ಸ್ಯಾಂಡಲ್‌ವುಡ್ ನಟ ಧ್ರುವ ಸರ್ಜಾ (Dhruva Sarja) ಅವರು ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಗಣೇಶ ಹಬ್ಬದಂದು (Ganesha Festival) ಧ್ರುವ ಪತ್ನಿ ಪ್ರೇರಣಾ(Prerana) ಗಂಡು ಮಗುವಿಗೆ(Baby Boy) ಜನ್ಮ ನೀಡಿದ್ದಾರೆ. ಇದೇ ಖುಷಿಯಲ್ಲಿ ಮಾಧ್ಯಮಕ್ಕೆ ನಟ ಪ್ರತಿಕ್ರಿಯೆ ನೀಡಿದ್ದಾರೆ.
Advertisement
ಮಗನ ಆಗಮನದ ಸಂತಸದ ಬಗ್ಗೆ ಧ್ರುವ ಮಾತನಾಡಿ, ಗಣೇಶ ಹಬ್ಬದ ದಿನ ಮನೆಗೆ ಮಗ ಬಂದಿದ್ದಾನೆ. ಮನೆಯಲ್ಲಿ ಎಲ್ಲರೂ ಖುಷಿಯಾಗಿದ್ದಾರೆ. ಮಗ ಹುಟ್ಟಿದ ತಕ್ಷಣ ಫೋನ್ ತೆಗೆದು ಚಿರು ನಂಬರ್‌ಗೆ ಡಯಲ್ ಮಾಡಲು ಹೋಗಿದ್ದೆ, 2 ನಿಮಿಷ ಬೇಕಾಯ್ತು ಸುಧಾರಿಸಿಕೊಳ್ಳಲು ಎಂದು ನಟ ಭಾವುಕರಾಗಿದ್ದಾರೆ. ಇದನ್ನೂ ಓದಿ:‘ಯಂಗ್ ಮ್ಯಾನ್’ ಇದು ಸಿಂಗಲ್ ಟೇಕ್ ಸಿನಿಮಾ
Advertisement
Advertisement
ಇವತ್ತು 11 ಕಡೆ ಗಣೇಶನ ದರ್ಶನ ಮಾಡಲು ಹೋಗಬೇಕಿತ್ತು. ಆದರೆ ಮುಂದೆ ಮಾಡ್ತಿನಿ, ಮಗನ ಆಗಮನ ಖುಷಿ ಕೊಟ್ಟಿದೆ. ತಾಯಿ ಮತ್ತು ಮಗ ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಧ್ರುವ ಮಾತನಾಡಿದ್ದಾರೆ.
Advertisement
ಧ್ರುವ ಸರ್ಜಾ ಪತ್ನಿ ಪ್ರೇರಣಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಬೆಂಗಳೂರಿನ ಬಸವನಗುಡಿಯ ಖಾಸಗಿ ಆಸ್ಪತ್ರೆಯಲ್ಲಿ ಮಗುವಿನ ಜನನವಾಗಿದೆ. ಮೊನ್ನೆಯಷ್ಟೇ ಪ್ರೇರಣಾ ಅವರ ಸೀಮಂತ ಕಾರ್ಯಕ್ರಮವನ್ನು ಅದ್ಧೂರಿಯಾಗಿ ನೆರವೇರಿಸಿದ್ದರು. ಈ ದಂಪತಿಗೆ ಈಗಾಗಲೇ ಒಂದು ಹೆಣ್ಣು ಮಗುವಿದೆ.