Connect with us

Bengaluru City

ವಿಜಿ ಜೈಲಿಗೆ ಹೋಗೋದಕ್ಕೆ ಕೀರ್ತಿ ದರಿದ್ರ ಕಾಲ್ಗುಣವೇ ಕಾರಣ- ಮೊದಲ ಪತ್ನಿ ಗುಡುಗು

Published

on

ಬೆಂಗಳೂರು: `ಜಯಮ್ಮನ ಮಗ’ ದುನಿಯಾ ವಿಜಿ ಬಾಳಲ್ಲಿ ಪತ್ನಿಯರ ಫೈಟ್ ಆರಂಭವಾಗಿದೆ. ಇದೀಗ ಎರಡನೇ ಪತ್ನಿ ಕೀರ್ತಿ ಗೌಡ ವಿರುದ್ಧ ಮೊದಲ ಪತ್ನಿ ನಾಗರತ್ನ ಗುಡುಗಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮೊದಲ ಪತ್ನಿ ನಾಗರತ್ನ, ಕೀರ್ತಿ ಗೌಡ ಯಾವಾಗ ವಿಜಿ ಜೀವನದಲ್ಲಿ ಬಂದಳೋ ಅವತ್ತಿಂದ್ಲೇ ನಮ್ಮ ಮನೆಯಲ್ಲಿ ದರಿದ್ರ ಆರಂಭವಾಗಿದೆ. ಖಳನಟರಿಬ್ಬರು ನೀರು ಪಾಲಾದ್ರು. ಅವಾಗ ದೊಡ್ಡ ಸುದ್ದಿಯೇ ಆಗೋಯ್ತು. ಹೀಗೆ ಅವತ್ತಿಂದ ಬರೀ ಕೇಸ್ ಗಳೇ ಆಗಿ ಹೋಯಿತು. ಬರೀ ರಗಳೆಗಳೇ ಆಗಿ ಹೋಗಿದೆ. ಇದು ಮಕ್ಕಳ ಮೇಲೆ ಪರಿಣಾಮ ಬೀಳುತ್ತದೆ. ಕೀರ್ತಿ ಗೌಡ ಹೆಂಡತಿಯಲ್ಲ, ನಾನು ವಿಜಿ ಹೆಂಡತಿ. ಅವಳು ವಿಜಿ ಹೆಂಡತಿಯಾಗಲು ಯಾವುದೇ ಸಾಕ್ಷಿಯಿಲ್ಲ. ನಾನು ನನ್ನ ಮಕ್ಕಳ ಬಳಿ ಯಾಕೆ ಹೋಗಬಾರದು? ನಿನ್ನೆ ನನ್ನ ಮಕ್ಕಳನ್ನು ನೋಡಲು ಹೋಗಿದ್ದೆ. ಆವಾಗ ಆಕೆ ನನ್ನ ಮೇಲೆ ರೇಗಾಡಿದಳು, ಇದರಿಂದ ಸಿಟ್ಟುಗೊಂಡು ನಾನು ಆಕೆಗೆ ಎರಡೇಟು ಹೊಡೆದೆ ಅಂದ್ರು.

ನನಗೆ ಹಾಗೂ ನನ್ನ ಮಕ್ಕಳಿಗೆ ಕೊಲೆ ಬೆದರಿಕೆ ಇದೆ. ಇದರಿಂದ ನಮಗೆ ಓಡಾಡಲು ಭಯ ಆಗ್ತಿದೆ. ನಮಗೆ ಏನಾದ್ರೂ ಆದರೆ ವಿಜಿಯೇ ಜವಾಬ್ದಾರಿ. ಹೀಗಾಗಿ ಕೀರ್ತಿ ಗೌಡ ನ್ನ ಮೇಲೆ ಕೈ ಮಾಡಿದ ಕೂಡಲೇ ಗಿರಿನಗರ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದೇನೆ ಅಂತ ಹೇಳಿದ್ರು.

