ಡಿ ಬಾಸ್(D Boss) ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ. ವರಮಹಾಲಕ್ಷ್ಮಿ ಹಬ್ಬದಂದು ಬಹುನಿರೀಕ್ಷಿತ ‘ಕಾಟೇರ’ (Kaatera) ಸಿನಿಮಾದ ಪೋಸ್ಟರ್ ರಿಲೀಸ್ ರಿವೀಲ್ ಮಾಡಿದ್ದಾರೆ. ದರ್ಶನ್- ಆರಾಧನಾ ಜೊತೆಯಾಗಿರುವ ಫೋಟೋ ರಿವೀಲ್ ಮಾಡಲಾಗಿದೆ. ಡಿ ಬಾಸ್ ಲುಕ್ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಇದನ್ನೂ ಓದಿ:ಕುಟುಂಬದೊಂದಿಗೆ ವರಮಹಾಲಕ್ಷ್ಮಿ ಹಬ್ಬ ಆಚರಿಸಿದ ನಿಖಿಲ್
Advertisement
ರಾಕ್ಲೈನ್ ವೆಂಕಟೇಶ್ (Rockline Venkatesh) ನಿರ್ಮಾಣದ ‘ಕಾಟೇರ’ ಸಿನಿಮಾದ ಪೋಸ್ಟರ್ ಲುಕ್ನಿಂದಲೇ ಕುತೂಹಲ ಮೂಡಿಸುತ್ತಿದೆ. ಕಾಟೇರ ಸೈಕಲ್ ಏರಿ ಪ್ರಭಾವತಿಯನ್ನು ಮುಂದೆ ಕೂರಿಸಿಕೊಂಡಿದ್ದಾನೆ. ಆಕೆಯ ಕೈಯಲ್ಲಿ ಲೇಖನಿ ಪುಸ್ತಕ ಇದೆ. ಮತ್ತೊಂದು ಕಡೆ ಸೈಕಲ್ ಹ್ಯಾಂಡಲ್ನಲ್ಲಿ ರಕ್ತ ಸುರಿಸುತ್ತಿರುವ ಮಚ್ಚು ತೂಗಾಡುತ್ತಿದೆ. ಈ ಪೋಸ್ಟರ್ ಮೂಲಕ ಒಂದೊಳ್ಳೆ ಸಂಗತಿಯನ್ನು ತಂಡ ತೋರಿಸಲು ಹೊರಟಿರುವುದು ಸ್ಪಷ್ಟವಾಗಿ ತಿಳಿಯುತ್ತಿದೆ.
Advertisement
ಖಡ್ಗಕ್ಕಿಂತ ಹರಿತವಾದ ಆಯುಧ ಲೇಖನಿ ಅಂತಾರೆ..
‘ಪೆನ್ನೂ ಇರಲಿ ಮಚ್ಚೂ ಇರಲಿ!’
ನಾಡಿನ ಸಮಸ್ತ ಜನತೆಗೆ #ಕಾಟೇರ ಚಿತ್ರತಂಡದಿಂದ ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು. ದೇವಿ ನಿಮ್ಮೆಲ್ಲಾ ಸಕಲ ಇಷ್ಟಾರ್ಥಗಳನ್ನು ಈಡೇರಿಸಿ ಸದಾ ಕಾಪಾಡಲಿ ????
