ಬೆಂಗಳೂರು: ನಗರದ ಫ್ರೀಡಂ ಪಾರ್ಕಿನಲ್ಲಿ ನಡೆಯುತ್ತಿರುವ ವಾಲ್ಮೀಕಿ ಸಮುದಾಯದ ಪ್ರತಿಭಟನೆಗೆ ನಟ ಕಿಚ್ಚ ಸುದೀಪ್ ಅವರು ಬೆಂಬಲ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ವಿಡಿಯೋ ಮಾಡಿರುವ ನಟ, ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ. ಪರಿಶಿಷ್ಠ ಪಂಗಡದವರಿಗೆ ಶೇ.7.5ರಷ್ಟು ಮಿಸಲಾತಿಗೆ ಒತ್ತಾಯಿಸಿ ಧರಣಿ ನಡೆಯುತ್ತಿದ್ದು, ಸ್ವಾಮೀಜಿ ಹಾಗೂ ಸ್ನೇಹಿತರಿಗೆ ನನ್ನ ಬೆಂಬಲವಿದೆ ಎಂದು ಸುದೀಪ್ ಹೇಳಿದ್ದಾರೆ. ಇದನ್ನೂ ಓದಿ: ಸ್ವಾಮೀಜಿ ಒಪ್ಪಿದ್ರೆ ಈಗಲೇ ರಾಜೀನಾಮೆ ಕೊಡುತ್ತೇನೆ- ಶ್ರೀರಾಮುಲು
Advertisement
ಶ್ರೀ ಶ್ರೀ ಶ್ರೀ ಪರಮಪೂಜ್ಯ ಪ್ರಸನ್ನಾನಂದ ಮಹಾಸ್ವಾಮಿಗಳಿಗೆ ಆ ಎಲ್ಲಾ ವಿದ್ಯಾರ್ಥಿಗಳ ಪರವಾಗಿ ಧನ್ಯವಾದಗಳು.
???????? pic.twitter.com/KUkbXI8t5z
— Kichcha Sudeepa (@KicchaSudeep) June 25, 2019
Advertisement
ವಿಡಿಯೋದಲ್ಲೇನಿದೆ?
ಶ್ರೀ ಪರಮಪೂಜ್ಯ ಪ್ರಸನ್ನಾನಂದ ಮಹಾಸ್ವಾಮಿಗಳು 16 ದಿನಗಳಿಂದ ನೂರಾರು ಮೈಲಿ ಪಾದಯಾತ್ರೆ ಮಾಡಿ ಇಂದು ಬೆಂಗಳೂರಿಗೆ ತಲುಪಿದ್ದಾರೆ. ವಿದ್ಯಾರ್ಥಿಗಳ ಭವಿಷ್ಯಕ್ಕೋಸ್ಕರ ಒಳ್ಳೆಯ ಉದ್ದೇಶವನ್ನಿಟ್ಟುಕೊಂಡು ಈ ಕೆಲಸ ಮಾಡಿದ್ದಾರೆ. ಇದನ್ನು ಒಂದು ಒಳ್ಳೆಯ ಛಲ ಎಂದರೆ ತಪ್ಪಾಗಲ್ಲ. ಅದಕ್ಕೆ ಸಾವಿರಾರು ಜನ ಹೆಜ್ಜೆಗೆ ಹೆಜ್ಜೆ ಇಟ್ಟು ಒಂದು ಆನೆ ಬಲ ಕೊಟ್ಟಿದ್ದೀರಿ. ಇದಕ್ಕೆ ಸರ್ಕಾರ ಆದಷ್ಟು ಬೇಗ ಸ್ಪಂದಿಸಿ ಒಂದು ಒಳ್ಳೆಯ ಪರಿಹಾರ ನೀಡುತ್ತದೆ ಎಂಬ ನಂಬಿಕೆಯಿಂದೆ. ಸ್ವಾಮಿಗಳು ಹಾಗೂ ಸ್ನೇಹಿತರೇ ನಿಮಗೆ ನನ್ನ ಬೆಂಬಲ ಕೂಡ ಇದೆ ಎಂದು ಹೇಳುತ್ತಾ, ಆ ಎಲ್ಲಾ ವಿದ್ಯಾರ್ಥಿಗಳ ಪರವಾಗಿ ನಾನು ನಿಮಗೆ ಧನ್ಯವಾದಗಳನ್ನು ತಿಳಿಸುವುದಾಗಿ ಹೇಳಿದ್ದಾರೆ.