ತೆಲುಗು ನಟ ಮಹೇಶ್ ಬಾಬು ಪತ್ನಿ ನಮ್ರತಾ ಶಿರೋಡ್ಕರ್ (Namrata Shirodkar) ಅವರು ಮಕ್ಕಳೊಂದಿಗೆ ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಈ ವೇಳೆ, ನಟಿಯ ಜೊತೆಗಿನ ಸೆಲ್ಫಿಗಾಗಿ ಫ್ಯಾನ್ಸ್ ಮುಗಿಬಿದ್ದಿದ್ದಾರೆ. ಇದನ್ನೂ ಓದಿ:ಲಿಪ್‌ಲಾಕ್ ಫೋಟೋ ಹಂಚಿಕೊಂಡ ಪ್ರಿಯಾಂಕಾ ಚೋಪ್ರಾ ದಂಪತಿ
ತಿರುಪತಿ ಬಾಲಾಜಿ ದೇವರ ಸನ್ನಿಧಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಮಕ್ಕಳಾದ ಗೌತಮ್, ಸಿತಾರಾ ಮತ್ತು ಆಪ್ತರ ಜೊತೆ ತಿರುಪತಿ ಸನ್ನಿಧಿಯಲ್ಲಿರುವ ಸುಂದರ ಫೋಟೋಗಳನ್ನು ಶೇರ್ ಮಾಡಿ ನಟಿ ನಮ್ರತಾ ಶಿರೋಡ್ಕರ್ ಸಂಭ್ರಮಿಸಿದ್ದಾರೆ.
View this post on Instagram
ಅಂದಹಾಗೆ, ಸದ್ಯದಲ್ಲೇ ರಾಜಮೌಳಿ (Rajamouli) ಜೊತೆ ಮಹೇಶ್ ಬಾಬು (Mahesh Babu) ಸಿನಿಮಾ ಶುರುವಾಗಲಿದೆ. ಹೊಸ ಆರಂಭಕ್ಕೂ ಮುನ್ನ ನಟನ ಪತ್ನಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.
ಇನ್ನೂ ತೆಲುಗಿನ ಮಹೇಶ್ ಬಾಬು ಪತ್ನಿ ನಮ್ರತಾ ಶಿರೋಡ್ಕರ್ ಅವರು ನಟಿ, ನಿರ್ಮಾಪಕಿ, ಮಾಡೆಲ್ ಆಗಿ ಗುರುತಿಸಿಕೊಂಡಿದ್ದಾರೆ. ಕನ್ನಡದ ‘ಚೋರ ಚಿತ್ತ ಚೋರ’ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದರು. ಬಹುಭಾಷಾ ನಟಿಯಾಗಿ ಗಮನ ಸೆಳೆದಿದ್ದಾರೆ.