– ವಿಲ್ಸನ್ ಗಾರ್ಡನ್ ನಾಗನಿಗೂ ಶಾಕ್ ಕಾದಿದ್ಯಾ?
– ಯರ‍್ಯಾರು ಯಾವ ಜೈಲಿಗೆ ಶಿಫ್ಟ್?
ಬೆಂಗಳೂರು: ಜೈಲಲ್ಲಿ ವಿಶೇಷ ಪ್ರಕರಣದಲ್ಲಿ ಡಿ-ಗ್ಯಾಂಗ್‌ಗೆ ಬಿಗ್ ಶಾಕ್ ಎದುರಾಗಿದೆ. ಇಷ್ಟು ದಿನ ಪರಪ್ಪನ ಅಗ್ರಹಾರ ಜೈಲಲ್ಲಿ ಒಟ್ಟಿಗಿದ್ದ ದರ್ಶನ್ ಗ್ಯಾಂಗ್ ಈಗ ದಿಕ್ಕಾಪಾಲಾಗುತ್ತಿದೆ. ನಟ ದರ್ಶನ್‌ರನ್ನು (Darshan) ಬಳ್ಳಾರಿ ಸೆಂಟ್ರಲ್ ಜೈಲ್‌ಗೆ ಶಿಫ್ಟ್ ಮಾಡಲು 24ನೇ ಎಸಿಎಂಎಂ ಕೋರ್ಟ್ ಆದೇಶ ನೀಡಿದೆ.
Advertisement
ನಟಿ ಪವಿತ್ರಾಗೌಡ ಹಾಗೂ ಇನ್ನಿಬ್ಬರನ್ನು ಹೊರತುಪಡಿಸಿ ಪರಪ್ಪನ ಅಗ್ರಹಾರ ಜೈಲಲ್ಲಿದ್ದ ದರ್ಶನ್ ಗ್ಯಾಂಗ್‌ನ ಇನ್ನಿತರೆ ಆರೋಪಿಗಳನ್ನು ರಾಜ್ಯದ ವಿವಿಧ ಜೈಲುಗಳಿಗೆ ಶಿಫ್ಟ್ ಮಾಡುವಂತೆ ನಿರ್ದೇಶನ ನೀಡಿದೆ. ಯಾವುದೇ ಕ್ಷಣದಲ್ಲಿ ನಟ ದರ್ಶನ್ ಸೇರಿ ಇತರೆ ಆರೋಪಿಗಳನ್ನು ವಿವಿಧ ಜೈಲುಗಳಿಗೆ ಶಿಫ್ಟ್ ಮಾಡುವ ಕೆಲಸ ನಡೆಯಲಿದೆ. ಇದನ್ನೂ ಓದಿ: ಜಿಂದಾಲ್‌ಗೆ ಭೂ ಮಾರಾಟ ಪ್ರಕರಣ: ಕಾಂಗ್ರೆಸ್ಸಿಗರಿಗೂ, ಹೈಕಮಾಂಡಿಗೂ ಸಂದಾಯ ಆಗಿರಬಹುದು – ಸಿ.ಟಿ ರವಿ
Advertisement
Advertisement
ಇದಕ್ಕಾಗಿ ಬೆಂಗಳೂರಿನ ಜೈಲು, ಬಳ್ಳಾರಿ ಜೈಲು ಸೇರಿ ವಿವಿಧ ಕಾರಾಗೃಹಗಳಲ್ಲಿ ಅಗತ್ಯ ತಯಾರಿಗಳು ನಡೆದಿವೆ. ಹಗಲಿನಲ್ಲಿ ದರ್ಶನ್ ಸ್ಥಳಾಂತರ ಮಾಡಲು ಮುಂದಾದರೆ, ಅವರ ಅಭಿಮಾನಿಗಳು ದಾರಿಯುದ್ದಕ್ಕೂ ಅಡ್ಡಿ ಮಾಡಬಹುದು ಎಂಬ ಕಾರಣಕ್ಕೆ ಇಂದು ರಾತ್ರಿಯೇ ದರ್ಶನ್‌ರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲು ಸಿದ್ದತೆಗಳು ನಡೆದಿವೆ. ಈ ಮೂಲಕ ಕೋರ್ಟ್ ಅನುಮತಿ ಪಡೆದು ಸಿಎಂ ಸಿದ್ದರಾಮಯ್ಯ ಹೇಳಿದಂತೆಯೇ ಮಾಡಿದ್ದಾರೆ.
