ಕನ್ನಡದ ಡಾಲಿ ಧನಂಜಯ (Daali Dhananjay) ಹಾಗೂ ತೆಲುಗಿನ ಸತ್ಯದೇವ್ ನಟನೆಯ ‘ಜೀಬ್ರಾ’ (Zebra Film) ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಹೀಗಾಗಿ ಡಾಲಿ ಹಾಗೂ ಸತ್ಯದೇವ್ ಅಂತಿಮ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಬೆಂಗಳೂರಿನ ಮಾಲ್‌ವೊಂದರಲ್ಲಿ ನಿನ್ನೆ (ನ.19) ಪ್ರೀ- ರಿಲೀಸ್ ಕಾರ್ಯಕ್ರಮ ನಡೆಯಿತು. ಈ ಇವೆಂಟ್‌ಗೆ ಮುಖ್ಯ ಅತಿಥಿಗಳಾಗಿ ದುನಿಯಾ ವಿಜಯ್ (Duniya Vijay) ಕುಮಾರ್, ಸತೀಶ್ ನೀನಾಸಂ, ಸಪ್ತಮಿ ಗೌಡ (Sapthami Gowda), ನಾಗಭೂಷಣ್, ನವೀನ್ ಶಂಕರ್ ಭಾಗವಹಿಸಿದ್ದರು.
ದುನಿಯಾ ವಿಜಯ್ ಮಾತನಾಡಿ, ಧನಂಜಯ ಬಗ್ಗೆ ಅಪಾರವಾದ ಗೌರವಿದೆ. ತಾನು ಬೆಳೆದು ತನ್ನವವರನ್ನು ಬೆಳೆಯುಸುತ್ತಾರೆ. ಧನಂಜಯ ಬಂದ ರೂಟ್, ಸ್ಟ್ರಗಲ್, ಅವರು ಮನಸ್ಸು ನನಗೆ ಇಷ್ಟ. ‘ಸಲಗ’ ಸಿನಿಮಾದಲ್ಲಿ ಮುಖ್ಯ ಪಾತ್ರ ಮಾಡಿ ನನಗೆ ಗೆಲುವು ತಂದು ಕೊಟ್ಟಿದ್ದಾರೆ. ಸತ್ಯದೇವ್ ಕಷ್ಟುಪಟ್ಟು ದೊಡ್ಡ ಸ್ಥಾನಕ್ಕೆ ಬಂದು ನಿಂತಿದ್ದಾರೆ. ಸಿನಿಮಾಗೆ ಭಾಷೆ ಇಲ್ಲ. ಎಷ್ಟು ಖುಷಿ, ನೋವು ಹಂಚಿಕೊಳ್ಳುತ್ತೇವೆ. ‘ಜೀಬ್ರಾ’ ನಮ್ಮ ಕನ್ನಡದ ಸಿನಿಮಾ ಆಗಿದೆ. ಚಿತ್ರಕ್ಕೆ ಒಳ್ಳೆಯದಾಗಲಿ ಎಂದಿದ್ದಾರೆ. ಇದನ್ನೂ ಓದಿ:‘ಲಕ್ಷ್ಮಿ ಬಾರಮ್ಮ’ ಸೀರಿಯಲ್‌ನಲ್ಲಿ ಮಹಾ ತಿರುವು- ಕಾವೇರಿ ಅಟ್ಟಹಾಸಕ್ಕೆ ಬ್ರೇಕ್ ಹಾಕಲು ಬಂದ ಕೀರ್ತಿ
