ವಿಜಯಪುರ: ಜಾತಿ ಪ್ರಮಾಣ ಪತ್ರಕ್ಕೆ ಕಿಚ್ಚ ಸುದೀಪ್ ಫೋಟೋ ಹಾಕಿ ವ್ಯಕ್ತಿಯೊಬ್ಬರು ಮುದ್ದೇಬಿಹಾಳ ತಾಲೂಕಿನ ನಾಲತವಾಡ ಉಪ ತಹಶೀಲ್ದಾರ್ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ನಾಲತವಾಡ ಹೋಬಳಿಯ ವಿರೇಶನಗರ ನಿವಾಸಿ ಸಿದ್ದಲಿಂಗಪ್ಪ ಕೋಳೂರ ಹೆಸರಲ್ಲಿ ಅರ್ಜಿ ಸಲ್ಲಿಕೆಯಾಗಿದೆ. ನಂತರ ಪರಿಶೀಲನೆ ನಡೆಸಿದಾಗ ತಮ್ಮ ಫೋಟೋದ ಬದಲಾಗಿ ಸುದೀಪ್ ಫೋಟೋವನ್ನು ಬಳಸಿರುವುದು ತಿಳಿದು ಬಂದಿದೆ. ಮಂಗಳವಾರ ಉಪ ತಹಶೀಲ್ದಾರ್ ಕಚೇರಿಯಲ್ಲಿ ಅರ್ಜಿ ಪರಿಶೀಲನೆ ಮಾಡುವ ವೇಳೆ ಈ ವಿಚಾರ ಬೆಳಕಿಗೆ ಬಂದಿದೆ.
Advertisement
Advertisement
ಆಗಿದ್ದು ಏನು?: ಸಿದ್ದಲಿಂಗಪ್ಪ ಕಾಂತಪ್ಪ ಕೋಳೂರ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳಿಗೆ ಸೇರಿದ ಜಾತಿ ಪ್ರಮಾಣಪತ್ರಕ್ಕಾಗಿ ಅರ್ಜಿ ಅಲ್ಲಿಸಿದ್ದಾರೆ. ಅರ್ಜಿಯನ್ನ ಸಲ್ಲಿಸಿ ನಂತರ ಕಡ್ಡಾಯವಾಗಿ ಅರ್ಜಿದಾರ ಫೊಟೋವನ್ನು ಹಾಕಬೇಕು. ಆದರೆ ಅರ್ಜಿಗಳನ್ನು ಡೌನ್‍ಲೋಡ್ ಮಾಡಿ ನೋಡಿದಾಗ ಸುದೀಪ್ ಫೋಟೋ ಕಂಡು ಬಂದಿದೆ. ಇದನ್ನು ನೋಡಿ ಉಪ ತಹಶೀಲ್ದಾರ್ ದಂಗಾಗಿದ್ದು, ಸುದೀಪ್ ಫೋಟೋ ಹೇಗೆ ಬಂತು ಎಂದು ಪರಿಶೀಲಿಸಿ ಅಂತಾ ಬಸವರಾಜ ಭದ್ರಣ್ಣವರಿಗೆ ಸೂಚಿಸಿದ್ದಾರೆ.
Advertisement
ಆಗ ಸಿದ್ದಲಿಂಗಪ್ಪ ಕೋಳೂರ ನಾಗಬೇನಾಳದಲ್ಲಿ ಹೊಸದಾಗಿ ಸಾಮಾನ್ಯ ಸೇವಾಕೇಂದ್ರವನ್ನ ಪ್ರಾರಂಭಿಸಿದ್ದು, ತಾವೇ ಅರ್ಜಿ ಸಿದ್ಧ ಪಡಿಸಿ ಅದಕ್ಕೆ ಬೇಕಾದ ನಮೂನೆಯಲ್ಲಿ ಜಾತಿ ಪ್ರಮಾಣ ಪತ್ರವನ್ನ ಸಿದ್ಧ ಪಡಿಸಿದ್ದಾರೆ. ನಂತರ ತಾವೇ ತಮ್ಮ ಫೋಟೋ ಬದಲು ಪ್ರಾಯೋಗಿಕವಾಗಿ ಸುದೀಪ್ ಫೋಟೋ ಹಾಕಿದ್ದಾರೆ. ಆದರೆ ನಾಡಕಚೇರಿಗೆ ಆನ್‍ಲೈನ್‍ನಲ್ಲಿ ಅರ್ಜಿ ರವಾನಿಸುವಾಗ ತನ್ನ ಚಿತ್ರವನ್ನು ಅಪ್ಲೋಡ್ ಮಾಡದೇ ಸುದೀಪ್ ಚಿತ್ರವನ್ನು ಹಾಕಿ ಎಡವಟ್ಟು ಮಾಡಿಕೊಂಡಿದ್ದಾರೆ. ಇದನ್ನು ಓದಿ: ರಾಜಕೀಯಕ್ಕೆ ಬರ್ತಾರಾ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್?
Advertisement