ಕಿಚ್ಚ ಸುದೀಪ್ (Sudeep) ಅವರ ತಾಯಿ ಇಂದು (ಅ.20) ಬೆಳಗ್ಗೆ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಈ ಹಿನ್ನೆಲೆ ನಟ ದುನಿಯಾ ವಿಜಯ್ & ಟೀಮ್ ಮೌನ ಆಚರಿಸಿ ಸುದೀಪ್ ತಾಯಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಇದನ್ನೂ ಓದಿ:ಜೆಪಿ ನಗರದ ನಿವಾಸದಲ್ಲಿ ನಟ ಸುದೀಪ್ ತಾಯಿ ಅಂತಿಮ ದರ್ಶನ
ನಿರ್ದೇಶಕ ಜಡೇಶ್ ಜೊತೆ ಚಿತ್ರೀಕರಣದಲ್ಲಿ ಬ್ಯುಸಿಯಿರುವ ದುನಿಯಾ ವಿಜಯ್ (Duniya Vijay) ಅವರು ನಿಧನರಾಗಿರೋ ಸುದೀಪ್ ತಾಯಿ ಸರೋಜಾ (Saroja) ಅವರಿಗೆ ಚಿತ್ರದ ಸೆಟ್‌ನಲ್ಲಿ ಮೌನಾಚರಣೆ ಮಾಡಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ದುನಿಯಾ ವಿಜಯ್ & ಟೀಮ್ ಸರೋಜಾ ಅವರ ನಿಧನಕ್ಕೆ ಸಂತಾಪ ಸೂಚಿಸಿದೆ.
ಅಂದಹಾಗೆ, ಅನಾರೋಗ್ಯದ ಹಿನ್ನೆಲೆ ಸುದೀಪ್ ತಾಯಿ ಸರೋಜಾ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಇಂದು ಕೊನೆಯುಸಿರೆಳೆದಿದ್ದಾರೆ. ಇಂದು ಬೆಳಗ್ಗೆ 07:04ಕ್ಕೆ ನಿಧನರಾಗಿದ್ದಾರೆ. ಸದ್ಯ ಜೆಪಿ ನಗರದ ಸುದೀಪ್ ನಿವಾಸದಲ್ಲಿ ಅವರ ತಾಯಿಯ ಅಂತಿಮ ದರ್ಶನಕ್ಕೆ ಅವಕಾಶ ಮಾಡಲಾಗಿದೆ. ಬಳಿಕ ಸಂಜೆ 5 ಗಂಟೆಗೆ ವಿಲ್ಸನ್ ಗಾರ್ಡನ್‌ನಲ್ಲಿರುವ ಚಿತಾಗಾರದಲ್ಲಿ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆಯಲಿದೆ.