Captain Miller Trailer: ಮಾಸ್‌ ಆಗಿ ಎಂಟ್ರಿ ಕೊಟ್ರು ಧನುಷ್‌-ಶಿವಣ್ಣ

Public TV
1 Min Read
captain miller 2

ಕಾಲಿವುಡ್‌ನ (Kollywood) ಪ್ರತಿಭಾನ್ವಿತ ನಟ ಧನುಷ್‌ಗೆ (Dhanush) ಇಂದು (ಜುಲೈ 28) ಹುಟ್ಟುಹಬ್ಬದ ಸಂಭ್ರಮ. ಇದೇ ಖುಷಿಯ ನಡುವೆ ತಮ್ಮ ಫ್ಯಾನ್ಸ್‌ಗೆ ಧನುಷ್ ಸಿಹಿಸುದ್ದಿ ನೀಡಿದ್ದಾರೆ. ಕ್ಯಾಪ್ಟನ್ ಮಿಲ್ಲರ್ ಟ್ರೈಲರ್ ಮೂಲಕ ಧನುಷ್ ಮಾಸ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ಧನುಷ್‌ಗೆ ಶಿವಣ್ಣ ಸಾಥ್ ನೀಡಿದ್ದಾರೆ.

dhanush 1 4

ಬ್ರಿಟಿಷರ ವಿರುದ್ಧ ಹೋರಾಡುವ ಕ್ಯಾಪ್ಟನ್ ಆಗಿ ಧನುಷ್ ಮಿಂಚಿದ್ದಾರೆ. ಎಂದೂ ನಟಿಸಿರದ ಪಾತ್ರದಲ್ಲಿ ನಟ ಕಾಣಿಸಿಕೊಂಡಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ (Shivarajkumar) ಅವರು ಕುದುರೆ ಏರಿ ಮಸ್ತ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ಸೂಪರ್ ಗಿಫ್ಟ್ ನೀಡಿದ್ದಾರೆ. ಇದನ್ನೂ ಓದಿ:‘ಬಿಗ್ ಬಾಸ್ ಶೋ’ ಸೆನ್ಸಾರ್ ಕುರಿತು ಹೈಕೋರ್ಟ್ ಕಳವಳ

Shivarajkumar 2
ಅರುಣ್ ಮಾದೇಶ್ವರನ್ ಅವರು ‘ಕ್ಯಾಪ್ಟನ್ ಮಿಲ್ಲರ್’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಜಿವಿ ಪ್ರಕಾಶ್ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಧನುಷ್, ಶಿವರಾಜ್‌ಕುಮಾರ್ ಜೊತೆ ಸಂದೀಪ್ ಕಿಶನ್, ಪ್ರಿಯಾಂಕಾ ಮೋಹನ್ ಮೊದಲಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.

ಇದೇ ಡಿಸೆಂಬರ್ 15ಕ್ಕೆ ಕ್ರಿಸ್‌ಮಸ್ ಹಬ್ಬದ ಸಮಯದಲ್ಲಿ ಮನರಂಜನೆ ನೀಡಲು ‘ಕ್ಯಾಪ್ಟನ್ ಮಿಲ್ಲರ್’ ಟೀಮ್ ಸಜ್ಜಾಗಿದೆ. ಧನುಷ್- ಶಿವಣ್ಣ ಜುಗಲ್‌ಬಂದಿ, ಸಂದೀಷ್ ಕಿಶನ್, ಪ್ರಿಯಾಂಕಾ ಮೋಹನ್ ನಟನೆ ಎಲ್ಲವೂ ನೋಡುಗರಿಗೆ ಖುಷಿ ಕೋಡೋದು ಪಕ್ಕಾ. ಶಿವಣ್ಣ ಪಾತ್ರದ ಬಗ್ಗೆ ಹೆಚ್ಚಿನ ಅಪ್‌ಡೇಟ್ ಸಿಕ್ಕಿಲ್ಲ. ಸದ್ಯದಲ್ಲೇ ಈ ಬಗ್ಗೆ ಮಾಹಿತಿ ಸಿಗಲಿದೆ.

[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article