38th Leeds International Film: ಮನೋಜ್ ಬಾಜಪೇಯಿ ‘ದಿ ಫ್ಯಾಬಲ್’ಗೆ ಅತ್ಯುತ್ತಮ ಚಿತ್ರ ಪ್ರಶಸ್ತಿ

Public TV
1 Min Read
manoj bajpayee

ಪ್ರತಿಷ್ಠಿತ ‘ಲೀಡ್ಸ್ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್‌’ನಲ್ಲಿ (38th Leeds International Film) ಮನೋಜ್ ಬಾಜಪೇಯಿ ನಟನೆಯ ‘ದಿ ಫ್ಯಾಬಲ್’ (The Fable) ಸಿನಿಮಾವು ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಇದನ್ನೂ ಓದಿ:BBK 11: ಕಳಪೆ ಎಂದ ಮೋಕ್ಷಿತಾಗೆ ಅಸಲಿ ಆಟ ಈಗ ಶುರು ಎಂದು ಸವಾಲೆಸೆದ ಧನರಾಜ್

manoj bajpayeeಯುಕೆಯಲ್ಲಿ ನಡೆದ 38ನೇ ಲೀಡ್ಸ್ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಮನೋಜ್ ಬಾಜಪೇಯಿ (Manoj Bajpayee)  ನಟನೆಯ ‘ದಿ ಫ್ಯಾಬಲ್’ಗೆ ಅತ್ಯುತ್ತಮ ಚಿತ್ರ ಎಂದು ಹೆಗ್ಗಳಿಕೆಗೆ ಪಾತ್ರವಾಗಿದೆ. ‘ಲೀಡ್ಸ್ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್‌’ನಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು (Best Film Award) ಗೆದ್ದ ಮೊದಲ ಭಾರತೀಯ ಸಿನಿಮಾ ಇದಾಗಿದೆ.

ಇನ್ನೂ ಈ ಚಿತ್ರವನ್ನು ಬರಹಗಾರ, ನಿರ್ದೇಶಕ ರಾಮ್ ರೆಡ್ಡಿ ನಿರ್ದೇಶನ ಮಾಡಿದ್ದಾರೆ. ಭಾರತೀಯ ಚಿತ್ರರಂಗ ಈ ಹಿಂದೆ ಯಾವುದೇ ಭಾರತೀಯ ಚಿತ್ರಕ್ಕೂ ಈ ಪ್ರಶಸ್ತಿಯ ಗೌರವ ಸಿಕ್ಕಿರಲಿಲ್ಲ. ‘ದಿ ಫ್ಯಾಬಲ್’ ಚಿತ್ರ ಇದೀಗ ಹೊಸ ದಾಖಲೆ ಬರೆದಿದೆ.

TAGGED:
Share This Article