‘ಆರ್ಆರ್ಆರ್’ (RRR) ಚಿತ್ರದ ಲೈವ್ ಕಾನ್ಸರ್ಟ್ ಕಾರ್ಯಕ್ರಮ ಲಂಡನ್‌ನಲ್ಲಿ ಮೇ 11ರಂದು ಅದ್ಧೂರಿಯಾಗಿ ಜರುಗಿದ್ದು, ಜ್ಯೂ.ಎನ್‌ಟಿಆರ್ ಕೂಡ ಭಾಗವಹಿಸಿದ್ದರು. ಈ ವೇಳೆ, ನಟನೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಫ್ಯಾನ್ಸ್ ಮುಗಿಬಿದ್ದಿದ್ದಾರೆ. ಅಭಿಮಾನಿಗಳ ಅತೀರೇಕದ ವರ್ತನೆಗೆ ಕಂಡು ನಟ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:ರಾಕೇಶ್ ಅಕಾಲಿಕ ಮರಣ ನೋವು ತಂದಿದೆ: ಯೋಗರಾಜ್ ಭಟ್
ಲಂಡನ್‌ನ ರಾಯಲ್ ಆಲ್ಬರ್ಟ್ ಹಾಲ್‌ನಲ್ಲಿ ‘ಆರ್‌ಆರ್‌ಆರ್’ ಚಿತ್ರದ ಲೈವ್ ಕಾನ್ಸರ್ಟ್ ನಡೆದಿದೆ. ಜ್ಯೂ.ಎನ್‌ಟಿಆರ್ (Jr.NTR) ಕೂಡ ಭಾಗಿಯಾಗಿ ಎಂಜಾಯ್ ಮಾಡಿದ್ದಾರೆ. ಕಾರ್ಯಕ್ರಮದ ಬಳಿಕ ನಟನ ಜೊತೆಗೆ ಸೆಲ್ಫಿಗಾಗಿ ಫ್ಯಾನ್ಸ್ ಮುಗಿಬಿದ್ದಿದ್ದಾರೆ. ನಿಮ್ಮೆಲ್ಲರಿಗೂ ಫೋಟೋ ತೆಗೆದುಕೊಳ್ಳಲು ಅವಕಾಶ ಕೊಡುತ್ತೇನೆ ಆತುರಪಡಬೇಡಿ ಎಂದು ತಾಳ್ಮೆಯಿಂದಲೇ ಹೇಳಿದ್ದಾರೆ. ನಟನ ಮಾತಿಗೆ ಕ್ಯಾರೇ ಎನ್ನದೇ ನಟನತ್ತ ಗುಂಪು ಗುಂಪಾಗಿ ಕೆಲ ಅಭಿಮಾನಿಗಳು ಸೇರಿದ್ದಾರೆ. ಹೀಗಾಗಿ ಜ್ಯೂ.ಎನ್‌ಟಿಆರ್ ಕೋಪದಿಂದಲೇ ರಿಯಾಕ್ಟ್ ಮಾಡಿದ್ದಾರೆ. ಬಳಿಕ ಬಾಡಿಗಾರ್ಡ್ ಸಹಾಯದಿಂದ ಸ್ಥಳದಿಂದ ನಟ ತೆರಳಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಇದನ್ನೂ ಓದಿ:ರಾಕೇಶ್ ಸಾವಿನ ಸುದ್ದಿ ಅರಗಿಸಿಕೊಳ್ಳೋಕೆ ಆಗ್ತಿಲ್ಲ: ‘ಬಿಗ್ ಬಾಸ್’ ಲೋಕೇಶ್ ಭಾವುಕ
‘ಆರ್‌ಆರ್‌ಆರ್’ ಚಿತ್ರ 2022ರಲ್ಲಿ ಸಿನಿಮಾ ರಿಲೀಸ್ ಆಗಿತ್ತು. ರಾಜಮೌಳಿ ನಿರ್ದೇಶನದಲ್ಲಿ ರಾಮ್ ಚರಣ್, ಜ್ಯೂ.ಎನ್‌ಟಿಆರ್, ಆಲಿಯಾ ಭಟ್ ನಟಿಸಿದ್ದರು.
ಪ್ರಸ್ತುತ ಪ್ರಶಾಂತ್ ನೀಲ್ ಜೊತೆಗಿನ ಹೊಸ ಸಿನಿಮಾದಲ್ಲಿ ತಾರಕ್ ಬ್ಯುಸಿಯಾಗಿದ್ದಾರೆ. ವಿಭಿನ್ನ ಪಾತ್ರದಲ್ಲಿ ನಟ ಕಾಣಿಸಿಕೊಳ್ತಿದ್ದಾರೆ.