ಟಾಲಿವುಡ್ (Tollywood) ನಟ ಜ್ಯೂ.ಎನ್‌ಟಿಆರ್ (Jr.Ntr) ಮೇ 20ರಂದು 41ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ತಿದ್ದಾರೆ. ಈ ಹಿನ್ನೆಲೆ ಆಂಧ್ರಪ್ರದೇಶದ ದೇವಸ್ಥಾನವೊಂದಕ್ಕೆ ಜ್ಯೂ.ಎನ್‌ಟಿಆರ್ 12.5 ಲಕ್ಷ ರೂ. ದೇಣಿಗೆ ನೀಡಿದ್ದಾರೆ.
Advertisement
ಆಂಧ್ರಪ್ರದೇಶದ ಕೋನಸೀಮಾ ಜಿಲ್ಲೆಯ ಶ್ರೀಭದ್ರಕಾಳಿ ಹಾಗೂ ವೀರಭದ್ರ ಸ್ವಾಮಿ ದೇವಸ್ಥಾನಕ್ಕೆ ‘ದೇವರ’ ಚಿತ್ರದ ನಟ ಜ್ಯೂ.ಎನ್‌ಟಿಆರ್ 12.5 ಲಕ್ಷ ರೂ. ಹಣವನ್ನು ದೇಣಿಗೆ ಆಗಿ ನೀಡಿದ್ದಾರೆ. ಈ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
Advertisement
Advertisement
ಜ್ಯೂ.ಎನ್‌ಟಿಆರ್ ಹುಟ್ಟುಹಬ್ಬ ಸಮೀಪಿಸುತ್ತಿದ್ದಂತೆ ನಟನ ಕುಟುಂಬ ದೇಣಿಗೆ ನೀಡಿದ್ದು. ಇಂತಹ ವಿಚಾರ ಅವರಿಗೆ ಹಂಚಿಕೊಳ್ಳಲು ಇಷ್ಟವಿಲ್ಲ. ಎಲ್ಲೂ ಹೇಳಿಕೊಳ್ಳದೇ ಇದ್ದರೂ ಈ ಸುದ್ದಿ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆ ನಂತರ ಈ ವಿಚಾರ ನಿಜ ಎಂದು ಜ್ಯೂ.ಎನ್‌ಟಿಆರ್ ತಂಡ ಖಚಿತಪಡಿಸಿದೆ. ಈ ಸುದ್ದಿ ಕೇಳಿ ನಟನ ನಡೆಗೆ ಅಭಿಮಾನಿಗಳು ಹಾಡಿಹೊಗಳಿದ್ದಾರೆ. ಇದನ್ನೂ ಓದಿ:ಐಶ್ವರ್ಯಾ ರೈ ಕೈಗೆ ಪೆಟ್ಟು- ಕಾನ್ಸ್ ಚಿತ್ರೋತ್ಸವದತ್ತ ನಟಿ
Advertisement
ಅಂದಹಾಗೆ ‘ಆರ್‌ಆರ್‌ಆರ್’ ಸಿನಿಮಾದ ಸೂಪರ್ ಸಕ್ಸಸ್ ನಂತರ ಜ್ಯೂ.ಎನ್‌ಟಿಆರ್ ನಟನೆಯ ‘ದೇವರ’ ಚಿತ್ರದ ಮೇಲೆ ಅಭಿಮಾನಿಗಳಿಗೆ ಭಾರೀ ನಿರೀಕ್ಷೆಯಿದೆ. ಇದರ ನಡುವೆ ಚಿತ್ರದ ಬಗ್ಗೆ ಬಿಗ್ ಅಪ್‌ಡೇಟ್ ಸಿಕ್ಕಿದೆ. ಇದೇ ಮೇ 20ರಂದು ತಾರಕ್ ಬರ್ತ್‌ಡೇ ಆದರೆ ಒಂದು ದಿನ (ಮೇ 19) ಮುಂಚಿತವಾಗಿ ಸಾಂಗ್ ರಿಲೀಸ್ ಮಾಡುವುದಾಗಿ ಚಿತ್ರತಂಡ ತಿಳಿಸಿದೆ.
ಕೆಲವು ತಿಂಗಳುಗಳ ಹಿಂದೆ ಜ್ಯೂ.ಎನ್‌ಟಿಆರ್ ಮತ್ತು ಜಾನ್ವಿ ಕಪೂರ್ (Janhvi Kapoor) ಪಾತ್ರದ ಲುಕ್ ಅನ್ನು ಚಿತ್ರತಂಡ ಹಂಚಿಕೊಂಡಿತ್ತು. ಹಾಗಾಗಿ ಚಿತ್ರದ ಮೊದಲ ಸಾಂಗ್ ಬಗ್ಗೆ ಫ್ಯಾನ್ಸ್‌ಗೆ ನಿರೀಕ್ಷೆಯಿದೆ.
‘ದೇವರ’ ಚಿತ್ರಕ್ಕೆ ನಾಯಕಿಯಾಗುವ ಮೂಲಕ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್ ತೆಲುಗಿಗೆ ಎಂಟ್ರಿ ಕೊಡ್ತಿದ್ದಾರೆ. ಸೈಫ್ ಅಲಿ ಖಾನ್ ವಿಲನ್ ಆಗಿ ಅಬ್ಬರಿಸಲಿದ್ದಾರೆ. ಇದೇ ಅಕ್ಟೋಬರ್ 10ರಂದು ಬಹುಭಾಷೆಗಳಲ್ಲಿ ‘ದೇವರ’ (Devara Film) ಸಿನಿಮಾ ರಿಲೀಸ್ ಆಗಲಿದೆ. ಈ ಚಿತ್ರದ ಮೂಲಕ ತಾರಕ್ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡುತ್ತಿದ್ದಾರೆ.