ಟ್ರೈನಿ ವೈದ್ಯೆ ಹತ್ಯೆ ಪ್ರಕರಣ: ಅತ್ಯಾಚಾರ ಎಸಗಿರೋರ ವಿರುದ್ಧ ಕಿಡಿಕಾರಿದ ಧ್ರುವ ಸರ್ಜಾ

Public TV
1 Min Read
dhruva sarja

ಸ್ಯಾಂಡಲ್‌ವುಡ್ ನಟ ಧ್ರುವ ಸರ್ಜಾ ಅವರು ಕೋಲ್ಕತ್ತಾ ಟ್ರೈನಿ ವೈದ್ಯೆ (Kolkata Rape Murder Case) ಅತ್ಯಾಚಾರದ ಬಗ್ಗೆ ಧ್ವನಿಯೆತ್ತಿದ್ದಾರೆ. ಅತ್ಯಾಚಾರ ಎಸಗಿರೋರನ್ನು ನಡು ರಸ್ತೆಯಲ್ಲಿ ಸುಟ್ಟಾಕಬೇಕು ಎಂದು ಧ್ರುವ ಸರ್ಜಾ (Actor Dhruva Sarja) ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:ಸಂಗಾತಿ ಇಲ್ಲದೆ ಬದುಕೋದು ಕಷ್ಟ- ಮದುವೆ ಬಗ್ಗೆ ಮಾತನಾಡಿದ ಕಂಗನಾ

dhruva sarja 2

‘ಎಲ್ಲರಿಗೂ ನಮಸ್ಕಾರ. ನಾನು ಮಾರ್ಟಿನ್​ ಸಿನಿಮಾದ ಪ್ರಚಾರದಲ್ಲಿ ಇದ್ದೇನೆ ಎಂಬುದು ಹೌದು. ಮಾರ್ಟಿನ್​ ಸಿನಿಮಾವನ್ನು ಒಂದು ನಿಮಿಷ ಪಕ್ಕಕ್ಕೆ ಇಟ್ಟುಬಿಡೋಣ. ಇವತ್ತು ವಿಡಿಯೋ ಮಾಡುತ್ತಿರುವ ಉದ್ದೇಶ, 2024ರ ಆಗಸ್ಟ್​ 14ರ ಅಂಕಿ-ಅಂಶಗಳ ಪ್ರಕಾರ, ಭಾರತದಲ್ಲಿ ಪ್ರತಿ 16 ನಿಮಿಷಕ್ಕೆ ಒಂದು ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ನಡೆಯುತ್ತಿದೆ. ಎಲ್ಲಿ ಹೆಣ್ಣು ಮಕ್ಕಳಿಗೆ ಮರ್ಯಾದೆ, ಗೌರವ ಇರುವುದಿಲ್ಲವೋ ಅಲ್ಲಿ ಭಗವಂತನೇ ಇರುವುದಿಲ್ಲ ಎಂದು ಧ್ರುವ ಸರ್ಜಾ ಹೇಳಿದ್ದಾರೆ.

dhruva sarja 2

ಗಂಡು ಮಕ್ಕಳನ್ನು ಬೆಳೆಸುವಾಗ ಅವರಿಗೆ 3 ವಿಷಯಗಳನ್ನು ಹೇಳಿ ಕೊಡಬೇಕು. ಮೊದಲು ಹೆಣ್ಣು ಮಕ್ಕಳನ್ನು ಹೇಗೆ ಸೇಫ್ ಆಗಿ ನೋಡಿಕೊಳ್ಳಬೇಕು. ಹೆಣ್ಣಿಗೆ ಬೆಂಬಲವಾಗಿ ನಿಲ್ಲಬೇಕು. ಆ ನಂತರ ಹೆಣ್ಣು ಮಗಳಿಗೆ ಹೇಗೆ ಗೌರವಿಸಬೇಕು ಎಂಬುದನ್ನು ಹೇಳಿ ಕೊಡಬೇಕು ಎಂದಿದ್ದಾರೆ ನಟ ಧ್ರುವ.

ಈ ರೇಪಿಸ್ಟ್‌ಗಳು ಕಾನೂನು ಕೈಗೆ ಸಿಕ್ಕಿ ಕಾನೂನ್ಮತಕವಾಗಿ ಶಿಕ್ಷೆಯಾಗಲಿ ಎಂದು ಕೇಳಿಕೊಳ್ಳುತ್ತೇನೆ. ಅವರಿಗೆ ಈ ರೀತಿ ಶಿಕ್ಷೆ ಕೊಡುವುದರಿಂದ ತೃಪ್ತಿ ಅನ್ನೋದು ಆಗುವುದಿಲ್ಲ. ಇಂತಹವರನ್ನು ನಡು ರಸ್ತೆಯಲ್ಲಿ ನಿಲ್ಲಿಸಿ ಜೀವಂತವಾಗಿ ಸುಟ್ಟು ಹಾಕಬೇಕು. ಅದು ಆದ್ರೂನು ತೃಪ್ತಿ ಅನ್ನೋದು ಆಗಲ್ಲ. ನಮ್ಮ ಮನೆಯಲ್ಲಿ ನನಗೂ ಒಬ್ಬಳು ಹೆಣ್ಣು ಮಗಳಿದ್ದಾಳೆ. ಯಾರದ್ದೋ ಮನೆ ಮಗಳಿಗೆ ಅನ್ಯಾಯವಾಗಿದೆ ಎಂದಾಗ ನಾವು ಅವರ ಜೊತೆ ನಿಲ್ಲಬೇಕು. ಅತ್ಯಾಚಾರ ಆಗಿರುವ ವೈದ್ಯೆ ಹುಡುಗಿಗೆ ನ್ಯಾಯ ಸಿಗಬೇಕು. ನಾವೆಲ್ಲಾ ಒಗ್ಗಟಾಗಿ ನಿಲ್ಲಬೇಕು ಎಂದು ಧ್ರುವ ಸರ್ಜಾ ಕೋಲ್ಕತ್ತಾ ಪ್ರಕರಣದ ಬಗ್ಗೆ ಖಂಡಿಸಿ ಮಾತನಾಡಿದ್ದಾರೆ.

ಅಂದಹಾಗೆ, ಕೆಲ ದಿನಗಳ ಹಿಂದೆ ಕೋಲ್ಕತ್ತಾದ ಪ್ರಕರಣದ ಬಗ್ಗೆ ನಟಿ ಆಶಿಕಾ ರಂಗನಾಥ್‌ (Ashika Ranganath) ಕಿಡಿಕಾರಿದ್ದರು. ಆರೋಪಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಆಕ್ರೋಶ ಹೊರಹಾಕಿದ್ದರು.

Share This Article