On this auspicious day, the team of #KAATERA wishes you a happy… pic.twitter.com/AT8VsDLJHN
— Tharun Sudhir (@TharunSudhir) August 25, 2023
Advertisement
ಕೆಂಪು ಬಣ್ಣದ ಚೂಟಿದಾರ್ ತೊಟ್ಟು ಎರಡು ಜಡೆ ಹಾಕಿಕೊಂಡು ಪ್ರಭಾವತಿಯಾಗಿ ಆರಾಧನಾ ಮಿಂಚಿದ್ದಾರೆ. ಇನ್ನು ಗೀಟು ಶರ್ಟ್, ಪ್ಯಾಂಟ್ ತೊಟ್ಟು ಹಣೆಗೆ ಕುಂಕುಮ ಇಟ್ಟುಕೊಂಡು ಕಾಟೇರನಾಗಿ ದರ್ಶನ್ (Darshan) ಕಾಣಿಸಿಕೊಂಡಿದ್ದಾರೆ. 70ರ ದಶಕದ ಕಥೆ ಚಿತ್ರದಲ್ಲಿದೆ. ಉಳುವವನೆ ಭೂಮಿಯ ಒಡೆಯ ಕಾಯ್ದೆ ಜಾರಿಯಾದಾಗ ಹಳ್ಳಿಗಳಲ್ಲಿ ನಡೆದ ಸಂಘರ್ಷಗಳನ್ನು ಸೇರಿಸಿ ಸಿನಿಮಾ ಕಟ್ಟಿಕೊಡಲಾಗ್ತಿದೆ. ಅನ್ಯಾಯದ ವಿರುದ್ಧ ತನ್ನದೇ ಹಾದಿಯಲ್ಲಿ ಹೋರಾಡುವ ನಾಯಕ ಕಾಟೇರನ ನೋವು ನಲಿವಿನ ಕಥೆ ಚಿತ್ರದಲ್ಲಿದೆ. ರಾಬರ್ಟ್ ಬಳಿಕ ಮತ್ತೆ ಕಾಟೇರಗೆ ತರುಣ್ ಸುಧೀರ್ (Tharun Sudhir) ನಿರ್ದೇಶನ ಮಾಡ್ತಿದ್ದಾರೆ.
Advertisement
ನಾಯಕಿ ಪ್ರಭಾವತಿ ಓದಿಕೊಂಡ ಹುಡುಗಿ. ಮಚ್ಚು ಗಿಚ್ಚು ಬೇಡ, ಅದರಿಂದ ಸಾಧಿಸುವುದು ಏನು ಇಲ್ಲ ಎನ್ನುವುದು ಆಕೆಯ ಅನಿಸಿಕೆ. ಕಾಟೇರ ಕೂಡ ಅದನ್ನು ಒಪ್ಪುತ್ತಾನೆ. ಖಡ್ಗಕ್ಕಿಂತ ಹರಿತವಾದ ಆಯುಧ ಲೇಖನಿ ಅನ್ನೋದು ನಿಜವೇ. ಆದರೂ ಕೂಡ ಪೆನ್ನಿನ ಜೊತೆಗೆ ಮಚ್ಚೂ ಇರಲಿ ಬೇಕಾಗುತ್ತದೆ. ಎಲ್ಲವನ್ನು ಓದಿನಿಂದಲೇ ಸಾಧಿಸಲು ಸಾಧ್ಯವಿಲ್ಲ, ಕೆಲವೊಮ್ಮೆ ದಂಡಂ ದಶಗುಣಂ ಮಾತನ್ನು ಪಾಲಿಸಬೇಕು ಅನ್ನೋದು ಕಾಟೇರ ಮಾರ್ಗವಾಗಿರುತ್ತದೆ.
ಈ ಚಿತ್ರದ ಮೂಲಕ ಕನಸಿನ ರಾಣಿ ಮಾಲಾಶ್ರೀ (Malashree) ಪುತ್ರಿ ಆರಾಧನಾ ರಾಮ್ (Aaradhan Ram) ಸ್ಯಾಂಡಲ್ವುಡ್ಗೆ ಪರಿಚಿತರಾಗುತ್ತಿದ್ದಾರೆ. ದರ್ಶನ್ಗೆ ನಾಯಕಿಯಾಗಿ ಚಂದನವನಕ್ಕೆ ನವನಟಿ ಪರಿಚಯವಾಗುತ್ತಿದ್ದಾರೆ. ಕ್ರಾಂತಿ ಬಳಿಕ ‘ಕಾಟೇರ’ ಅದೆಷ್ಟರ ಮಟ್ಟಿಗೆ ಮೋಡಿ ಮಾಡುತ್ತೆ ಕಾದುನೋಡಬೇಕಿದೆ.