ರೇಣುಕಾಸ್ವಾಮಿ ಕೊಲೆ ಆರೋಪಿ ದರ್ಶನ್ ಜೈಲಿನಿಂದ ರಿಲೀಸ್

Public TV
1 Min Read
darshan 1 7

ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ದರ್ಶನ್‌ಗೆ (Darshan) ಇಂದು (ಅ.30) 6 ವಾರಗಳ ಕಾಲ ಮಧ್ಯಂತರ ಜಾಮೀನು (Bail) ಸಿಕ್ಕ ಬೆನ್ನಲ್ಲೇ ಬಳ್ಳಾರಿ ಜೈಲಿನಿಂದ ರಿಲೀಸ್ ಆಗಿದ್ದಾರೆ.

Darshan

ಬೆನ್ನು ನೋವಿನಿಂದ ಬಳುತ್ತಿದ್ದ ದರ್ಶನ್‌ಗೆ ಚಿಕಿತ್ಸೆಗಾಗಿ 6 ವಾರಗಳ ಕಾಲ ಬೇಲ್ ಸಿಕ್ಕಿದೆ. ಈ ಹಿನ್ನೆಲೆ ಕುಂಟುತ್ತಲೇ ದರ್ಶನ್ ಹೈ ಸೆಕ್ಯೂರಿಟಿ ಸೆಲ್‌ನಿಂದ ಹೊರಬಂದಿದ್ದಾರೆ. 5 ತಿಂಗಳುಗಳ ಕಾನೂನು ಸಮರ ನಂತರ ಇಂದು ದರ್ಶನ್ ಬಿಡುಗಡೆಯಾಗಿದ್ದಾರೆ. ಈ ವೇಳೆ, ದರ್ಶನ್ ನೋಡಲು ಸಾವಿರಾರು ಸಂಖ್ಯೆ ನಟನ ಫ್ಯಾನ್ಸ್ ಜೈಲಿನ ಬಳಿ ಜಮಾಯಿಸಿದ್ದರು.

ಅಂದಹಾಗೆ, ಜೂನ್ 11ರಂದು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ನ್ಯಾಯಾಂಗ ಬಂಧನದಲ್ಲಿದ್ದರು.

Share This Article