ಬೆಂಗಳೂರು: ರಾಕಿಂಗ್ ದಂಪತಿ ಐರಾ ತನ್ನ ಮೊದಲ ವರ್ಷದ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದಾಳೆ. ಐರಾಳ ಮೊದಲ ಹುಟ್ಟುಹಬ್ಬಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್, ಪವರ್ ಸ್ಟಾರ್ ಪುನೀತ್ ಸೇರಿದಂತೆ ಸ್ಯಾಂಡಲ್ವುಡ್ನ ಹಲವು ಕಲಾವಿದರು ಭಾಗಿಯಾಗಿದ್ದರು.
ಐರಾಳ ಹುಟ್ಟುಹಬ್ಬಕ್ಕಾಗಿ ವಿಶೇಷವಾದ ದೊಡ್ಡ ಕೇಕ್ ತಯಾರಿಸಲಾಗಿತ್ತು. ಐರಾ ಈ ಕೇಕ್ ಅನ್ನು ಕಟ್ ಮಾಡಿ ತನ್ನ ಮೊದಲ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದಾಳೆ. ಐರಾಳ ಹುಟ್ಟುಹಬ್ಬದ ಫೋಟೋ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: ಬರ್ತ್ ಡೇಗೂ ಮುನ್ನವೇ ಐರಾಳ ಕ್ಯೂಟ್ ಫೋಟೋಶೂಟ್
ಯಶ್ ಮಗಳ ಹುಟ್ಟುಹಬ್ಬಕ್ಕೆ ನಟಿ ಭಾರತಿ ವಿಷ್ಣುವರ್ಧನ್, ಸಂಸದೆ ಸುಮಲತಾ ಅಂಬರೀಶ್, ನಟರಾದ ದರ್ಶನ್, ಪುನೀತ್ ರಾಜ್ಕುಮಾರ್, ಧ್ರುವ ಸರ್ಜಾ, ಅನಿರುದ್ಧ, ಅಭಿಷೇಕ್ ಅಂಬರೀಶ್ ಹಾಗೂ ಉದ್ಯಮಿಯಾದ ಅಶೋಕ್ ಖೇಣಿ ಭಾಗಿಯಾಗಿದ್ದಾರೆ. ಇವರ ಹೊರತಾಗಿ ಐರಾ ಹುಟ್ಟುಹಬ್ಬಕ್ಕೆ ಯಶ್ ಹಾಗೂ ರಾಧಿಕಾ ಕುಟುಂಬಸ್ಥರು ಆಗಮಿಸಿದ್ದರು. ಇದನ್ನೂ ಓದಿ: ಹುಟ್ಟುಹಬ್ಬದ ಸಂಭ್ರಮದಲ್ಲಿ ರಾಕಿಂಗ್ ದಂಪತಿಯ ಪುತ್ರಿ
View this post on Instagram
ಮಗಳ ಮೊದಲ ಹುಟ್ಟುಹಬ್ಬವಿರುವ ಹಿನ್ನೆಲೆಯಲ್ಲಿ ರಾಧಿಕಾ ತಮ್ಮ ಇನ್ಸ್ಟಾದಲ್ಲಿ ಮಗಳ ಜೊತೆಗಿರುವ ಫೋಟೋವನ್ನು ಹಂಚಿಕೊಂಡಿದ್ದರು. ಅದಕ್ಕೆ, “ನನ್ನ ಹೃದಯದ ಹಾಗೂ ಆತ್ಮದ ಒಂದು ಭಾಗ ನೀನು, ನನ್ನ ಏಂಜೆಲ್ಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಬರೆದುಕೊಂಡಿದ್ದರು.
ಇತ್ತ ಯಶ್ ಕೂಡ ಮಗಳನ್ನು ಎತ್ತಿಕೊಂಡಿರುವ ಫೋಟೋವನ್ನು ಇನ್ಸ್ಟಾದಲ್ಲಿ ಹಂಚಿಕೊಂಡಿದ್ದರು. “ನಿನ್ನ ತಂದೆ ಆಗಿರುವುದರಿಂದ ನನ್ನಲ್ಲಿರುವ ಮೃದುವಾದ ಭಾಗವನ್ನು ಹೊರ ತಂದಿದೆ. ನೀನು ನನ್ನ ಶಕ್ತಿ, ನನ್ನ ದೌರ್ಬಲ್ಯ, ನನ್ನ ಸರ್ವಸ್ವವೂ ನೀನೇ. ನನ್ನ ರಾಜಕುಮಾರಿಗೆ ಹುಟ್ಟುಹಬ್ಬದ ಶುಭಾಶಯಗಳು” ಎಂದು ಬರೆದು ಪೋಸ್ಟ್ ಮಾಡಿದ್ದರು.