– ಪವಿತ್ರಾಗೌಡ ಸೇರಿ ಐವರು ಆರೋಪಿಗಳ ಜಾಮೀನು ಆದೇಶ ಅ.14ಕ್ಕೆ ಕಾಯ್ದಿರಿಸಿದ ಕೋರ್ಟ್
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಜಾಮೀನು ನಿರೀಕ್ಷೆಯಲ್ಲಿರುವ ನಟ ದರ್ಶನ್‌ಗೆ ಮತ್ತೆ ಶಾಕ್ ಎದುರಾಗಿದೆ. ಜಾಮೀನು ಅರ್ಜಿ ವಿಚಾರಣೆಯನ್ನು ಕೋರ್ಟ್ ಗುರುವಾರಕ್ಕೆ ಮುಂದೂಡಿದೆ.
ಹತ್ಯೆ ಪ್ರಕರಣದ ಎ1 ಆರೋಪಿ ಪವಿತ್ರಾಗೌಡ ಹಾಗೂ ಆರೋಪಿಗಳಾದ ರವಿಶಂಕರ್, ದೀಪಕ್, ಲಕ್ಷ್ಮಣ್, ನಾಗರಾಜ್ ಜಾಮೀನು ಅರ್ಜಿ ವಿಚಾರಣೆಯ ಆದೇಶವನ್ನು ಅ.14ಕ್ಕೆ ಕೋರ್ಟ್ ಕಾಯ್ದಿರಿಸಿದೆ.
- Advertisement
- Advertisement
ಎಲ್ಲಾ ಆರೋಪಿಗಳು ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಘಟನಾ ಸ್ಥಳದಲ್ಲಿ ಮಣ್ಣನ್ನು ಕೂಡ ನಾವು ಸಾಕ್ಷಿಯಾಗಿ ಪರಿಗಣಿಸಲಾಗಿದೆ. ಆರೋಪಿಗಳ ಶೂ, ಚಪ್ಪಲಿ ಅಲ್ಲಿ ಇದ್ದ ಮಾದರಿಯನ್ನು ವಶಕ್ಕೆ ಪಡೆದು ಪರಿಗಣಿಸಲಾಗಿದೆ ಎಂದು ಎಸ್‌ಪಿಪಿ ಪ್ರಸನ್ನಕುಮಾರ್ ವಾದ ಮಂಡಿಸಿದರು.
ಶೂನಲ್ಲಿ ಬರೀ ರಕ್ತದ ಕಲೆಗಳು ಮಾತ್ರ ಇರಲಿಲ್ಲ. ಘಟನಾ ಸ್ಥಳದ ಮಣ್ಣು ಕೂಡ ಇದೆ ಎಂಬುದಕ್ಕೆ ಇದು ಬಲವಾದ ಸಾಕ್ಷಿ. ಅದೇ ಜಾಗದ ಮಣ್ಣಿನ ಪರೀಕ್ಷೆಯನ್ನು ಮಾಡಲಾಗಿದೆ. ಶೂ, ಮಣ್ಣು, ಜಾಗದ ಮಣ್ಣನ್ನು ಮ್ಯಾಚ್ ಮಾಡಲಾಗಿದೆ ಎಂದು ತಿಳಿಸಿದರು.