Vedaa: ವಿಲನ್ ಬಳಿಕ ಹೀರೋ ಆದ ಜಾನ್ ಅಬ್ರಹಾಂ

Public TV
1 Min Read
john Abraham

ಬಾಲಿವುಡ್ ನಟ ಜಾನ್ ಅಬ್ರಹಾಂ (John Abraham) ಈಗ ಆ್ಯಕ್ಷನ್ ಅವತಾರ ತಾಳಿದ್ದಾರೆ. ವಿಲನ್ ಬದಲು ಹೀರೋ ಆಗಿ ಜಾನ್ ರಗಡ್ ಆಗಿ ಕಾಣಿಸಿಕೊಂಡಿದ್ದಾರೆ. ಪಠಾಣ್ ವಿಲನ್ ಈಗ ‘ವೇದಾ’ಳ (Vedaa) ಕಥೆ ಹೇಳೋಕೆ ರೆಡಿಯಾಗಿದ್ದಾರೆ. ಇದನ್ನೂ ಓದಿ:ಚುಂಬನ ಎಫೆಕ್ಟ್: ‘ಫೈಟರ್’ ಸಿನಿಮಾ ವಿರುದ್ಧ ಸಿಡಿದೆದ್ದ ವಾಯುಸೇನಾ ಅಧಿಕಾರಿ

john Abraham 1

2019ರಲ್ಲಿ ಜಾನ್ ಅಬ್ರಹಾಂ- ನಿಖಿಲ್ ಅಡ್ವಾಣಿ ಕಾಂಬೋದಲ್ಲಿ ‘ಬಾಟ್ಲಾ ಹೌಸ್’ ಸಿನಿಮಾ ಗೆದ್ದಿತ್ತು. ಇದೀಗ ಮತ್ತೆ ‘ವೇದಾ’ ಎಂಬ ಸಿನಿಮಾ ಮೂಲಕ ಜಾನ್ ಅಬ್ರಾಹಂ ಹೀರೋ ಆಗಿ ನಟಿಸಿದ್ದು, ನಿಖಿಲ್ ಅಡ್ವಾಣಿ ಆ್ಯಕ್ಷನ್ ಕಟ್ ಹೇಳಿದ್ದಾರೆ. ಸದ್ಯ ಚಿತ್ರದ ಪೋಸ್ಟರ್ ರಿವೀಲ್ ಆಗಿದ್ದು, ಜಾನ್ ಅಬ್ರಾಹಂ ರಾ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಅವಳಿಗೆ ಒಬ್ಬ ರಕ್ಷಕನ ಅಗತ್ಯವಿತ್ತು. ಆಕೆಗೆ ಆಯುಧ ಸಿಕ್ಕಿತು, ಎಂದು ‘ವೇದಾ’ ಚಿತ್ರದ ಪೋಸ್ಟರ್ ಜೊತೆಗೆ ಕ್ಯಾಪ್ಷನ್ ಹಂಚಿಕೊಂಡಿದೆ ಚಿತ್ರತಂಡ. ಚಿತ್ರದಲ್ಲಿ ಅಭಿಷೇಕ್ ಬ್ಯಾನರ್ಜಿ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ‘ಬಾಟ್ಲಾ ಹೌಸ್’ ನೈಜ ಘಟನೆ ಆಧರಿಸಿ ಸಿದ್ಧವಾದ ಸಿನಿಮಾವಾಗಿತ್ತು. ವೇದಾ ಇದು ಕೇವಲ ಸಿನಿಮಾ ಅಲ್ಲ. ನೈಜ ಘಟನೆ ಆಧರಿಸಿದ ನಮ್ಮ ಸಮಾಜದ ಪ್ರತಿಬಿಂಬ. ಅಬ್ರಾಹಂ, ಶಾರ್ವರಿ ಈ ಚಿತ್ರದ ನಾಯಕ, ನಾಯಕಿಯಾಗಿ ನಟಿಸಿದ್ದಾರೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಜಾನ್ ಕಾಶ್ಮೀರದಲ್ಲಿ ‘ವೇದಾ’ ಚಿತ್ರೀಕರಣದ ಸ್ಕೆಡ್ಯೂಲ್ ಮುಗಿಸಿದ್ದರು.

ಇದೇ ಜುಲೈ 12ಕ್ಕೆ ‘ವೇದಾ’ (Vedaa) ಸಿನಿಮಾ ರಿಲೀಸ್ ಆಗುತ್ತಿದೆ. ವಿಲನ್ ಆಗಿ ನಟಿಸಿ ಗೆದ್ದಿರೋ ಜಾನ್ ಅಬ್ರಹಾಂ ಹೀರೋ ಆಗಿ ಈ ಹಿಂದೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಅವರಿಗೆ ಹೇಳಿಕೊಳ್ಳುವಂತಹ ಬ್ರೇಕ್ ಸಿಗಲಿಲ್ಲ. ಈಗ ಮತ್ತೆ ‘ವೇದಾ’ ಮೂಲಕ ಹೀರೋ ಆಗಿ ಖಡಕ್ ಎಂಟ್ರಿ ಕೊಟ್ಟಿದ್ದಾರೆ. ಜಾನ್ ಅಬ್ರಹಾಂಗೆ ಬಿಗ್ ಬ್ರೇಕ್ ಸಿಗುತ್ತಾ ಕಾಯಬೇಕಿದೆ.

Share This Article