ಬಾಲಿವುಡ್ ನಟ ಗೋವಿಂದ (Actor Govinda) ಅವರು ಸಿನಿಮಾಗಿಂತ ಹೆಚ್ಚು ವೈಯಕ್ತಿಕ ವಿಚಾರವಾಗಿಯೇ ಸುದ್ದಿಯಲ್ಲಿದ್ದಾರೆ. ಡಿವೋರ್ಸ್ ವದಂತಿಯ ನಡುವೆ ಹಾಲಿವುಡ್ (Hollywood) ಸಿನಿಮಾದಲ್ಲಿ ನಟಿಸಲು 18 ಕೋಟಿ ರೂ. ಆಫರ್ ಮಾಡಿದ್ದರ ಬಗ್ಗೆ ನಟ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ಇದನ್ನೂ ಓದಿ:ದಕ್ಷಿಣದತ್ತ ‘ಸಪ್ತಸಾಗರದ’ ಚೆಲುವೆ- ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ರುಕ್ಮಿಣಿ ಬ್ಯುಸಿ
ಸಂದರ್ಶನವೊಂದರಲ್ಲಿ ಗೋವಿಂದ ಮಾತನಾಡಿ ಈ ಹಿಂದೆ ನಾನು 21.5 ಕೋಟಿ ರೂ. ಆಫರ್ ಅನ್ನು ನಿರಾಕರಿಸಿದ್ದೆ, ಆ ಅವಕಾಶವನ್ನು ಕೈಬಿಟ್ಮೇಲೆ ನನಗೆ ಬೇಸರವಾಗಿತ್ತು. ಇನ್ನೂ ಹೀಗೆ ಒಮ್ಮೆ ಅಮೆರಿಕಗೆ ಭೇಟಿ ನೀಡಿದ್ದಾಗ ಸರ್ದಾರ್ ಸಿಕ್ಕಿದ್ದರು. ಅವರಿಗೆ ವ್ಯವಹಾರಿಕವಾಗಿ ಐಡಿಯಾವೊಂದನ್ನು ಕೊಟ್ಟಿದ್ದೆ, ಅದು ಅವರಿಗೆ ವರ್ಕೌಟ್ ಆಗಿತ್ತು. ಹೀಗೆ ಕೆಲ ವರ್ಷಗಳ ಬಳಿಕ ಅದೇ ಸರ್ದಾರ್ ಲಂಡನ್‌ನಲ್ಲಿ ಸಿಕ್ಕಿದ್ರು. ಅಂದು ಅವರೊಂದಿಗೆ ಹಾಲಿವುಡ್ ನಿರ್ದೇಶಕ ಜೇಮ್ಸ್ ಕ್ಯಾಮೆರಾನ್ (James Cameron) ಕೂಡ ಇದ್ದರು. ಅವರ ನಿರ್ದೇಶನದ ಸಿನಿಮಾದಲ್ಲಿ ನಟಿಸಲು ಸರ್ದಾರ್ ಹೇಳಿದ್ದರು.
ಹಾಗಾಗಿ ಇದರ ಬಗ್ಗೆ ಚರ್ಚಿಸಲು ಊಟಕ್ಕೆ ಕರೆದಿದ್ದೆ, ಆ ವೇಳೆ ನಾನು ಅವರಿಗೆ ‘ಅವತಾರ್’ (Avatar) ಎನ್ನುವ ಟೈಟಲ್ ಕೊಟ್ಟಿದ್ದೆ. ಈ ಚಿತ್ರದಲ್ಲಿ ಅಂಗವಿಕಲನಾಗಿ ನಟಿಸಲು ಹೇಳಿದರು ಜೇಮ್ಸ್ ಕ್ಯಾಮೆರಾನ್, ಅದಕ್ಕೆ ನಾನು ನೋ ಎಂದು ಹೇಳಿದ್ದೆ. ಅದಕ್ಕೆ ಅವರು 18 ಕೋಟಿ ರೂ. ಸಂಭಾವನೆ ಕೊಡೋದಾಗಿ ಹೇಳಿದ್ದರು. ಆದರೆ 410 ದಿನಗಳ ಕಾಲ ಮೈಗೆ ಬಣ್ಣ ಹಚ್ಚಿಕೊಂಡು ಶೂಟಿಂಗ್ ಮಾಡಬೇಕೆಂದರು. ಅದಕ್ಕೆ ನಾನು ಮೈಗೆ ಬಣ್ಣ ಹಚ್ಚಿಕೊಂಡರೇ ಆಸ್ಪತ್ರೆಗೆ ಸೇರಬೇಕಾಗುತ್ತದೆ ಎಂದು ಆ ಆಫರ್ ಅನ್ನು ರಿಜೆಕ್ಟ್ ಮಾಡಿದ್ದಾಗಿ ಗೋವಿಂದ ಹಂಚಿಕೊಂಡಿದ್ದಾರೆ.
ಇನ್ನೂ 2009ರಲ್ಲಿ ‘ಅವತಾರ್’ ಚಿತ್ರವು ರಿಲೀಸ್ ಆಗಿ ಸಕ್ಸಸ್ ಕಂಡಿತ್ತು. ಬಳಿಕ 2022ರಲ್ಲಿ ‘ಅವತಾರ್ ದಿ ವೇ ಆಫ್ ವಾಟರ್’ ಸಿನಿಮಾ ಯಶಸ್ಸು ಕಂಡಿತ್ತು.