ಸುಮಾರು 2 ವರ್ಷದಿಂದ ಬರೀ ಕೇಸ್, ಕಂಪ್ಲೆಂಟ್, ಸ್ಟೇಷನ್ ಇದೇ ಆಗಿದೆ. ಒಬ್ರೂ ಬುದ್ಧಿ ಹೇಳುವವರು ಇಲ್ಲ. ನಾನೂ ಕೂಡ ಹೇಳಲು ತುಂಬಾನೇ ಪ್ರಯತ್ನಪಟ್ಟೆ. ಆದ್ರೆ ನಾನೇ ಕೆಟ್ಟವಳಾದೆ. ಮನೆಯಲ್ಲಿ ದೊಡ್ಡವರಿರುತ್ತಾರೆ. ಅವರಾದ್ರೂ ಸ್ವಲ್ಪ ತಿಳುವಳಿಕೆ ಹೇಳಬೇಕು. ಅವರು ಹೇಳುತ್ತಿಲ್ಲ. ದಾರಿ ತಪ್ಪಿಸಿ ಹಾಳು ಮಾಡುತ್ತಿದ್ದಾರೆ. ಒಂದು ಕಡೆ ನಾನು, ಇನ್ನೊಂದು ನನ್ನ ಮಕ್ಕಳು. ಈಗ ಯಾರೋ ಬಂದವಳು ಸ್ವಲ್ಪ ದಿವಸ ಇರುತ್ತಾಳೆ ಹೋಗುತ್ತಾಳೆ. ಅವರೆಲ್ಲ ಬರೋದು ದುಡ್ಡಿಗೆ. ಇರೋದ್ದಿಕ್ಕೆ ಸಂಸಾರ ಮಾಡವುದಿಕ್ಕೆ ಯಾರೂ ಬರಲ್ಲ. ನಮಗೆ ಮೂರು ಮಕ್ಕಳಿದ್ದಾರೆ. ನಮಗೆ ವಿಧಿಯಿಲ್ಲ ಹೀಗಾಗಿ ನಾವು ಸಂಸಾರ ಮಾಡಲೇಬೇಕು. ನಮಗೆ ಅವರು ಕೊನೆಯವರೆಗೆ ಬೇಕೇ ಬೇಕು ಅಂತ ಹೇಳಿದ್ರು.

ಇವರೆಲ್ಲ ಎಂಜಾಯ್ ಮಾಡ್ಕೊಂಡು ಎರಡು ದಿವಸ ಇದ್ದು ಹೋಗುತ್ತಾರೆ. ಇವರೆಲ್ಲ ಬುದ್ಧಿ ಹೇಳಲ್ಲ. ಬದಲಾಗಿ ಹಾದಿ ತಪ್ಪಿಸಿ ಜೈಲಿಗೆ ಕಳುಹಿಸುತ್ತಾರೆ. ಬುದ್ಧಿ ಹೇಳಲು ಒಳ್ಳೆ ಫ್ರೆಂಡ್ಸ್ ಒಬ್ಬರೂ ಬರಲ್ಲ. ಎಲ್ಲಾ ಈ ಖಚಡಗಳೇ ಬರೋದು. ಹೀಗಾಗಿ ಈ ತರ ಬೀದಿಗೆ ಬಂದು ನಿಂತುಕೊಳ್ಳುತ್ತಾರೆ. ವಿಜಿಯವರಿಗೂ ಬುದ್ಧಿ ಇಲ್ಲ. ಅವರಿಗೂ ಯಾವುದು ಸರಿ ಯಾವುದು ಸರಿ ಎನ್ನುವುದು ಗೊತ್ತಿಲ್ಲ. ನಾನು ಸರಿಯಾಗೇ ಮಾತಾಡ್ತೀನಿ. ನಾನು ಇರೋದೇ ಹೀಗೆ. ವಿಜಿಯೇನು ಚಿಕ್ಕಮಗುವೇ? ಇವತ್ತು ಹೋಗಿ ಜೈಲಿನಲ್ಲಿ ಕುಳಿತ್ತಿದ್ದಾರೆ ಅಲ್ವಾ? ಇಂದು ನನಗೆ ಹಾಗೂ ನನ್ನ ಮಕ್ಕಳಿಗೆ ಯಾರು ಗತಿ? ಒಟ್ಟಿನಲ್ಲಿ ನನ್ನ ಸಂಸಾರವೇ ಹಾದಿ ತಪ್ಪಿಸಿಬಿಟ್ಟರು ಅಂತ ಅಳಲು ತೋಡಿಕೊಂಡರು.

ಅತ್ತೆ-ಮಾವನ ವಿರುದ್ಧ ಕಿಡಿ:
ನಾನು ಡೈವರ್ಸ್ ಮಾಡಿಕೊಂಡಿಲ್ಲ. ಎಲ್ಲೂ ಒಂದು ಸಹಿ ಮಾಡಿಕೊಟ್ಟಿಲ್ಲ. 1 ರೂಪಾಯಿ ಅವರಿಂದ ದುಡ್ಡು ಇಸ್ಕೊಂಡಿಲ್ಲ. ಯಾವ ಆಸ್ತಿಗೂ ಕಾಂಪ್ರಮೈಸ್ ಆಗಿಲ್ಲ. ಏನೂ ಇಲ್ಲದೇ ಇರೋವಾಗ ಅವರ ಜೊತೆ ಬಂದಿದ್ದೀನಿ. ಏನೂ ಇಲ್ಲದೇ ಇದ್ರೂ ನಾನು ಜೀವನ ಮಾಡ್ತೀನಿ. ನನ್ನ ಮಾವ ನನ್ನ ವಿರುದ್ಧ, ನಾಗರತ್ನ ಏನಕ್ಕೂ ಬರಲ್ಲ. ಯಾಕಂದ್ರೆ ಅವಳಿಗೆ ಈಗಾಗಲೇ ಹಣ, ಆಸ್ತಿ ಎಲ್ಲ ಕೊಟ್ಬಿಟ್ಟಿದ್ದೀವಿ ಎಂದು ಸುಳ್ಳು ಹೇಳಿಕೊಂಡು ಬಂದಿದ್ದಾರೆ ಎಂದು ವಿಜಯ್ ತಂದೆಯ ವಿರುದ್ಧ ಕಿಡಿಕಾರಿದ್ರು.

