ಕುಡ್ಲದ ಬೆಡಗಿ ಪೂಜಾ ಹೆಗ್ಡೆ (Pooja Hegde) ಕಳೆದ ವರ್ಷ ಮಹೇಶ್ ಬಾಬು (Mahesh Babu) ಸಿನಿಮಾದಿಂದ ಹೊರಬಂದ್ಮೇಲೆ ಬಾಲಿವುಡ್ (Bollywood) ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ತೆಲುಗಿನ ಹೊಸ ಚಿತ್ರವನ್ನು ನಟಿ ಒಪ್ಪಿಕೊಂಡಿದ್ದಾರೆ. ಇದನ್ನೂ ಓದಿ:ಪುನೀತ್ ನಟನೆಯ ‘ಅಂಜನಿಪುತ್ರ’ ಮರು ಬಿಡುಗಡೆ
ಹಲವು ವರ್ಷಗಳ ನಂತರ ಪೂಜಾ ಹೆಗ್ಡೆ ಮತ್ತೆ ನಾಗಚೈತನ್ಯಗೆ ನಾಯಕಿಯಾಗಿ ನಟಿಸಲಿದ್ದಾರೆ. ನಾಗಚೈತನ್ಯ ‘ತಾಂಡೇಲ್’ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದ ಬಳಿಕ ಪೂಜಾ ಹೆಗ್ಡೆ ಜೊತೆ ಹೊಸ ಸಿನಿಮಾ ಮಾಡಲಿದ್ದಾರೆ. ಇದನ್ನೂ ಓದಿ:ದುಬಾರಿ ಕಾರು ಖರೀದಿಸಿದ ಹರಿಪ್ರಿಯಾ, ವಸಿಷ್ಠ ಸಿಂಹ ದಂಪತಿ
ಹಿಂದಿ ಹಲವು ಬ್ಯುಸಿಯಿರುವ ಇರುವ ನಟಿ, ನಿರ್ದೇಶಕ ಕಾರ್ತಿಕ್ ದಂಡು ಬರೆದ ಕಥೆ ಕೇಳಿ ಇಷ್ಟವಾಗಿ ಚಿತ್ರತಂಡಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. 2024ರ ಅಕ್ಟೋಬರ್ ಶೂಟಿಂಗ್ ಶುರುವಾಗಲಿದೆ. 10 ವರ್ಷಗಳ ನಂತರ ಮತ್ತೆ ನಾಗಚೈತನ್ಯ ಹೊಸ ಚಿತ್ರಕ್ಕಾಗಿ ಸಾಥ್ ನೀಡಿದ್ದಾರೆ ಪೂಜಾ.
2014ರಲ್ಲಿ ‘ಒಕಾ ಲೈಲಾ ಕೋಸಮ್’ ಚಿತ್ರದ ಮೂಲಕ ಟಾಲಿವುಡ್‌ಗೆ (Tollywood) ನಟಿ ಎಂಟ್ರಿ ಕೊಟ್ಟಿದ್ದರು. ಮೊದಲ ಚಿತ್ರದಲ್ಲೇ ಇಬ್ಬರೂ ಜೋಡಿಯಾಗಿ ಅಭಿಮಾನಿಗಳ ಗಮನ ಸೆಳೆದಿದ್ದರು. ಈಗ ಮತ್ತೆ ಈ ಜೋಡಿ ಒಂದಾಗುತ್ತಿರೋದು ಫ್ಯಾನ್ಸ್‌ಗೆ ಖುಷಿ ಕೊಟ್ಟಿದೆ.