ಹೈದರಾಬಾದ್: ತೆಲುಗು ಸೂಪರ್ ಸ್ಟಾರ್ ಜೂನಿಯರ್ ನಂದಮೂರಿ ರಾಮ್ ರಾವ್ ದಂಪತಿಗೆ ಎರಡನೇ ಮಗುವಾಗಿದ್ದು, ಅವರ ಮನೆಗೆ ಹೊಸ ಅತಿಥಿ ಆಗಮನವಾಗಿದೆ.
ನಂದಮೂರಿ ಪತ್ನಿ ಲಕ್ಷ್ಮಿ ಪ್ರಣತಿ ಅವರು ಗುರುವಾರ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ದಂಪತಿಗೆ ಈಗಾಗಲೇ ಐದು ವರ್ಷದ ಅಭಯ್ ರಾಮ್ ಮಗನಿದ್ದಾನೆ. ತಮಗೆ ಮಗುವಾದ ಸಂತಸವನ್ನು ಎನ್.ಟಿ.ಆರ್ ಟ್ವಿಟ್ಟರ್ ಮೂಲಕ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೇ `ನನಗೆ ಗಂಡು ಮಗು ಜನಿಸಿದೆ. ನಮ್ಮ ಕುಟುಂಬ ಈಗ ದೊಡ್ಡದಾಗುತ್ತಿದೆ’ ಎಂದು ಬರೆದು ಕೊಂಡಿದ್ದಾರೆ.
Advertisement
Advertisement
ಈಗಾಗಲೇ ನಂದಮೂರಿ ಅವರ ಎರಡನೇ ಮಗುವಿನ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಒಂದು ಕಡೆ ಮಗುವಿನ ಫೊಟೋ ಮತ್ತೊಂದು ಕಡೆ ಎನ್.ಟಿ.ಆರ್ ಫೋಟೋ ಹಾಕಲಾಗಿದೆ. ಆದರೆ ಆ ಮಗು ಅವರದ್ದ ಇಲ್ಲವಾ ಎಂದು ಖಚಿತ ಮಾಹಿತಿ ತಿಳಿದು ಬಂದಿಲ್ಲ. ಆದರೆ ಮಗುವಿನ ಫೋಟೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.
Advertisement
2011ರಲ್ಲಿ ಎನ್ ಟಿಆರ್ ಮತ್ತು ಲಕ್ಷ್ಮಿ ಪ್ರಣತಿ ಅವರ ಮದುವೆ ನೆರವೇರಿತ್ತು. ಈ ದಂಪತಿ ಎರಡನೇ ಸಲ ಹೆಣ್ಣು ಮಗುವಿನ ನಿರೀಕ್ಷೆಯಲ್ಲಿದ್ದು, ಆ ಮಗುವಿಗೆ ಎನ್.ಟಿ.ಆರ್ ತಮ್ಮ ಅಜ್ಜಿಯ ಹೆಸರು ಇಡಬೇಕೆಂದು ನಿರ್ಧರಿಸಿದ್ದರು ಈ ಹಿಂದೆ ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾಗಿತ್ತು.
Advertisement
ಎನ್.ಟಿ.ಆರ್ ಟ್ವಿಟ್ಟರ್ ನಲ್ಲಿ ತಂದೆಯಾದ ಬಗ್ಗೆ ಹೇಳಿದ ಕೂಡಲೇ ಅನೇಕ ನಟ-ನಟಿಯರು ಮತ್ತು ಸಿನಿಮಾರಂಗದವರು ಶುಭಾಶಯವನ್ನು ತಿಳಿಸಿದ್ದಾರೆ. ಎನ್ ಟಿಆರ್ ಅನೇಕ ತೆಲುಗು ಸಿನಿಮಾಗಳನ್ನು ಮಾಡಿ ಯಶಸ್ಸುಕಂಡಿದ್ದು, ಟಾಲಿವುಡ್ ನ ಬೇಡಿಕೆಯ ನಟರಾಗಿದ್ದಾರೆ. ಸದ್ಯಕ್ಕೆ ಎನ್.ಟಿ.ಆರ್ `ಅರವಿಂದ ಸಮೇಧಾ’ ಮತ್ತು ರಾಜಮೌಳಿ ನಿರ್ದೇಶನದ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
The family grows bigger. It’s a BOY!
— Jr NTR (@tarak9999) June 14, 2018