ನಾನು ವಿಜಿಯವರನ್ನು ಒಳ್ಳೆಯ ಸ್ಟೇಜಲ್ಲಿ ನೋಡಬೇಕು ಅಂದುಕೊಂಡಿದ್ದೆ. ಆದ್ರೆ ಅದನ್ನು ಅವರ ಕೈಯಾರೆ ಅವರೇ ಹಾಳು ಮಾಡಿಕೊಂಡ್ರು. ಆದ್ರೆ ಅವರಿಗೆ ಬುದ್ಧಿ ಇದ್ಯೋ ಇಲ್ಲವೋ ಗೊತ್ತಿಲ್ಲ. ಅವರ ಜೊತೆಯಲ್ಲಿರೋರೇ ಅವರನ್ನು ಹಾಳು ಮಾಡಿದ್ರು. ಅವರಿಗೆ ಇರೋ ಫ್ರೆಂಡ್ಸ್ ಎಲ್ಲರೂ ಮನೆ ಹಾಳರೇ. ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಅವರ ಸಂಸಾರವನ್ನು ಸರಿಪಡಿಸೋಣ ಅಂತ ತಿಳುವಳಿಕೆ ಹೇಳೋ ಒಬ್ಬೇ ಒಬ್ಬ ಫ್ರೆಂಡ್ ಕೂಡ ಅವರಲ್ಲಿಲ್ಲ ಅಂತ ಅಂತ ವಿಜಿ ಫ್ರೆಂಡ್ಸ್ ಬಗ್ಗೆ ನಾಗರತ್ನ ಗರಂ ಆದ್ರು.

ಎದೆ ಉದ್ದ ಬೆಳೆದು ನಿಂತಿರೋ ಮಕ್ಕಳ ಅಪ್ಪ ಇಂದು ಜೈಲಿಗೆ ಹೋಗಿದ್ದಾರೆ. ಈ ಸಮಯದಲ್ಲಿ ನಾನೂ ಇಲ್ಲ ಅಂದಿದ್ದರೆ ನನ್ನ ಮಕ್ಕಳಿಗೆ ಸಮಾಧಾನ ಹೇಳೋರು ಯಾರಿದ್ದಾರೆ? ನಮಗೂ ನೋವಾಗುತ್ತೆ. ಕಾಲೇಜಿಗೆ ಹೋಗಿ ಬರುತ್ತಾರೆ. ನಾಳೆ ಅವರ ಫ್ರೆಂಡ್ಸ್ ಕೇಳುತ್ತಾರೆ. ಆವಾಗ ಅವರಿಗೂ ಬೇಸರವಾಗಲ್ವ ಅಂತ ಪ್ರಶ್ನಿಸಿದ ಅವರು, ವಿಜಯ್ ನನ್ನ ಅರ್ಥ ಮಾಡಿಕೊಳ್ಳಲಿ. ಮೊದಲಿನಂತೆ ಸಿನಿಮಾಗಳನ್ನು ಮಾಡಿ ಅವರು ಎತ್ತರಕ್ಕೆ ಬೆಳೆಯಲಿ. ಅವರಿಗೆ ನಾನು ಸಪೋರ್ಟ್ ಮಾಡುತ್ತೇನೆ. ಹಾರೈಸುತ್ತೇನೆ. ಸಂತೋಷ ಪಡುತ್ತೇನೆ ಅಂತ ಹೇಳಿದ್ರು.

ನಾನು ಅತ್ತೆ, ಮಾವ ಯಾರನ್ನೂ ನಂಬಲ್ಲ. ಯಾಕಂದ್ರೆ ಅವರೆಲ್ಲರಿಗೂ ನನ್ನ ಮಕ್ಕಳನ್ನು ಕಂಡ್ರೆ ಆಗಲ್ಲ. ಹೀಗಾಗಿ ಅವರು ನನಗೆ ಹಾಗೂ ನನ್ನ ಮಕ್ಕಳಿಗೆ ಏನ್ ಬೇಕಾದ್ರೂ ಮಾಡಬಹುದು. ಅಜ್ಜಿ-ತಾತ ಏನೂ ಕೊಡದೇ ಇದ್ರು ಪರವಾಗಿಲ್ಲ. ಅವರು ಮಕ್ಕಳಿಗೆ ಪ್ರೀತಿ ಕೊಡಬೇಕು. ಆದ್ರೆ ಅವರು ದ್ವೇಷ ಸಾಧಿಸುತ್ತಾರೆ ಅಂತ ಅವರು ದುಃಖ ತೋಡಿಕೊಂಡರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

https://www.youtube.com/watch?v=CXoYbpWrkoU

https://www.youtube.com/watch?v=ALFMC4BI448

Click to comment

Leave a Reply

Your email address will not be published. Required fields are marked *

www.publictv.in