ಬೆಂಗಳೂರು: ಕನ್ನಡ ಚಲನಚಿತ್ರರಂಗದ ಖ್ಯಾತ ನಟರಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಕಿಚ್ಚ ಸುದೀಪ್ ನಡುವಿನ ಸ್ನೇಹ ಮುರಿದು ಬಿದ್ದಿದ್ದು, ನಾವಿಬ್ಬರು ನಟರಾಗಿ ಚಿತ್ರರಂಗಕ್ಕೆ ದುಡಿಯುತ್ತೇವೆ ಎಂದು ದರ್ಶನ್ ಹೇಳಿದ್ದಾರೆ.
Advertisement
ಭಾನುವಾರ ರಾತ್ರಿ ನಟ ದರ್ಶನ್ ಅವರು, `ಇನ್ನು ಮುಂದೆ ನಾವಿಬ್ಬರು ಕನ್ನಡ ಚಿತ್ರರಂಗದ ನಟರಷ್ಟೇ. ನಮ್ಮಿಬ್ಬರ ನಡುವೆ ಯಾವುದೇ ಗೆಳತನ ಇರುವುದಿಲ್ಲ. ಕೇವಲ ನಟರಾಗಿ ಕನ್ನಡ ಚಿತ್ರರಂಗಕ್ಕಾಗಿ ದುಡಿಯುತ್ತೇವೆ. ದಯವಿಟ್ಟು ಹೆಚ್ಚಿನ ವದಂತಿಗಳು ಬೇಡ’ ಎಂದು ಟ್ವೀಟ್ ಮಾಡಿದ್ದಾರೆ.
Advertisement
Advertisement
ದೋಸ್ತಿ ಬಿರುಕಿಗೆ ಕಾರಣವೇನು?: ಕೆಲ ದಿನಗಳ ಹಿಂದೆ ದರ್ಶನ್ ಗೆ ಮೆಜೆಸ್ಟಿಕ್ ಸಿನೆಮಾದಲ್ಲಿ ನಟಿಸಲು ನಾನೇ ಅವಕಾಶ ಕೊಟ್ಟಿದ್ದು ಅಂತಾ ಸುದೀಪ್ ಹೇಳಿದ್ದರು. ಸುದೀಪ್ ಅವರ ಈ ಮಾತಿನಿಂದ ನನ್ನ ಮನಸ್ಸಿಗೆ ತುಂಬಾ ನೋವಾಗಿದೆ. ಕನ್ನಡ ಚಿತ್ರರಂಗದಲ್ಲಿ ನಾನು ಕಷ್ಟಪಟ್ಟು ಬೆಳೆದು ಮೇಲೆ ಬಂದವನು. ಹೀಗಿರುವಾಗ, `ಮೆಜೆಸ್ಟಿಕ್’ ಸಿನಿಮಾದಲ್ಲಿ ಅವರೇ ಅವಕಾಶ ಕೊಡಿಸಿದ್ದರೆ ಅದನ್ನು ಮೊದಲು ಸಾಬೀತುಪಡಿಸಲಿ. ಅದು ಬಿಟ್ಟು ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಅಲ್ಲಿ-ಇಲ್ಲಿ ಮಾತನಾಡುವುದು ಬೇಡ’ ಎಂದು ದರ್ಶನ್ ಮೌನ ಮುರಿದಿದ್ದಾರೆ.
Advertisement
`ಮೆಜೆಸ್ಟಿಕ್’ ಸಿನಿಮಾದ ಬಗ್ಗೆ ನಿರ್ದೇಶಕ ಪಿ.ಎನ್. ಸತ್ಯ ಅಥವಾ ನಿರ್ಮಾಪಕ ರಾಮಮೂರ್ತಿ ಅವರು ಈ ಮಾತನ್ನು ಹೇಳುತ್ತಿದ್ದರೆ ಒಪ್ಪಿಕೊಳ್ಳುತ್ತೇನೆ. ಅದು ಬಿಟ್ಟು ನಾನೇ ಅವಕಾಶ ಕೊಡಿಸಿದೆ ಅಂತಾ ಸುದೀಪ್ ಹೇಳಿದರೆ ಅದನ್ನು ನಾನು ಒಪ್ಪಿಕೊಳ್ಳಲು ತಯಾರಿಲ್ಲ. ನಾನು ನನ್ನ ಪಾಡಿಗೆ ಸಿನಿಮಾ ರಂಗದಲ್ಲಿ ಕೆಲಸ ಮಾಡಿಕೊಂಡು ಹೋಗುತ್ತಿದ್ದೇನೆ’ ಎಂದು ದರ್ಶನ್ ತಿಳಿಸಿದ್ದಾರೆ.
Me & Sudeep aren't Friends Anymore. We are just Actors working for Kannada Industry. No more speculations please. That's the end of it.
— Darshan Thoogudeepa (@dasadarshan) March 5, 2017
ನನಗೆ 'ಮೆಜೆಸ್ಟಿಕ್' ಸಿಗಲು ಕಾರಣ – ರಾಮಮೂರ್ತಿ, ಪಿ ಎನ್ ಸತ್ಯ ಮತ್ತು ರಮೇಶ್.https://t.co/G8M8uCDnS9 https://t.co/NfYlqVKf3E
— Darshan Thoogudeepa (@dasadarshan) March 5, 2017
ಈ ವೀಡಿಯೋಲಿ ಹೇಳಿರುವ ಪ್ರಕಾರ ಅವಕಾಶ ಸಿಗಲು ಸುದೀಪ್ ತಾವೇ ಸೂಚಿಸಿದ್ದಾರೆ ಎಂದು ಹೇಳಿದ್ದಾರೆ. ಮಾಡದಿರುವ ಕೆಲಸವನ್ನು ಮಾಡಿದ್ದೀನಿ… https://t.co/SNQYAqI1Pu
— Darshan Thoogudeepa (@dasadarshan) March 5, 2017
ಇದೇ ಮೊದಲ ಬಾರಿಗೆ ಈ ವೀಡಿಯೋ ನೋಡಿದಾಗ ನನ್ನ ಮನಸ್ಸಿಗೆ ನೋವಾದಂತೂ ನಿಜ. ಈ ಹೇಳಿಕೆ ನೀಡಿದ್ದೇಕೆ!? ಸುದೀಪ್ ರವರು ಕ್ಲಾರಿಟಿ ನೀಡಲಿ
— Darshan Thoogudeepa (@dasadarshan) March 5, 2017