ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kiccha Sudeep) , VikrantRona ಸಿನಿಮಾ ನಂತರ ಬ್ರೇಕ್ ತೆಗೆದುಕೊಂಡಿದ್ದರು. ಕಿಚ್ಚನ 46ನೇ ಸಿನಿಮಾ ಯಾವುದು? ಸಿನಿಮಾ ಬಗ್ಗೆ ಅಪ್‌ಡೇಟ್ ಬೇಕು ಎಂದು ಕಾದು ಕುಳಿತಿದ್ದ ಫ್ಯಾನ್ಸ್‌ಗೆ ಸುದೀಪ್ ಇದೀಗ ಗುಡ್ ನ್ಯೂಸ್ ಹಂಚಿಕೊಂಡಿದ್ದಾರೆ. ಒಟ್ಟೊಟ್ಟಿಗೆ 3 ಸಿನಿಮಾ ಒಪ್ಪಿಕೊಳ್ಳುವ ಮೂಲಕ ಸುದೀಪ್ ಸಿಹಿಸುದ್ದಿ ನೀಡಿದ್ದಾರೆ.
ಕಳೆದ ವರ್ಷ ಜುಲೈನಲ್ಲಿ ತೆರೆ ಅಪ್ಪಳಿಸಿದ `ವಿಕ್ರಾಂತ್ ರೋಣ’ ಚಿತ್ರದಲ್ಲಿ ಸುದೀಪ್ ಅಬ್ಬರಿಸಿದ್ದರು. ಚಿತ್ರಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು. ಈ ಚಿತ್ರದ ರಿಲೀಸ್ ನಂತರ ಬಿಗ್ ಬಾಸ್ ಶೋ, ಸ್ಪೋಟ್ಸ್ ಅಂತಾ ಕಿಚ್ಚ ಬ್ಯುಸಿಯಾಗಿದ್ದರು. ಕಿಚ್ಚನ ಮುಂದಿನ ಚಿತ್ರದ ಬಗ್ಗೆ ಅಪ್‌ಡೇಟ್ ಸಿಗದೇ ನಿರಾಸೆಯಲ್ಲಿದ್ದ ಅಭಿಮಾನಿಗಳಿಗೆ ಸುದೀಪ್ ಟ್ವೀಟ್ ಮಾಡುವ ಮೂಲಕ ಅಪ್‌ಡೇಟ್ ನೀಡಿದ್ದಾರೆ.
ಎಲ್ಲರಿಗೂ ನಮಸ್ಕಾರಗಳು.. `ಕಿಚ್ಚ 46′ ಕುರಿತಾಗಿ ನಿಮ್ಮ ಟ್ವೀಟ್‌ಗಳು ಮತ್ತು ಮೀಮ್‌ಗಳು ನನಗೆ ಅರ್ಥವಾಗಿದೆ. ಧನ್ಯವಾದಗಳು. ಈಗ ಇದೇ ವಿಚಾರದ ಕುರಿತಾಗಿ ಈ ಸಣ್ಣ ಸ್ಪಷ್ಟೀಕರಣವನ್ನು ನೀಡಲು ನಿರ್ಧರಿಸಿದ್ದೇನೆ. ನಾನು ವಿರಾಮ ತೆಗೆದುಕೊಂಡಿದ್ದೆ. ಇದು ನನ್ನ ವೃತ್ತಿಜೀವನದ ಮೊಟ್ಟಮೊದಲ ವಿರಾಮ. ವಿಕ್ರಾಂತ್ ರೋಣ ಚಿತ್ರದ ನಂತರ ನನಗೆ ಬ್ರೇಕ್ ಬೇಕಾಗಿತ್ತು. ಸುದೀರ್ಘವಾದ ವೇಳಾಪಟ್ಟಿ ಹೊಂದಿದ್ದ ಬಿಗ್ ಬಾಸ್ (ಒಟಿಟಿ- ಟಿವಿ) `ವಿಕ್ರಾಂತ್ ರೋಣ’ ಚಿತ್ರದಲ್ಲಿ ಭಾಗಿಯಾಗುವುದು ಶ್ರಮದಾಯಕವಾಗಿತ್ತು. ಆದ್ದರಿಂದ ಈ ವಿರಾಮ ನನಗೆ ಅಗತ್ಯವಿತ್ತು. ನನ್ನ ವಿರಾಮವನ್ನು ಆನಂದಿಸಲು ಉತ್ತಮ ಮಾರ್ಗವೆಂದರೆ ನನಗೆ ಸಂತೋಷ ನೀಡುವ ಕೆಲಸವನ್ನು ಮಾಡುವುದು.
