ಹೈದರಾಬಾದ್: ಕೊರೊನಾ ಸೋಂಕು ಹರಡುವ ಹಿನ್ನೆಲೆಯಲ್ಲಿ ಭಾರತ ಬಂದ್ ಆಗಿದೆ. ಇಡೀ ದೇಶದ ಜನರು ಕೋವಿಂಡ್ ವಿರುದ್ಧ ಹೋರಾಡಲು ಒಗ್ಗಟ್ಟಾಗಿದ್ದಾರೆ. ಈ ನಡುವೆ ಪ್ರಧಾನಿ ನರೇಂದ್ರ ಮೋದಿಯಿಂದ ಹಿಡಿದು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ಆರ್ಥಿಕ ಸಹಾಯ ಮಾಡುವಂತೆ ದೇಶದ ಜನರನ್ನು ಕೋರಿದ್ದಾರೆ.
ಪಿಎಂ ಮತ್ತು ಸಿಎಂಗಳ ಮನವಿ ಸ್ಪಂದಿಸಿರುವ ಟಾಲಿವುಡ್ ನಾಯಕರು ಸರ್ಕಾರದ ನೆರವಿಗೆ ಬಂದಿದ್ದಾರೆ. ನಟ ಪವನ್ ಕಲ್ಯಾಣ ಎರಡು ಕೋಟಿ ಆರ್ಥಿಕ ನೆರವು ನೀಡಿದ್ದಾರೆ. ಈ ಪೈಕಿ ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ಒಂದು ಕೋಟಿ, ಆಂಧ್ರ ಪ್ರದೇಶ ಮತ್ತು ತೆಲಂಗಾಣ ಮುಖ್ಯಮಂತ್ರಿ ಪರಿಹಾರ ನಿಧಿಗೆ ತಲಾ 50 ಲಕ್ಷ ರೂ. ನೆರವು ನೀಡಿದ್ದಾರೆ.
Advertisement
Advertisement
ಟಾಲಿವುಡ್‍ನ ಮತ್ತೋರ್ವ ನಟ ಮಹೇಶ್ ಬಾಬು ಆಂಧ್ರ ಪ್ರದೇಶ ಮತ್ತು ತೆಲಂಗಾಣ ಮುಖ್ಯಮಂತ್ರಿ ಪರಿಹಾರ ನಿಧಿಗೆ ಒಂದು ಕೋಟಿ ನೀಡಿ ಸಹಾಯ ಹಸ್ತ ಚಾಚಿದ್ದಾರೆ.
Advertisement
ಪವನ್ ಕಲ್ಯಾಣ ಆರ್ಥಿಕ ಸಹಾಯ ಮಾಡಿದ್ದನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಇದರಿಂದ ಪ್ರೇರಣೆಗೊಂಡ ನಟ ರಾಮ್‍ಚರಣ್ 70 ಲಕ್ಷ ರೂ. ಆರ್ಥಿಕ ನೆರವು ನೀಡಿದ್ದು, ಕೇಂದ್ರ ಸರ್ಕಾರ ಮತ್ತು ಆಂಧ್ರ ಪ್ರದೇಶ, ತೆಲಂಗಾಣ ಸರ್ಕಾರ ಪರಿಹಾರ ನಿಧಿಗೆ ಹಂಚಿಕೆ ಮಾಡಿದ್ದಾರೆ.
Advertisement
Let's battle the COVID-19 as a nation! I urge everyone to follow the rules put forth by our Government. My deepest gratitude for all your efforts @PMOIndia @TelanganaCMO @KTRTRS @AndhraPradeshCM @ysjagan. ???????? Humanity will rise and we will win this war! #StayHomeStaySafe pic.twitter.com/csfdtaZPWy
— Mahesh Babu (@urstrulyMahesh) March 26, 2020
ಕೊರೊನಾ ವಿರುದ್ಧದ ಹೋರಾಟಕ್ಕೆ ಎಲ್ಲರೂ ಒಂದಾಗಬೇಕಿದ್ದು, ಸರ್ಕಾರದ ನೆರವಿಗೆ ನಿಲ್ಲಬೇಕಿದೆ. ಎಲ್ಲರೂ ಸಾಧ್ಯವಾದಷ್ಟು ನೆರವು ನೀಡಿ ಎಂದು ಈ ನಟರು ಮನವಿ ಮಾಡಿಕೊಂಡಿದ್ದಾರೆ.