ಬೆಂಗಳೂರು: ಸ್ಯಾಂಡಲ್ವುಡ್ನ ಬಹುನಿರೀಕ್ಷಿತ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ರಾಬರ್ಟ್’ ಸಿನಿಮಾಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಇದೀಗ ದರ್ಶನ್ ತಮ್ಮ ಅಭಿಮಾನಿಗಳಿಗೆ ಚಿತ್ರಕ್ಕೆ ಸಂಬಂಧಿಸಿದಂತೆ ಒಂದು ಸಿಹಿ ಸುದ್ದಿ ನೀಡಿದ್ದಾರೆ.
ಹೌದು.’ರಾಬರ್ಟ್’ ಚಿತ್ರದ ಶೂಟಿಂಗ್ ಯಶಸ್ವಿಯಾಗಿ ಸಂಪೂರ್ಣವಾಗಿದೆ. ಈ ಖುಷಿಯ ವಿಚಾರವನ್ನು ದರ್ಶನ್ ಟ್ವೀಟ್ ಮಾಡುವ ಮೂಲಕ ಅಭಿಮಾನಿಗಳ ಬಳಿ ಶೇರ್ ಮಾಡಿಕೊಂಡಿದ್ದಾರೆ.
“ರಾಬರ್ಟ್ ಸಿನಿಮಾದ ಚಿತ್ರೀಕರಣ ಮುಕ್ತಾಯವಾಗಿದೆ. ಏಪ್ರಿಲ್ ತಿಂಗಳಲ್ಲಿ ನಿಮ್ಮ ಮುಂದೆ ಬರಲು ನಾವ್ ರೆಡಿ. ನಿಮ್ಮ ದಾಸ ದರ್ಶನ್” ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಇಡೀ ಚಿತ್ರದ ತಂಡದ ಜೊತೆಗೆ ದರ್ಶನ್ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದು, ಆ ಫೋಟೋವನ್ನು ಟ್ವಿಟ್ಟರಿನಲ್ಲಿ ಹಂಚಿಕೊಂಡಿದ್ದಾರೆ. ದರ್ಶನ್ ಶೇರ್ ಮಾಡಿರುವ ಫೋಟೋದಲ್ಲಿ ಫಾರ್ಮಲ್ ಲುಕ್ನಲ್ಲಿ ದಚ್ಚು ಮಿಂಚಿದ್ದು, ಹಿಂದೆ ಬ್ಯಾಗ್ರೌಂಡ್ ನಲ್ಲಿ LOVE ಎಂದು ಬರೆದಿರುವ ಅಕ್ಷರಗಳು ಕಾಣಿಸುತ್ತಿದೆ.
ಈ ಮೂಲಕ ‘ರಾಬರ್ಟ್’ ಸಿನಿಮಾ ಮುಂದಿನ ತಿಂಗಳ ತೆರೆಗೆ ಬರುವುದು ಖಚಿತವಾಗಿದೆ. ಈ ಸಿನಿಮಾದ ಹಾಡನ್ನು ವಿದೇಶದಲ್ಲಿ ಶೂಟಿಂಗ್ ಮಾಡಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿತ್ತು. ಆದರೆ ಕೊರೊನಾ ವೈರಸ್ನಿಂದಾಗಿ ವಿದೇಶಕ್ಕೆ ಹೋಗುವುದನ್ನು ಚಿತ್ರತಂಡ ಕ್ಯಾನ್ಸಲ್ ಮಾಡಿತ್ತು. ಕೊನೆಗೆ ವಿದೇಶಿ ಲೊಕೇಶನ್ ರೀತಿಯ ಗುಜರಾತ್ನ ಕಚ್ನಲ್ಲಿ ಸ್ಥಳ ಸಿಕ್ಕ ಕಾರಣ ಭಾರತದಲ್ಲೇ ಶೂಟಿಂಗ್ ಮಾಡಿ ಮುಗಿಸಲಾಗಿದೆ.
Shooting wrapped up for #Roberrt today ????
ಏಪ್ರಿಲ್ ತಿಂಗಳಲ್ಲಿ ನಿಮ್ಮ ಮುಂದೆ ಬರಲು ನಾವ್ ರೆಡಿ.
ನಿಮ್ಮ ದಾಸ ದರ್ಶನ್@TharunSudhir @umap30071 @StarAshaBhat pic.twitter.com/sOMpGFhhq6
— Darshan Thoogudeepa (@dasadarshan) March 12, 2020
‘ರಾಬರ್ಟ್’ ಸಿನಿಮಾದಲ್ಲಿ ದರ್ಶನ್ ಮೂರು ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಈ ಸಿನಿಮಾದ ಮೇಲೆ ಅಭಿಮಾನಿಗಳಲ್ಲಿ ಕುತೂಹಲ ಮೂಡಿದೆ. ಈ ಸಿನಿಮಾವನ್ನು ನಿರ್ದೇಶಕ ತರುಣ್ ಸುಧೀರ್ ನಿರ್ದೇಶನ ಮಾಡಿದ್ದು, ದರ್ಶನ್ಗೆ ನಾಯಕಿಯಾಗಿ ನಟಿ ಆಶಾ ಭಟ್ ಅಭಿನಯಿಸಿದ್ದಾರೆ.