ಡಾಲಿ ಮಾತನಾಡಿ, ಕನ್ನಡ ವರ್ಷನ್ ಸಿನಿಮಾಗಳನ್ನು ನೀವು ಹೆಚ್ಚಾಗಿ ನೋಡುವುದರಿಂದ ಡಿಮ್ಯಾಂಡ್ ಕ್ರಿಯೇಟ್ ಆಗುತ್ತದೆ. ಬೈಕೊಂಡು ಕುರುವುದರಿಂದ ಯಾವುದು ಆಗುವುದಿಲ್ಲ. ಪಕ್ಕ ಕನ್ನಡ ಸಿನಿಮಾ ಎನಿಸಲು ಶಶಾಂಕ್ ಅಂಡ್ ಟೀಂ ತುಂಬಾ ಚೆನ್ನಾಗಿ ಡಬ್ ಮಾಡಿದ್ದಾರೆ. ‘ಜೀಬ್ರಾ’ ಇದೇ ನವೆಂಬರ್ 22ಕ್ಕೆ ಕನ್ನಡದಲ್ಲಿಯೂ ಬಿಡುಗಡೆಯಾಗುತ್ತಿದೆ ನೋಡಿ ಬೆಂಬಲಿಸಿ ಎಂದರು. ಸತ್ಯದೇವ್ (Satyadev) ಅವರು ಬೆಂಗಳೂರಿನಲ್ಲಿ ಕೆಲಸ ಮಾಡ್ತಿದ್ದ ದಿನಗಳನ್ನು ನೆನಪಿಸಿಕೊಂಡು ಮೆಲುಕು ಹಾಕಿದರು. ‘ಜೀಬ್ರಾ’ ಸಿನಿಮಾ ರಿಲೀಸ್‌ಗೆ ರೆಡಿಯಿದೆ. ನಿಮ್ಮ ಬೆಂಬಲ ಸಿನಿಮಾ ಮೇಲೆ ಇರಲಿದೆ ಎಂದರು.
‘ಜೀಬ್ರಾ’ ಚಿತ್ರದಲ್ಲಿ ಡಾಲಿ ಧನಂಜಯ್ ಆದಿ ಎಂಬ ಪಾತ್ರದಲ್ಲಿ ನಟಿಸಿದ್ದಾರೆ. ಈ ಪಾತ್ರಕ್ಕೆ ಒಳ್ಳೆಯ ಸ್ಕೋಪ್ ಇದೆ. ಇನ್ನೂ ಸತ್ಯದೇವ್ ಕೂಡ ಮತ್ತೊಬ್ಬ ಹೀರೋ ಆಗಿ ಅಭಿನಯಿಸಿದ್ದಾರೆ. ಸತ್ಯರಾಜ್, ಸತ್ಯ ಅಕ್ಕಲಾ, ಜೆನ್ನಿಫರ್ ಪಿಕ್ಕಿನಾಟೊ, ಸುನಿಲ್, ಪ್ರಿಯಾ ಭವಾನಿ ಶಂಕರ್ ಇನ್ನೀತರರು ತಾರಾಬಗಳದಲ್ಲಿದ್ದಾರೆ. ‘ಕೆಜಿಎಫ್’ ಮತ್ತು ‘ಸಲಾರ್’ ಖ್ಯಾತಿಯ ರವಿ ಬಸ್ರೂರ್ ಚಿತ್ರಕ್ಕೆ ಸಂಗೀತ ನೀಡಿದ್ದು, ಸತ್ಯ ಪೊನ್ಮಾರ್ ಅವರ ಛಾಯಾಗ್ರಹಣವಿದೆ.
ಈ ಚಿತ್ರವನ್ನು ಎಸ್.ಎನ್ ರೆಡ್ಡಿ, ಎಸ್ ಪದ್ಮಜಾ, ಬಾಲ ಸುಂದರಂ ಮತ್ತು ದಿನೇಶ್ ಸುಂದರಂ ನಿರ್ಮಾಣ ಮಾಡಿದ್ದಾರೆ. ತೆಲುಗು, ಕನ್ನಡ, ತಮಿಳು, ಮಲಯಾಳಂ ಭಾಷೆಗಳಲ್ಲಿ ಸಿನಿಮಾ ತೆರೆಗೆ ಬರಲಿದೆ. ‘ಜೀಬ್ರಾ’ ಸಿನಿಮಾಗೆ ಈಶ್ವರ್ ಕಾರ್ತಿಕ್ ಆ್ಯಕ್ಷನ್ ಕಟ್ ಹೇಳಿದ್ದಾರೆ.