‘ಬಿಗ್ ಬಾಸ್’ ಮನೆಯಲ್ಲಿ (Bigg Boss Kannada 11) ಈ ವಾರ ಫ್ಯಾಮಿಲಿ ವೀಕ್ ನಡೆಯುತ್ತಿದೆ. ಸ್ಪರ್ಧಿಗಳ ಕುಟುಂಬಸ್ಥರು ಮನೆಗೆ ಎಂಟ್ರಿ ಕೊಡುತ್ತಿದ್ದಾರೆ. ಮೋಕ್ಷಿತಾ, ಉಗ್ರಂ ಮಂಜು, ರಜತ್, ಭವ್ಯಾ, ತ್ರಿವಿಕ್ರಮ್ ಮನೆಯವರೆಲ್ಲಾ ಬಿಗ್ ಬಾಸ್‌ಗೆ ಬಂದು ಖುಷಿಪಟ್ಟಿದ್ದಾರೆ. ಇದೀಗ ಧನರಾಜ್ ಪತ್ನಿ ಪ್ರಜ್ಞಾ ದೊಡ್ಮನೆಗೆ ಕಾಲಿಟ್ಟಿದ್ದಾರೆ. ಈ ವೇಳೆ, ಧನರಾಜ್ ಅವರು ಪತ್ನಿ ಬಳಿ ಎರಡನೇ ಮಗುವನ್ನು ಹೊಂದುವ ಬಗ್ಗೆ ಚರ್ಚೆ ನಡೆಸಿದ್ದಾರೆ.
ಜನವರಿ 2ರ ಎಪಿಸೋಡ್‌ನಲ್ಲಿ ಧನರಾಜ್ ಅವರ ಕುಟುಂಬ ದೊಡ್ಮನೆಗೆ ಬಂದಿದೆ. ಅಷ್ಟೇ ಅಲ್ಲ, ಅಲ್ಲಿ ಸಾಕಷ್ಟು ಫನ್ ಆಕ್ಟಿವಿಟಿ ನಡೆದಿದೆ. ಧನರಾಜ್ ಅವರದ್ದು ಕೂಡು ಕುಟುಂಬ ಆಗಿದ್ದು, ಮೊದಲಿಗೆ ಇಡೀ ಫ್ಯಾಮಿಲಿ ಬಿಗ್ ಬಾಸ್‌ಗೆ ಆಗಮಿಸಿ ಧನರಾಜ್ ಜೊತೆ ಹುಲಿ ಡ್ಯಾನ್ಸ್ ಮಾಡಿ ಖುಷಿಪಟ್ಟಿದ್ದಾರೆ. ಆ ನಂತರ ಧನರಾಜ್‌ಗೆ ಧೈರ್ಯ ತುಂಬಿ ಆಲ್ ಬಿ ಬೆಸ್ಟ್ ಹೇಳಿ ಮನೆಯಿಂದ ನಿರ್ಗಮಿಸಿದ್ದಾರೆ. ಇದನ್ನೂ ಓದಿ:ಸಿದ್ದಗಂಗಾ ಮಠಕ್ಕೆ ನಟ ಡಾಲಿ ಧನಂಜಯ್ ಭೇಟಿ
ಆ ನಂತರ ಧನರಾಜ್ ಅವರ ಪತ್ನಿ ಪ್ರಜ್ಞಾ ಆಚಾರ್ ಎಂಟ್ರಿ ಕೊಟ್ಟಿದ್ದಾರೆ. ಈ ವೇಳೆ, ಐಶ್ವರ್ಯಾಗೆ ಯಾವಾಗಲೂ ಉತ್ತಮ ಕೊಡುತ್ತಾ ಇದ್ರಿ. ಏನು ಸಮಾಚಾರ ಅವರಿಗೆ ಲೈನ್ ಹೊಡೀತಾ ಇದ್ರಿ ಅಂತ ಡೌಂಟ್ ನನಗೆ ಎಂದು ಧನರಾಜ್‌ಗೆ ಪತ್ನಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಆ ನಂತರ ಇತರೆ ಸ್ಪರ್ಧಿಗಳನ್ನು ಪತ್ನಿಗೆ ಪರಿಚಯಿಸಿದ ಬಳಿಕ ಕೆಲ ಕಾಲ ಪತ್ನಿ ಜೊತೆ ವೈಯಕ್ತಿಕ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.
‘ಬಿಗ್ ಬಾಸ್’ ಮನೆಯ ಮುಖ್ಯದ್ವಾರದ ಎದುರು ಕುಳಿತುಕೊಳ್ಳಲು ಜಾಗವಿದೆ. ಅದು ಧನರಾಜ್ ಹಾಗೂ ಹನುಮಂತ ಅವರ ಫೇವರಿಟ್ ಜಾಗ. ಅಲ್ಲಿಯೇ ಕುಳಿತು ಧನರಾಜ್ ಅವರು ಕ್ಯಾಪ್ಟನ್ ಆಗುವ, ಉತ್ತಮ ಪಡೆಯುವ ಹಾಗೂ ಕಿಚ್ಚನ ಚಪ್ಪಾಳೆ ಪಡೆಯುವ ಕನಸು ಕಂಡಿದ್ದರು. ಅದು ನಿಜವಾಗಿದೆ ಎಂದು ಈ ವಿಚಾರವನ್ನು ಅವರು ಪತ್ನಿ ಬಳಿ ಹೇಳಿಕೊಂಡಿದ್ದಾರೆ. ಅದಕ್ಕೆ ಹೌದಾ, ಹಾಗಾದರೆ ಈಗೇನು ಕೇಳಿಕೊಳ್ಳುತ್ತೀರಿ ಎಂದು ಧನರಾಜ್‌ಗೆ ಪತ್ನಿ ಕೇಳಿದ್ದಾರೆ. ಆಗ ಧನರಾಜ್ ಅವರು ಮುಚ್ಚು ಮರೆ ನೇರವಾಗಿ ಮಾತನಾಡಿದ್ದಾರೆ.
ನನಗೆ ಎರಡನೇ ಮಗು ಬೇಕು ಎಂದಾಗ ಪ್ರಜ್ಞಾ ಅವರು ಎಂತ ಮರ್ರೆ ನೀವು ಎಂದು ನಾಚಿ ನೀರಾದರು. ಆಗ ಧನರಾಜ್, ನೀನು ರೆಡಿ ಇಲ್ವ? ಬೇಡ್ವಾ? ಎಂದು ಕೇಳಿದರು. ಈಗ ಮಾತನಾಡೋದು ಬೇಡ, ಇದನ್ನೆಲ್ಲ ಮನೆಗೆ ಬಂದು ಮಾತಾಡಬೇಕಲ್ವ ಎಂದರು ಪ್ರಜ್ಞಾ. ಆ ಬಳಿಕ ಧನರಾಜ್ ಅವರು ಸೈಲೆಂಟ್ ಆದರು. ಆ ನಂತರ ಮನೆಗೆ ಬಂದ ಮುದ್ದು ಮಗಳನ್ನು ಎತ್ತಿ ಖುಷಿಪಟ್ಟರು.