆಂದು ನಾನು ಬಯಸುತ್ತೇನೆ ಎಂದಿದ್ದಾರೆ ನಾಗಚೈತನ್ಯ.
ಇನ್ನೂ ಆ.8ರಂದು ಶೋಭಿತಾಗೆ ನಾಗಚೈತನ್ಯ ರಿಂಗ್ ತೊಡಿಸುವ ಮೂಲಕ ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟಿದ್ದರು. ಇನ್ನೂ ಮುಂದಿನ ವರ್ಷದ ಅಂತ್ಯದಲ್ಲಿ ಈ ಜೋಡಿ ವಿದೇಶದಲ್ಲಿ ಡೆಸ್ಟಿನೇಷನ್ ವೆಡ್ಡಿಂಗ್‌ಗೆ ಪ್ಲ್ಯಾನ್ ಮಾಡಿದ್ದಾರೆ. ಅದಕ್ಕೂ ಮುನ್ನ ಇಬ್ಬರೂ ಒಪ್ಪಿಕೊಂಡಿರುವ ಸಿನಿಮಾಗಳನ್ನು ಪೂರ್ಣಗೊಳಿಸಬೇಕಿದೆ.
ಅಂದಹಾಗೆ, 2017ರಲ್ಲಿ ಸ್ಟಾರ್ ನಟಿ ಸಮಂತಾ ಜೊತೆ ನಾಗಚೈತನ್ಯ ಮದುವೆಯಾಗಿದ್ದರು. ಕೆಲ ಮನಸ್ತಾಪಗಳಿಂದ 2021ರಲ್ಲಿ ಇಬ್ಬರೂ ಡಿವೋರ್ಸ್ ಪಡೆದುಕೊಂಡರು.