Advertisement
ಜೈಲು ನಿಯಮಗಳ ಉಲ್ಲಂಘನೆ ಆರೋಪ ಸಂಬಂಧ ನಟ ದರ್ಶನ್‌ರನ್ನು ಕಾರಗೃಹದಲ್ಲೇ ವಿಚಾರಣೆಗೆ ಒಳಪಡಿಸಲು ಪೊಲೀಸರು ಕೋರ್ಟ್ ಅನುಮತಿ ಪಡೆದುಕೊಂಡಿದ್ದಾರೆ. ಒಂದೊಮ್ಮೆ ತನಿಖೆಗೆ ಸಹಕರಿಸದಿದ್ದರೆ ವಶಕ್ಕೆ ಪಡೆದು ವಿಚಾರಣೆ ನಡೆಸಲು ಪೊಲೀಸರು ತೀರ್ಮಾನಿಸಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ನಗರ ಪೊಲೀಸ್ ಆಯುಕ್ತರು ಪರಪ್ಪನ ಅಗ್ರಹಾರಕ್ಕೆ ಭೇಟಿ ಪರಿಶೀಲಿಸಿದರು. ಇದನ್ನೂ ಓದಿ: ಬೈರತಿ ಸುರೇಶ್ ದುರ್ಯೋಧನ, ದುಶ್ಯಾಸನ ಇದ್ದಂತೆ: ಏಕವಚನದಲ್ಲೇ ಹೆಚ್.ವಿಶ್ವನಾಥ್ ವಾಗ್ದಾಳಿ
ಡಿ-ಗ್ಯಾಂಗ್ ದಿಕ್ಕಾಪಾಲು..!
ಎ-1 – ಪವಿತ್ರಾ ಗೌಡ – ಪರಪ್ಪನ ಅಗ್ರಹಾರ ಜೈಲು (ಈಗಾಗಲೇ ಇದ್ದಾರೆ)
ಎ-2 – ದರ್ಶನ್ – ಬಳ್ಳಾರಿ ಜೈಲು
ಎ-3 – ಪವನ್ – ಮೈಸೂರು ಜೈಲು
ಎ-4 – ರಾಘವೇಂದ್ರ – ಮೈಸೂರು ಜೈಲು
ಎ-5 – ನಂದೀಶ್ – ಮೈಸೂರು ಜೈಲು
ಎ-6 – ಜಗದೀಶ್ – ಶಿವಮೊಗ್ಗ ಜೈಲು
ಎ-7 – ಅನುಕುಮಾರ್ – ಪರಪ್ಪನ ಅಗ್ರಹಾರ ಜೈಲು (ಈಗಾಗಲೇ ಇದ್ದಾರೆ)
ಎ-8 – ರವಿಶಂಕರ್ – ತುಮಕೂರು ಜೈಲು (ಈಗಾಗಲೇ ಇದ್ದಾರೆ)
ಎ-9 – ಧನರಾಜ್ – ಧಾರವಾಡ ಜೈಲು
ಎ-10 – ವಿನಯ್ – ವಿಜಯಪುರ ಜೈಲು
ಎ-11 – ನಾಗರಾಜ್ – ಕಲಬುರಗಿ ಜೈಲು
ಎ-12 – ಲಕ್ಷ್ಮಣ್ – ಶಿವಮೊಗ್ಗ ಜೈಲು
ಎ-13 – ದೀಪಕ್ – ಪರಪ್ಪನ ಅಗ್ರಹಾರ ಜೈಲು (ಈಗಾಗಲೇ ಇದ್ದಾರೆ)
ಎ-14 – ಪ್ರದೋಷ್ – ಬೆಳಗಾವಿ ಜೈಲು
ಎ-15 – ಕಾರ್ತಿಕ್ – ತುಮಕೂರು ಜೈಲು (ಈಗಾಗಲೇ ಇದ್ದಾರೆ)
ಎ-16 – ಕೇಶವಮೂರ್ತಿ – ತುಮಕೂರು ಜೈಲು (ಈಗಾಗಲೇ ಇದ್ದಾರೆ)
ಎ-17 – ನಿಖಿಲ್‌ನಾಯಕ್ – ತುಮಕೂರು ಜೈಲು (ಈಗಾಗಲೇ ಇದ್ದಾರೆ)