– ಜೈಲಲ್ಲಿ ಒತ್ತಡ ಕಡಿಮೆ ಮಾಡಿಕೊಳ್ಳಲು ಕೊಲೆ ಆರೋಪಿ ದರ್ಶನ್ ಟೀ, ಕಾಫಿ ಮೊರೆ
ಬಳ್ಳಾರಿ: ಬಳ್ಳಾರಿ ಸೆಂಟ್ರಲ್ (Ballari Jail) ಜೈಲಿನಲ್ಲಿರುವ ಕೊಲೆ ಆರೋಪಿ ದರ್ಶನ್ (Darshan) ಒಂಬತ್ತು ದಿನದಲ್ಲಿ 735 ರೂ. ಖರ್ಚು ಮಾಡಿದ್ದಾರೆ. ಜೈಲಿನ ಕ್ಯಾಂಟೀನ್‌ನಲ್ಲಿ ಟೀ, ಕಾಫಿಗಾಗಿ ಖರ್ಚು ಮಾಡಿದ್ದಾರೆ.
ಜೈಲಿನಲ್ಲಿ ಒತ್ತಡಕ್ಕೆ ಒಳಗಾಗಿರುವ ಆರೋಪಿ ದರ್ಶನ್ ಕಾಫಿ, ಟೀ ಮೊರೆ ಹೋಗಿದ್ದಾರೆ. ಬಳ್ಳಾರಿ ಸೆಂಟ್ರಲ್ ಜೈಲ್‌ನಲ್ಲಿರುವ ಆರೋಪಿ ದರ್ಶನ್ ಅವರ ಪ್ರೀಜ್‌ನರ್ಸ್ ಪ್ರೈವೇಟ್ ಅಕೌಂಟ್‌ನಲ್ಲಿದ್ದ ಹಣ ಖರ್ಚಾಗಿದೆ. ಇದನ್ನೂ ಓದಿ: ದರ್ಶನ್ ಹೊಡೆತದಿಂದಲೇ ರೇಣುಕಾಸ್ವಾಮಿ ಸಾವು? – ಆ 3 ಹೊಡೆತಗಳ ಬಗ್ಗೆ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖ
ಪರಪ್ಪನ ಅಗ್ರಹಾರ ಜೈಲಿನಲ್ಲಿ 35,000 ರೂ. ಹಣ ದರ್ಶನ್ ಅವರ ಪಿಪಿಸಿ ಅಕೌಂಟ್‌ನಲ್ಲಿತ್ತು. ದರ್ಶನ್ ಬಳ್ಳಾರಿ ಜೈಲಿಗೆ ಬಂದ ಬಳಿಕ ಅದೇ ಹಣ ವರ್ಗಾವಣೆ ಆಗಿತ್ತು. ಇದೀಗ ಅದೇ ಹಣದಲ್ಲಿ ಕಾಫಿ, ಟೀ ಗಾಗಿ ಖರ್ಚು ಮಾಡಿದ್ದಾಗಿ ಜೈಲು ಕ್ಯಾಂಟೀನ್ ಮೂಲಗಳಿಂದ ಮಾಹಿತಿ ಸಿಕ್ಕಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ದರ್ಶನ್ ಆರಂಭದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದರು. ರಾಜಾತಿಥ್ಯ ಆರೋಪದ ಕಾರಣ ಅವರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲಾಗಿದೆ. ಇದನ್ನೂ ಓದಿ: ಮಂತ್ರಾಲಯ ಗುರುರಾಯರ ಮೊರೆ ಹೋದ ನಟ ದರ್ಶನ್ ಪತ್ನಿ