ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಬಾಕ್ಸಾಫೀಸ್ ಸುಲ್ತಾನ್ ಅಂತಾನೇ ಖ್ಯಾತಿ ಹೊಂದಿರೋ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್‍ಗೆ ಇಂದು 40ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮ. ಬೆಂಗಳೂರಿನ ರಾಜರಾಜೇಶ್ವರಿ ನಗರದ ತಮ್ಮ ನಿವಾಸದಲ್ಲಿ ಮಧ್ಯರಾತ್ರಿ ತಮ್ಮ ಅಭಿಮಾನಿಗಳ ಸಮುಖದಲ್ಲಿ ಕೇಕ್ ಕತ್ತಿರುಸುವ ಮೂಲಕ ತಮ್ಮ ಹುಟ್ಟು ಹಬ್ಬ ಆಚರಿಸಿಕೊಂಡರು.
- Advertisement 2-
ತಡ ರಾತ್ರಿ 2 ಗಂಟೆಯತನಕ ನೆಚ್ಚಿನ ನಟನಿಗೆ ಶುಭಾಶಯ ಕೊರಲು ಕೇಕ್ ಹಿಡಿದು ಬಾರಿ ಸಂಖ್ಯೆಯಲ್ಲಿ ಅವರ ಅಭಿಮಾನಿಗಳು ಮನೆ ಹತ್ತಿರ ಧಾವಿಸಿ ಶುಭಾಶಯ ಕೋರಿದರು. ಅಲ್ಲದೇ ಪಟಾಕಿ ಸಿಡಿಸಿ ಸಂಭ್ರಮಿಸಿದರು. ತಡ ರಾತ್ರಿಯವರೆಗೂ ಅಭಿಮಾನಿಗಳು ಬಂದು ಶುಭಾಶಯ ಕೋರಿದ್ದೇ ನಾನು ಇಷ್ಟು ವರ್ಷ ಸಂಪಾದಿಸಿದ್ದು ಅಂತ ನಟ ದರ್ಶನ್ ಹೇಳಿದರು. ದರ್ಶನ್ ಮನೆಯ ಹತ್ತಿರ ಬರೀ ಬೆಂಗಳೂರಿನವರಷ್ಟೇ ಅಲ್ಲದೇ ಮೈಸೂರು ಶಿವಮೊಗ್ಗ ಯಾದಗಿರಿ ದಾವಣಗೆರೆ ಹಾಸನ ಜಿಲ್ಲೆಗಳಿಂದಲೂ ದರ್ಶನ್ಗೆ ಶುಭಾಶಯ ಕೊರಲು ಅವರ ಮನೆ ಹತ್ತಿರ ಬಂದಿದ್ದರು ಎನ್ನಲಾಗಿದೆ.
- Advertisement 3-
- Advertisement 4-
ಹಾಡು ಉಡುಗೊರೆ: ಹುಟ್ಟುಹಬ್ಬದ ಸಂಭ್ರಮದಲ್ಲಿರೋ ಚಾಲೆಜಿಂಗ್ ಸ್ಟಾರ್ ದರ್ಶನ್ ಅವ್ರಿಗೆ ಹಾಡೊಂದು ಉಡುಗೊರೆಯಾಗಿ ನೀಡಿದ್ದಾರೆ. ಸಂಗೀತ ನಿರ್ದೇಶಕ ಸುಪ್ರೀತ್ ಗಾಂಧಾರ ಅಂಡ್ ಟೀಮ್ ಈ ಹಾಡು ರೆಡಿ ಮಾಡಿದ್ದಾರೆ. ಹಾಡಿಗೆ ಶ್ರೀರವಿ ಸಾಹಿತ್ಯ ಬರೆದಿದ್ದು, ಸಂಜೀತ್ ಹೆಗಡೆ ಕಂಠದಾನ ಮಾಡಿದ್ದಾರೆ. ದರ್ಶನ್ 40 ನೇ ಹುಟ್ಟುಹಬ್ಬದ ಸಂಭ್ರಮದಲ್ಲಿರೋ ಅಭಿಮಾನಿಗಳಿಗೆ ಈ ಹಾಡು ಮತ್ತಷ್ಟು ಕಿಕ್ ಕೊಡಲಿದೆ. ದರ್ಶನ್ ಅಭಿನಯಿಸಿರೋ ಬಹುತೇಕ ಸಿನಿಮಾದ ಟೈಟಲ್‍ಗಳನ್ನ ಹಾಡಿನಲ್ಲಿ ಬಳಸಲಾಗಿದ್ದು ಲಹರಿ ಮ್ಯೂಸಿಕ್ಸ್ ಸಂಸ್ಥೆ ಈ ಹಾಡನ್ನ ಮಾರುಕಟ್ಟೆಗೆ ತಂದಿದೆ.