ಜ್ಯೂ.ಎನ್‌ಟಿಆರ್ ಚಿತ್ರಕ್ಕೆ ‌’ಡ್ರ್ಯಾಗನ್’ ಟೈಟಲ್ ಇಟ್ಟ ಪ್ರಶಾಂತ್ ನೀಲ್

Public TV
1 Min Read
prashanth neel

ಟಾಲಿವುಡ್ ನಟ ಜ್ಯೂ.ಎನ್‌ಟಿಆರ್- ಪ್ರಶಾಂತ್ ನೀಲ್ (Prashanth Neel) ಕಾಂಬಿನೇಷನ್ ಸಿನಿಮಾದ ಅಪ್‌ಡೇಟ್‌ಗಾಗಿ ಅಭಿಮಾನಿಗಳು ಕಾತರದಿಂದ ಎದುರು ನೋಡ್ತಿದ್ದಾರೆ. ಹೀಗಿರುವಾಗ ಜ್ಯೂ.ಎನ್‌ಟಿಆರ್ ಚಿತ್ರದ ಬಗ್ಗೆ ಹೊಸ ವಿಚಾರವೊಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಚಿತ್ರದ ಟೈಟಲ್ ಬಗ್ಗೆ ಬಿಗ್ ಅಪ್‌ಡೇಟ್ ಸಿಕ್ಕಿದೆ.

jr ntrಜ್ಯೂ.ಎನ್‌ಟಿಆರ್ ಚಿತ್ರಕ್ಕೆ ‌’ಡ್ರ್ಯಾಗನ್’ (Dragon) ಎಂದು ಪ್ರಶಾಂತ್ ನೀಲ್ ಜಬರ್‌ದಸ್ತ್ ಆಗಿರುವ ಟೈಟಲ್ ಇಟ್ಟಿದ್ದಾರೆ. ಈ ಹಿಂದೆ ರಿಲೀಸ್ ಆಗಿರುವ ತಾರಕ್ ಪೋಸ್ಟರ್‌ಗೂ ಇದೀಗ ಇಟ್ಟಿರುವ ‘ಡ್ರ್ಯಾಗನ್’ ಟೈಟಲ್‌ಗೂ ಹೊಂದುವಂತಿದೆ. ಆದರೆ ಚಿತ್ರತಂಡದಿಂದ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

jr.ntr

ಸದ್ಯ ಜ್ಯೂ.ಎನ್‌ಟಿಆರ್ ಅವರು ವಾರ್ 2, ದೇವರ ಸಿನಿಮಾದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಈ ಎರಡು ಪ್ರಾಜೆಕ್ಟ್‌ಗಳ ನಂತರ ಪ್ರಶಾಂತ್ ನೀಲ್ ಜೊತೆಗಿನ ಚಿತ್ರವನ್ನು ಕೈಗೆತ್ತಿಕೊಳ್ಳಲಿದ್ದಾರೆ ಜ್ಯೂ.ಎನ್‌ಟಿಆರ್ ಎನ್ನಲಾಗಿದೆ.

ಜ್ಯೂ.ಎನ್‌ಟಿಆರ್ ಇದೇ ಮೇ 20ರಂದು ತಮ್ಮ 1ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ತಿದ್ದಾರೆ. ಈ ವೇಳೆ, ಪ್ರಶಾಂತ್ ನೀಲ್ ಜೊತೆಗಿನ ಸಿನಿಮಾದ ಶೂಟಿಂಗ್ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳಲಿದೆ.

Share This Article