ಕಿರುತೆರೆಯ ಜನಪ್ರಿಯ ನಟ ಕಿರಣ್ ರಾಜ್ (Kiran Raj) ಅವರು ಸಿನಿಮಾ ಹಾಗೂ ಸೀರಿಯಲ್ ಎರಡರಲ್ಲೂ ಆ್ಯಕ್ಟೀವ್ ಆಗಿದ್ದಾರೆ. ಇದೀಗ ಡೈರೆಕ್ಟರ್ ಗುರುತೇಜ್ ಶೆಟ್ಟಿ (Gurutej Shetty) ಜೊತೆ ಮತ್ತೆ ಹೊಸ ಸಿನಿಮಾಗಾಗಿ ಕಿರಣ್ ಸಾಥ್ ನೀಡಿದ್ದಾರೆ. ಇದನ್ನೂ ಓದಿ:ಅದಿತಿ ಪ್ರಭುದೇವ ಮಗಳ ಗ್ರ್ಯಾಂಡ್ ಬರ್ತ್‌ಡೇ ಸೆಲಬ್ರೇಶನ್
2024ರಲ್ಲಿ ತೆರೆಕಂಡ ‘ರಾನಿ’ (Ronny) ಸಿನಿಮಾದ ನಂತರ ಮತ್ತೊಂದು ಚಿತ್ರಕ್ಕೆ ಜೊತೆಯಾಗಿದ್ದಾರೆ ನಿರ್ದೇಶಕ ಗುರುತೇಜ್ ಶೆಟ್ಟಿ ಮತ್ತು ಕಿರಣ್ ರಾಜ್. ಈ ಚಿತ್ರಕ್ಕೆ ‘ಜಾಕಿ 42’ (Jockey 42) ಎಂದು ಹೆಸರಿಡಲಾಗಿದೆ. ಕಿರಣ್ ರಾಜ್ ಜಾಕಿಯಾಗಿ ಕುದುರೆ ಮೇಲೆರಿದ್ದಾರೆ. ಕುದುರೆಯ ಕಾಲು ಕೆಳಗೆ ಹಣದ ಕಂತೆ ಇರುವ ಪೋಸ್ಟರ್ ಎಲ್ಲರ ಗಮನ ಸೆಳೆದಿದೆ. ಸಖತ್ ಕ್ಯಾಚಿ ಆಗಿರೋ ಟೈಟಲ್ ಅನ್ನೇ ಚಿತ್ರಕ್ಕೆ ಇಡಲಾಗಿದೆ. ಇದನ್ನೂ ಓದಿ:ಅದಿತಿ ಪ್ರಭುದೇವ ಮಗಳ ಗ್ರ್ಯಾಂಡ್ ಬರ್ತ್‌ಡೇ ಸೆಲಬ್ರೇಶನ್
View this post on Instagram
ಆಕ್ಷನ್, ರೊಮಾನ್ಸ್, ಫ್ಯಾಮಿಲಿ ಸೆಂಟಿಮೆಂಟ್ ಮತ್ತು ಹಾಸ್ಯ ಎಲ್ಲಾವನ್ನೂ ಚಿತ್ರ ಒಳಗೊಂಡಿದೆ ಎಂದು ನಿರ್ದೇಶಕ ಗುರುತೇಜ್ ಶೆಟ್ಟಿ ಭರವಸೆ ನೀಡಿದ್ದಾರೆ. ಬೆಂಗಳೂರು, ಮೈಸೂರು ಮತ್ತು ವಿದೇಶಗಳಲ್ಲಿ ಚಿತ್ರೀಕರಣ ನಡೆಯಲಿದೆ. ಮೇ15ರಿಂದ ಚಿತ್ರೀಕರಣ ಆರಂಭವಾಗಲಿದೆ. ಇದನ್ನೂ ಓದಿ:ಲೈಫ್‌ಲ್ಲಿ ಏನೇನೋ ಒಂದಷ್ಟು ಆದ್ಮೇಲೆ ನಾನು ಇಷ್ಟು ಗಟ್ಟಿಯಾಗಿರೋಕೆ ತಂದೆಯೇ ಕಾರಣ- ನಿವೇದಿತಾ ಭಾವುಕ
ಈ ಚಿತ್ರವನ್ನು ಭಾರತಿ ಸತ್ಯನಾರಾಯಣ ಅವರು ಗೋಲ್ಡನ್ ಗೇಟ್ ಸ್ಟುಡಿಯೋ ಮೂಲಕ ಚಿತ್ರ ನಿರ್ಮಾಣವಾಗುತ್ತಿದೆ. ಗಿರೀಶ್ ಹೆಗಡೆ, ಗುರುತೇಜ್ ಮತ್ತು ಕಿರಣ್ ಸಹ ನಿರ್ಮಾಪಕರಾಗಿದ್ದಾರೆ.
ಈ ಚಿತ್ರದ ಜೊತೆ ಕಿರುತೆರೆಗೂ ಅವರು ಕಮ್ ಬ್ಯಾಕ್ ಆಗಿದ್ದಾರೆ. ‘ಕನ್ನಡತಿ’ ಸೀರಿಯಲ್ ಬಳಿಕ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಕಿರಣ್ ರಾಜ್ ಮಾಡುತ್ತಿದ್ದರು. ಇದೀಗ ‘ಕರ್ಣ’ ಎಂಬ ಹೊಸ ಸೀರಿಯಲ್ ಅನ್ನು ಅವರು ಒಪ್ಪಿಕೊಂಡಿದ್ದಾರೆ. ಇದರ ಪ್ರೋಮೋ ಈಗಾಗಲೇ ರಿಲೀಸ್ ಆಗಿ ಉತ್ತಮ ಪ್ರತಿಕ್ರಿಯೆ ಪಡೆದಿದೆ. ಕರ್ಣನಾಗಿ ಬರುತ್ತಿರುವ ಕಿರಣ್ ರಾಜ್‌ಗೆ ಬಿಗ್ ಬಾಸ್ ಖ್ಯಾತಿಯ ಭವ್ಯಾ ಗೌಡ ನಾಯಕಿ ಸಾಥ್ ನೀಡಲಿದ್ದಾರೆ. ಸೀರಿಯಲ್ ಪ್ರಸಾರದ ದಿನಾಂಕ ಇನ್ನೂ ನಿಗದಿ ಮಾಡಬೇಕಿದೆ.