CinemaLatestLeading NewsMain Post

ಟಾಲಿವುಡ್ ಸ್ಟಾರ್ ಮಹೇಶ್ ಬಾಬು ತಂದೆ ಇನ್ನಿಲ್ಲ

ಟಾಲಿವುಡ್ (Tollywood) ಸ್ಟಾರ್ ನಟ ಮಹೇಶ್ ಬಾಬು (Mahesh Babu) ಅವರ ತಂದೆ, ತೆಲುಗಿನ ಸೂಪರ್ ಸ್ಟಾರ್ ಆಗಿದ್ದ ಕೃಷ್ಣ (Krishna) ಅವರು ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.

ಕೃಷ್ಣ ಅವರನ್ನು ಭಾನುವಾರ ಅನಾರೋಗ್ಯದ ಕಾರಣದಿಂದಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಷ್ಟೇ ಅಲ್ಲದೇ ಹೃದಯಾಘಾತವಾಗಿ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದರು ಆದರೆ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿಸಿದೆ. ಹಾಗಾಗಿಯೇ ಅವರನ್ನು ಐಸಿಯುಗೆ ಸ್ಥಳಾಂತರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಇದನ್ನೂ ಓದಿ: ಮತ್ತೆ ಕಿಚ್ಚನಿಗೆ ಜೋಡಿಯಾಗಲಿದ್ದಾರೆ ರಮ್ಯಾ

80 ವರ್ಷದ ಕೃಷ್ಣ (Krishna) ಅವರು ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು ಎಂದು ಹೇಳಲಾಗುತ್ತಿದೆ. ತೀವ್ರ ನಿಗಾಘಟದಲ್ಲಿ ಸ್ಥಳಾಂತರಿಸಿದ ಚಿಕಿತ್ಸೆ ನೀಡಲಾಗುತ್ತುತ್ತು. ಜೊತೆಗೆ ವೆಂಟಿಲೇಟರ್ ಮೂಲಕವೇ ಅವರು ಉಸಿರಾಡುತ್ತಿದ್ದರು. ಆದರೆ ಇಂದು ಮುಂಜಾನೆ 4 ಗಂಟೆಗೆ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಇತ್ತೀಚೆಗಷ್ಟೇ ಕೃಷ್ಣ ಅವರು ಹೆಂಡತಿಯನ್ನು ಕಳೆದುಕೊಂಡಿದ್ದರು. ಆ ನೋವಲ್ಲೇ ಅವರು ದಿನಗಳನ್ನು ಕಳೆಯುತ್ತಿದ್ದರು. ಇದನ್ನೂ ಓದಿ: ಮಗನ ಮುದ್ದಾದ ಫೋಟೋ ಹಂಚಿಕೊಂಡ ನಿಖಿಲ್ ಕುಮಾರಸ್ವಾಮಿ

Live Tv

Leave a Reply

Your email address will not be published. Required fields are marked *

Back to top button