ಜನಪ್ರಿಯ ಧಾರಾವಾಹಿಗಳ ಮೂಲಕ ಕನ್ನಡಿಗರ ಮನಗೆದ್ದಿರುವ ನಟ ಕಿರಣ್ ರಾಜ್ (kiran Raj), ಈಗ ಬೆಳ್ಳಿತೆರೆಯಲ್ಲೂ ಬೇಡಿಕೆಯ ನಟರಾಗಿದ್ದಾರೆ. ಪ್ರಸ್ತುತ ಅವರು ನಾಯಕನಾಗಿ ನಟಿಸುತ್ತಿರುವ ರಾನಿ (Raani) ಚಿತ್ರದ ಚಿತ್ರೀಕರಣ ಬಿರುಸಿನಿಂದ ಸಾಗಿದೆ. ಈ ನಡುವೆ ಅವರು ಸಮಾಜಮುಖಿ ಕೆಲಸಕ್ಕೆ ಮುಂದಾಗಿದ್ದಾರೆ.
ಕಿರಣ್ ರಾಜ್ ಕೇವಲ ನಾಯಕನಾಗಷ್ಟೇ ಅಲ್ಲ. ಸಾಮಾಜಿಕ ಕಾರ್ಯಗಳಿಂದಲೂ ಗುರುತಿಸಿಕೊಂಡಿದ್ದಾರೆ. ಕೋವಿಡ್ ಸಮಯದಲ್ಲೂ ಸಾಕಷ್ಟು ಜನರಿಗೆ ಕಿರಣ್ ರಾಜ್ ಆಸರೆಯಾಗಿದ್ದರು. ಅಲ್ಲದೇ, ಅನೇಕ ಸಮಾಜಮುಖಿ ಕೆಲಸಗಳಲ್ಲೂ ಅವರು ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇದನ್ನೂ ಓದಿ:ಸಮಂತಾ ನಟನೆಯ ಹಾಲಿವುಡ್ ಸಿನಿಮಾಗೆ ಟೈಟಲ್ ಫಿಕ್ಸ್
ಪ್ರಸ್ತುತ ನಕ್ಷತ್ರ (Nakshtra) ಅವರ ನೇತೃತ್ವದಲ್ಲಿ ನಿರ್ಮಾಣವಾಗುತ್ತಿರುವ ‘ನಮ್ಮನೆ ಸುಮ್ಮನೆ ನಿರಾಶ್ರಿತರ ಆಶ್ರಮ’ ಕ್ಕೆ ಕಿರಣ್ ರಾಜ್ ನೂರು ಮೂಟೆ ಸಿಮೆಂಟ್ ನೀಡಿದ್ದಾರೆ. ಕಿರಣ್ ರಾಜ್ ಅವರ ಈ ಕಾರ್ಯಕ್ಕೆ ನಕ್ಷತ್ರ ಧನ್ಯವಾದ ತಿಳಿಸಿದ್ದಾರೆ. ಅಲ್ಲದೇ, ನಿರಾಶ್ರಿತರ ಜೊತೆ ಯಾವಾಗಲೂ ನಿಲ್ಲುವುದಾಗಿ ಕಿರಣ್ ರಾಜ್ ಹೇಳಿದ್ದಾರೆ.