ಪಾಕ್ ಉಗ್ರರ ನೆಲೆಗಳ ಮೇಲೆ ಭಾರತ ‘ಆಪರೇಷನ್ ಸಿಂಧೂರ’ ಮೂಲಕ ತಕ್ಕ ಪಾಠ ಕಲಿಸಿದೆ. ಉಗ್ರರ ನೆಲೆಗಳನ್ನು ಉಡೀಸ್ ಮಾಡಿರುವ ಭಾರತೀಯ ಸೇನೆಗೆ ಸುದೀಪ್ (Sudeep) ಮೆಚ್ಚುಗೆ ಸೂಚಿಸಿದ ಬೆನ್ನಲ್ಲೇ ಜಗ್ಗೇಶ್ (Jaggesh) ಕೂಡ ಕೊಂಡಾಡಿದ್ದಾರೆ. ಮೋದಿ (Narendra Modi) ಭಾರತದ ಪ್ರಚಂಡ ಎಂದು ಜಗ್ಗೇಶ್ ಕವನ ಮೂಲಕ ಧನ್ಯವಾದ ತಿಳಿಸಿದ್ದಾರೆ. ಇದನ್ನೂ ಓದಿ:ಆಪರೇಷನ್ ಸಿಂಧೂರ ಕೇವಲ ಒಂದು ಧ್ಯೇಯವಲ್ಲ ಇದು ಪವಿತ್ರ ಪ್ರತಿಜ್ಞೆ: ಸುದೀಪ್

ನುಡಿದಂತೆ ನಡೆದವ..
ಆಧುನಿಕ ಭಾರತದ ಕಲಿ
ನೊಂದ ಭಾರತೀಯ ನಲಿ..
ಹೊರ ಶತೃಗಳ ಪಕ್ಷ
ಒಳ ಶತೃಗಳು ಪಕ್ಷ
ಆಚರಿಸುವರು (ಪಿತೃ) ಪಕ್ಷ
ಸಾಮ ಬೇಧ ದಂಡ
ನಡೆಯ ರಣಭಂಡ
ಮೋದಿ ಭಾರತದ ಪ್ರಚಂಡ
ಸಮಾಧಾನವಾಗಲಿ ಪ್ರಾಣ
ತೆತ್ತ ಆತ್ಮಗಳಿಗೆ
ನಿದಿರೆ ತಪ್ಪಿದ ರಾತ್ರಿಗಳು ನಿರಂತರ ಶತೃಗಳಿಗೆ.
ಪಾಪಿಸ್ತಾನದ ಶತೃಸಂಹಾರ ಮಾಡಿದಕ್ಕೆ
ನರೇಂದ್ರ ಮೋದಿರವರಿಗೆ ಧನ್ಯವಾದ ಸೇಡಿಗೆ
 
View this post on Instagram
 
ಏ.22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಗೆ 26 ಮಂದಿ ಬಲಿಯಾಗಿದ್ದರು. ಇದೀಗ ಆಪರೇಷನ್ ಸಿಂಧೂರ ಕಾರ್ಯಚರಣೆಯಲ್ಲಿ 100ಕ್ಕೂ ಹೆಚ್ಚು ಉಗ್ರರು ಸಾವನ್ನಪ್ಪಿರಬಹುದು ಎಂದು ಅಂದಾಜಿಸಲಾಗಿದೆ.
 
					 
		 
		 
		 
		 
		 
		 
		 
		 
		