ನಟಿ ಹರ್ಷಿಕಾ ಪೂಣಚ್ಚ (Harshika Poonacha) ದಂಪತಿಗೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿ ಭುವನ್ (Bhuvan) ಜೊತೆ ನಗರ ಪೊಲೀಸ್ ಆಯುಕ್ತರ ಕಚೇರಿಗೆ ಬಂದ ಹರ್ಷಿಕಾ ದಂಪತಿ ಅಂದು ನಡೆದು ಘಟನೆಯ ಕುರಿತಂತೆ ದೂರು ದಾಖಲಿಸಿದ್ದಾರೆ. ಪೊಲೀಸರು ಕರೆ ಮಾಡಿದ ಬೆನ್ನಲ್ಲೇ ನಡೆದ ಘಟನೆಯ ಬಗ್ಗೆ ವಿವರಣೆಯನ್ನೂ ಅವರು ಕೊಟ್ಟಿದ್ದಾರೆ.
Advertisement
ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಹರ್ಷಿಕಾ, ನಿನ್ನೆ ಸಂಬಂಧಿಕರೆಲ್ಲ ಇದ್ರು ಆಗ ಪೊಲೀಸರು ಕರೆ ಮಾಡಿದ್ರು. ನಿನ್ನೆಯಿಂದ ಎಸಿಪಿ ಟಚ್ ಲ್ಲಿ ಇದ್ರು. ಆ ಟ್ವೀಟನ್ನ ನಾನೆ ಬರೆದಿದ್ದು. ದೂರು ಕೊಟ್ಟಿದ್ದೆ ತಪ್ಪಾ ಹಾಗಾದ್ರೆ. ನಾವು ಯಾವುದೇ ಪಕ್ಷದಲ್ಲಿ ಗುರುತಿಸಿಕೊಂಡಿಲ್ಲ. ನಮ್ಮ ಹಿತೈಷಿಗಳು ಕರೆ ಮಾಡಿ ದೂರು ಕೊಡುವಂತೆ ಹೇಳಿದ್ರು. ಎಸಿಪಿ ಗೀತಾ ಅವರನ್ನು ಇಂದು ಭೇಟಿಯಾಗಬೇಕಿತ್ತು. ಆದ್ರೆ ಅಲ್ಲಿ ಯಾವುದೋ ಪ್ರೊಟೆಸ್ಟ್ ಇದೆ ಅಂತ ಹೇಳಿದ್ರು. ಹೀಗಾಗಿ ಕಮಿಷನರ್ ಕಚೇರಿಗೆ ದೂರು ಕೊಡಲು ಬಂದ್ವಿ. ಈ ತರಹದ ಘಟನೆಗಳು ಬೆಂಗಳೂರಿನಲ್ಲಿ ಹಲವಾರು ನಡೆದಿದೆ. ಕರ್ನಾಟಕದಲ್ಲಿ ನಾವೆಲ್ಲ ಒಂದೆ. ಯಾವುದೇ ಏರಿಯಾಗೆ ಹೋದ್ರು ಭಯವಿಲ್ಲದೇ ಹೋಗಬೇಕು. ಅಂದು ಕರಾಮ ಹೋಟೆಲ್ ಹೋಗಿದ್ವಿ. ಊಟ ಮುಗಿಸಿ ಹೊರಬಂದಿದ್ವಿ. ಕಾರಿನಲ್ಲಿ ಕುಳಿತ 2 ಸೆಕೆಂಡಲ್ಲಿ ಇಬ್ಬರು ಬಂದ್ರು. ಇಬ್ಬರು ದೊಡ್ಡ ಗಾಡಿ ನೋಡ್ಕಂಡು ತೆಗೀರಿ ಅಂದ್ರು. ನಾನು ಪ್ಯೂಚರ್ ಮಾತನಾಡಬೇಡ ತೆಗೀತಿನಿ ಬಿಡಿ ಅಂತ ಹೇಳ್ದೆ. ಕನ್ನಡದವರಿಗೆ ಬುದ್ದಿ ಕಲಿಸಬೇಕು ಅಂತ ಅವರ ಭಾಷೆಯಲ್ಲಿ ಮಾತನಾಡಿದ್ರು. ಏಕಾಏಕಿ 20 ಜನ ಅಟ್ಯಾಕ್ ಮಾಡಿದ್ರು. ಈ ವೇಳೆ ಆರ್ ಆರ್ ನಗರ ಇನ್ಸ್ ಪೆಕ್ಟರ್ ಗೆ ಕರೆಮಾಡಿದ್ವಿ. ಅವರು ಏರು ದನಿಯಲ್ಲಿ ಮಾತನಾಡಿದ್ದಕ್ಕೆ ಅಲ್ಲಿಂದ ಪರಾರಿಯಾದ್ರು ಅಂದಿದ್ದಾರೆ.
Advertisement
Advertisement
ಕಮಿಷನರ್ (Commissioner) ಕಚೇರಿಗೆ ದೂರು ಕೊಟ್ಟ ಬಳಿಕ ಮಾತನಾಡಿದ ನಟ ಭುವನ್, ನಾವು ಕಮಿಷನರ್ ಭೇಟಿಗೆ ಬಂದಿದ್ದೆವು. ಅವರ ಇಲ್ಲದ ಕಾರಣ ಪೂರ್ವ ವಿಭಾಗದ ಹೆಚ್ಚುವರಿ ಆಯುಕ್ತರನ್ನ ಭೇಟಿಯಾದ್ವಿ. ಎಫ್ ಐ ಆರ್ ಮಾಡಿ ಕ್ರಮ ತೆಗೆದುಕೊಳ್ತಿವಿ ಅಂತ ಹೇಳಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಬೇರೆ ರೂಪ ತೆಗೆದುಕೊಳ್ಳುತ್ತದೆ ಅಂತ ದೂರು ಕೊಟ್ಟಿಲ್ಲ. ಅಂದು ಆ ಸಂದರ್ಭದಲ್ಲಿ ಹೊಯ್ಸಳ ಇತ್ತು. ಅಲ್ಲಿ ಹೋಗಿ ಅವರ ಬಳಿ ಮಾತನಾಡಿದ್ವಿ. ಆವತ್ತಿನ ಪರಿಸ್ಥಿತಿಯಲ್ಲಿ ಕಂಪ್ಲೆಂಟ್ ಕೊಡುವ ಪರಿಸ್ಥಿತಿಯಲ್ಲಿರಲಿಲ್ಲ. ತುಂಬಾ ಜನ ಪೋನ್ ಮಾಡಿ ದೂರು ಕೊಡದಿದ್ರೆ ತಪ್ಪಾಗುತ್ತೆ ಅಂತ ಹೇಳ್ತಿದ್ದಾರೆ. ಹಾಗಾಗಿ ಕಾನೂನು ಕ್ರಮ ತಗೆದುಕೊಳ್ಳಿ ಎಂದು ಕೇಳುತ್ತಿದ್ದೆವೆ ಎಂದರು.