‘ಮುಫಾಸಾ: ದಿ ಲಯನ್ ಕಿಂಗ್’ ಸಿನಿಮಾಗೆ ಸಾಥ್‌ ನೀಡಿದ ಮಹೇಶ್ ಬಾಬು

Public TV
1 Min Read
mahesh babu

ಸ್ಟಾರ್ ಡೈರೆಕ್ಟರ್ ರಾಜಮೌಳಿ ಜೊತೆಗಿನ ಮಹೇಶ್ ಬಾಬು (Mahesh Babu) ಸಿನಿಮಾದ ಅಪ್‌ಡೇಟ್‌ಗಾಗಿ ಫ್ಯಾನ್ಸ್ ಎದುರು ನೋಡ್ತಿದ್ದಾರೆ. ಇದರ ನಡುವೆ ಮಹೇಶ್ ಬಾಬು ಹಾಲಿವುಡ್ ಚಿತ್ರತಂಡಕ್ಕೆ ಸಾಥ್ ನೀಡುತ್ತಿದ್ದಾರೆ. ‘ಮುಫಾಸಾ: ದಿ ಲಯನ್ ಕಿಂಗ್’ ಸಿನಿಮಾಗಾಗಿ ನಟ ಕೈಜೋಡಿಸಿದ್ದಾರೆ.

mahesh babu

ಹಾಲಿವುಡ್‌ನ ‘ಮುಫಾಸಾ: ದಿ ಲಯನ್ ಕಿಂಗ್’ (Mufasa The Lion King) ಸಿನಿಮಾ ಬಹುಭಾಷೆಗಳಲ್ಲಿ ಮೂಡಿ ಬರಲಿದೆ. ಇದರ ತೆಲುಗು ವರ್ಷನ್‌ಗೆ ಮಹೇಶ್ ಬಾಬು ಧ್ವನಿ ನೀಡಲಿದ್ದಾರೆ. ಮುಫಾಸಾ ಪಾತ್ರಕ್ಕೆ ನಟ ವಾಯ್ಸ್ ನೀಡಲಿದ್ದಾರೆ. ಇದನ್ನೂ ಓದಿ:ಮಹೇಶ್ ಬಾಬು ಕುಟುಂಬದ ಮತ್ತೊಂದು ಕುಡಿ ಸಿನಿಮಾಗೆ ಎಂಟ್ರಿ

ಪ್ರೀತಿಯ ತಂದೆಯಾಗಿ ಮಗನಿಗೆ ಮಾರ್ಗದರ್ಶನ ನೀಡುವ ಕಾಡಿನ ರಾಜನಾಗಿ ಕುಲವನ್ನು ನೋಡಿಕೊಳ್ಳುವ ಮುಫಾಸಾ ಪಾತ್ರವು ನನ್ನನ್ನು ಆಕರ್ಷಿಸಿದೆ. ಈ ತಂಡದ ಜೊತೆ ಕೈಜೋಡಿಸಿರುವುದು ವೈಯಕ್ತಿಕವಾಗಿ ನನಗೆ ತುಂಬಾ ಸ್ಪೆಷಲ್. ಏಕೆಂದರೆ ಇದನ್ನು ಮಕ್ಕಳೊಂದಿಗೆ ಕುಳಿತು ನೋಡಬಹುದು. ಅದನ್ನು ನಾನು ಎಂಜಾಯ್ ಮಾಡುತ್ತೇನೆ. ತೆಲುಗಿನ ‘ಮುಫಾಸಾ: ದಿ ಲಯನ್ ಕಿಂಗ್’ ಚಿತ್ರವನ್ನು ಪ್ರೇಕ್ಷಕರು ಯಾವಾಗ ನೋಡುತ್ತಾರೆ ಎಂದು ನಾನು ಕಾಯುತ್ತಿದ್ದೇನೆ ಎಂದು ಮಹೇಶ್ ಬಾಬು ತಿಳಿಸಿದ್ದಾರೆ.

ಇನ್ನೂ ‘ಮುಫಾಸಾ: ದಿ ಲಯನ್ ಕಿಂಗ್’ ತೆಲುಗು ವರ್ಷನ್ ಟ್ರೈಲರ್ ಆ.26ರಂದು ರಿಲೀಸ್ ಆಗಲಿದೆ. ಸಿನಿಮಾ ಡಿ.20ರಂದು ಬಹುಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

Share This Article