ನಟ ದರ್ಶನ್ (Darshan) ಅವರಿಗೆ ಡೆವಿಲ್ (Devil Film) ಸಿನಿಮಾದ ಚಿತ್ರೀಕರಣ ವೇಳೆ ಕೈಗೆ ಪೆಟ್ಟಾಗಿತ್ತು. ಮೊನ್ನೆಯಷ್ಟೇ ಮೈಸೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಅವರ ಕೈಗೆ ಸರ್ಜರಿ (Hand Surgery) ಮಾಡಲಾಗಿತ್ತು. ಚಿಕಿತ್ಸೆಯ ನಂತರ ವೈದ್ಯರು ಅವರಿಗೆ ಒಂದು ತಿಂಗಳ ವಿಶ್ರಾಂತಿಗೆ (Rest) ಸೂಚಿಸಿದ್ದಾರಂತೆ.
Advertisement
ಶಸ್ತ್ರ ಚಿಕಿತ್ಸೆಯ ನಂತರ ಮತ್ತೆ ಡೆವಿಲ್ ಸಿನಿಮಾದ ಶೂಟಿಂಗ್ ನಲ್ಲಿ ದರ್ಶನ್ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಕಡ್ಡಾಯವಾಗಿ ವೈದ್ಯರು ವಿಶ್ರಾಂತಿಗೆ ಸೂಚಿಸಿದ್ದರಿಂದ ಅದನ್ನು ಅವರು ಪಾಲಿಸಲೇಬೇಕಿದೆ ಎಂದು ಅವರು ಆಪ್ತರು ತಿಳಿಸಿದ್ದಾರೆ. ಹಾಗಾಗಿ ಡೆವಿಲ್ ಸಿನಿಮಾದ ಶೂಟಿಂಗ್ ಮುಂದಕ್ಕೆ ಹೋಗುವುದು ಅನಿವಾರ್ಯವಾಗಿದೆ.
Advertisement
Advertisement
ಏ.4ರಂದು ಮಂಡ್ಯದಲ್ಲಿ ನಡೆದ ಸುಮಲತಾ ಅವರ ಬಹಿರಂಗ ಸಭೆಯಲ್ಲಿ ದರ್ಶನ್ ಕೂಡ ಭಾಗಿಯಾಗಿದ್ದರು. ಈ ವೇಳೆ, ದರ್ಶನ್ ಅವರೇ ತಾವು ಶಸ್ತ್ರ ಚಿಕಿತ್ಸೆಗೆ ಒಳಗಾಗಬೇಕಿದೆ ಎಂದು ಹೇಳಿಕೊಂಡಿದ್ದರು. ಸಹಜವಾಗಿಯೇ ಅಭಿಮಾನಿಗಳಲ್ಲಿ ಆತಂಕ ಮನೆ ಮಾಡಿತ್ತು. ಈಗ ಯಶಸ್ವಿಯಾಗಿ ಆಪರೇಷನ್ ಮುಗಿದಿದೆ.
Advertisement
‘ಡೆವಿಲ್’ ಸಿನಿಮಾದ ಸಾಹಸ ಸನ್ನಿವೇಶ ಶೂಟಿಂಗ್ ಸಮಯದಲ್ಲಿ ಅವರ ಕೈಗೆ ಏಟು ಬಿದ್ದಿತ್ತು. ಕೈಗೆ ಬೆಲ್ಟ್ ಕಟ್ಟಿಕೊಂಡು ಈವರೆಗೂ ಓಡಾಡುತ್ತಿದ್ದರು. ವೈದ್ಯರ ಸಲಹೆ ಮೇರೆಗೆ ದರ್ಶನ್ ಆಪರೇಷನ್ ಮಾಡಿಸಿದ್ದಾರೆ. ಶಸ್ತ್ರಚಿಕಿತ್ಸೆಯ ನಂತರ ನಟ ವಿಶ್ರಾಂತಿ ಪಡೆಯುತ್ತಿರುವ ವಿಚಾರ ಕೇಳಿ ಅಭಿಮಾನಿಗಳಿಗೂ ಖುಷಿಯಾಗಿದೆ.