ಬಾಲಿವುಡ್ ನಟ ಜಾನ್ ಅಬ್ರಹಾಂ (John Abraham) ಅವರು ಸಾಮಾಜಿಕ ಜಾಲತಾಣದಿಂದ ದೂರವಿರುವುದ್ಯಾಕೆ ಎಂಬುದರ ಬಗ್ಗೆ ಮಾತನಾಡಿದ್ದಾರೆ. ಸೋಷಿಯಲ್ ಮೀಡಿಯಾ ವಿಷಕಾರಿ ಎಂದು ಸಂದರ್ಶನವೊಂದರಲ್ಲಿ ನೇರವಾಗಿ ಹೇಳಿದ್ದಾರೆ. ಇದನ್ನೂ ಓದಿ:‘ಜನ ನಾಯಗನ್’ ಚಿತ್ರದ ಸ್ಪೆಷಲ್ ಸಾಂಗ್‌ನಲ್ಲಿ ಮೂವರು ಸ್ಟಾರ್ ನಿರ್ದೇಶಕರು
ಸಂದರ್ಶನವೊಂದರಲ್ಲಿ ಮಾತನಾಡಿದ ಜಾನ್ ಅಬ್ರಹಾಂ, ಸೋಶಿಯಲ್ ಮೀಡಿಯಾದಲ್ಲಿ ನಿಮ್ಮನ್ನು ಟೀಕಿಸಲು ಕಾಯುತ್ತಿರುತ್ತಾರೆ. ನಿಮಗೆ ನೋವುಂಟು ಮಾಡುವ ಅಧಿಕಾರವಿದೆ ಎಂದು ಜನರು ಭಾವಿಸುತ್ತಾರೆ. ಇಂದು ಸಾಮಾಜಿಕ ಜಾಲತಾಣ ವಿಷಕಾರಿಯಾಗಿದೆ. ನೆಗೆಟಿವಿಯಿಂದ ಕೂಡಿದೆ. ಪಬ್ಲಿಕ್ ಪಿಗರ್ ಆಗಿರುವ ಮಾತ್ರಕ್ಕೆ ಟ್ರೋಲ್‌ಗಳಿಂದ ನೋಯಿಸುತ್ತಾರೆ ಎಂದಿದ್ದಾರೆ. ಹಾಗಾಗಿ ತಾವ್ಯಾಕೆ ಸಾಮಾಜಿಕ ಜಾಲತಾಣದಲ್ಲಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಅಂದಹಾಗೆ, ಶಿವಂ ನಾಯರ್ ಅವರ ‘ದಿ ಡಿಪ್ಲೋಮ್ಯಾಟ್’ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಜಾನ್ ಅಬ್ರಹಾಂ ನಟನೆಯ ಈ ಚಿತ್ರ ಮಾ.14ರಂದು ರಿಲೀಸ್ ಆಗಲಿದೆ.