About my Next
❤️???? pic.twitter.com/3vkCmS6FBF
— Kichcha Sudeepa (@KicchaSudeep) April 2, 2023
ಕ್ರಿಕೆಟ್ ಖಂಡಿತವಾಗಿಯೂ ನನಗೆ ವಿಶ್ರಾಂತಿ ನೀಡುವ ಕ್ರೀಡೆ. ಆ ವಲಯದಲ್ಲಿ ನಾನು ಸಂತೋಷವಾಗಿರುತ್ತೇನೆ. ಕೆಸಿಸಿಯಲ್ಲಿ ಸಮಯ ಕಳೆದಿದ್ದು ನನಗೆ ಖುಷಿ ನೀಡಿದೆ. ಇದರಿಂದ ನನಗೆ ಖಂಡಿತವಾಗಿಯೂ ಉತ್ತಮ ವಿರಾಮ ಸಿಕ್ತು ಎಂದು ನಾನು ಹೇಳಬಲ್ಲೆ. ಆದರೂ, ನನ್ನ ಸ್ಕ್ರಿಪ್ಟ್ ಚರ್ಚೆಗಳು ನನ್ನ ದೈನಂದಿನ ಜೀವನದ ಒಂದು ಭಾಗವಾಗಿತ್ತು. ಮೂರು ಸ್ಕ್ರಿಪ್ಟ್ ಅಂತಿಮಗೊಳಿಸಿದ್ದೇನೆ. ಅಂದರೆ ಮೂರು ಚಿತ್ರಗಳನ್ನು ಅಂತಿಮಗೊಳಿಸಲಾಗಿದೆ. ಎಲ್ಲಾ ಮೂರು ಸ್ಕ್ರಿಪ್ಟ್‌ಗಳಿಗೆ ಭಾರೀ ಪ್ರಮಾಣದ ಹೋಮ್ ವರ್ಕ್ನ ಬೇಡಿಕೆಯಿರುವುದರಿಂದ ಸಿದ್ಧತೆಗಳು ನಡೆಯುತ್ತಿವೆ. ಆಯಾ ತಂಡಗಳು ಹಗಲಿರುಳು ಶ್ರಮಿಸುತ್ತಿವೆ ಮತ್ತು ಶೀಘ್ರದಲ್ಲೇ ಅಧಿಕೃತವಾಗಿ ಅನೌನ್ಸ್ ಮಾಡ್ತಾರೆ. ಪ್ರೀತಿ ಹಾಗು ಅಪ್ಪುಗೆಗಳೊಂದಿಗೆ ನಿಮ್ಮ ಕಿಚ್ಚ ಎಂದು ಕಿಚ್ಚ ಸುದೀಪ್ ಟ್ವೀಟ್ ಮಾಡಿದ್ದಾರೆ.
ಟ್ವೀಟ್ ಮಾಡುವ ಮೂಲಕ ಅಭಿಮಾನಿಗಳ ಪ್ರಶ್ನೆಗೆ ಸುದೀಪ್ ಉತ್ತರಿಸಿದ್ದಾರೆ. ಬ್ಯಾಕ್ ಟು ಬ್ಯಾಕ್ 3 ಚಿತ್ರಗಳನ್ನ ಒಪ್ಪಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಸಿಹಿ ಸಮಾಚಾರವನ್ನೇ ಸುದೀಪ್ ಕೊಟ್ಟಿದ್ದಾರೆ. ಸದ್ಯದಲ್ಲೇ ತಮ್ಮ ಮುಂಬರುವ ಚಿತ್ರದ ಬಗ್ಗೆ ಅಧಿಕೃತ ಅಪ್‌ಡೇಟ್ ನೀಡಲಿದ್ದಾರೆ.