ಸ್ಯಾಂಡಲ್‌ವುಡ್‌ನ ಡಿಂಪಲ್ ಹೀರೋ ದಿಗಂತ್ ಮತ್ತೆ ಸುದ್ದಿಯಲ್ಲಿದ್ದಾರೆ. ಇತ್ತೀಚೆಗಷ್ಟೇ ಸಮ್ಮರ್ ಶಾಟ್ ಮಾಡುವ ವೇಳೆ ಕತ್ತು ಮತ್ತು ಬೆನ್ನಿಗೆ ಏಟು ಮಾಡಿಕೊಂಡಿದ್ದ ದಿಗಂತ್ ಈಗ ಸಂಪೂರ್ಣ ಗುಣಮುಖರಾಗಿದ್ದಾರೆ. ಆರೋಗ್ಯದಲ್ಲಿ ಚೇತರಿಕೆ ಕಂಡಿರೋ ಬೆನ್ನಲ್ಲೇ `ಗಾಳಿಪಟ 2′ ಚಿತ್ರದ ಆಡಿಯೋ ಲಾಂಚ್‌ನಲ್ಲಿ ಭಾಗಿಯಾಗಿದ್ದಾರೆ.

ಗಾಳಿಪಟ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು. ಈಗ `ಗಾಳಿಪಟ 2′ ಸಿನಿಮಾ ಸದ್ಯದಲ್ಲೇ ತೆರೆಗೆ ಬರಲಿದೆ. ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ದಿಗಂತ್, ಪವನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಚಿತ್ರದ ಆಡಿಯೋ ಕಾರ್ಯಕ್ರಮದ ಮೂಲಕ ಸುದ್ದಿಯಲ್ಲಿದೆ. ಇನ್ನು ಆ ಅವಘಡದ ಬಳಿಕ ದಿಗಂತ್ ಆಗಮಿಸಿರುವ ಮೊದಲ ಕಾರ್ಯಕ್ರಮ ಇದಾಗಿದೆ.
Live Tv
[brid partner=56869869 player=32851 video=960834 autoplay=true]


