ಬೆಂಗಳೂರು: ಸ್ಯಾಂಡಲ್ ವುಡ್ ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಿರ್ಮಾಪಕರೊಬ್ಬರಿಗೆ ಷರತ್ತು ಹಾಕಿ ಅವರ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ.
ದರ್ಶನ್ ಮತ್ತು ಹೆಬ್ಬುಲಿ ನಿರ್ಮಾಪಕ ಉಮಾಪತಿ ಕಾಂಬಿನೇಷನಲ್ಲಿ ಸಿನಿಮಾ ಮೂಡಿ ಬರುತ್ತಿದೆ. ಈ ಬಗ್ಗೆ ನಿರ್ಮಾಪಕ ಉಮಾಪತಿ ಅವರೇ ಸ್ಪಷ್ಟಪಡಿಸಿದ್ದರು. ನಿರ್ಮಾಪಕ ಉಮಾಪತಿ ನಟ ದರ್ಶನ್ ಗೆ ಕಥೆ ಹೇಳಿದ್ದಾರೆ. ಕಥೆ ಕೇಳಿ ಒಪ್ಪಿಕೊಂಡ ದರ್ಶನ್ ನಿರ್ಮಾಪಕ ಉಮಾಪತಿ ಅವರ ಜೊತೆ ಸಿನಿಮಾ ಮಾಡಲು ಕಾಲ್ ಶೀಟ್ ಕೊಟ್ಟಿದ್ದಾರೆ. ಆದರೆ ಈ ವೇಳೆ ದರ್ಶನ್ ನಿರ್ಮಾಪಕರಿಗೆ ಒಂದು ಷರತ್ತು ಹಾಕಿದ್ದಾರೆ.
Advertisement
ಉಮಾಪತಿ ಅವರ ಚಿತ್ರದಲ್ಲಿ 96% ರಷ್ಟು ಸಾಧ್ಯವಾದರೆ 100% ರಷ್ಟು ಕನ್ನಡದವರನ್ನೇ ಹಾಕಿಕೊಂಡು ಕೆಲಸ ಮಾಡಬೇಕು. ಜೊತೆಗೆ ಕಲಾವಿದರು ಮತ್ತು ತಂತ್ರಜ್ಞರು ಎಲ್ಲರೂ ಕನ್ನಡದವರಿಗೆ ಅವಕಾಶ ಕೊಡಬೇಕು ಎಂದು ದರ್ಶನ್ ನಿರ್ದೇಶಕರಿಗೆ ಹೇಳಿದ್ದಾರಂತೆ.
Advertisement
Advertisement
ನಿರ್ಮಾಪಕ ಉಮಾಪತಿ ಮತ್ತು ದರ್ಶನ್ ಅವರ ಕಾಂಬಿನೇಷನ್ ನಲ್ಲಿ ಮೂಡಿ ಬರುತ್ತಿರುವ ಸಿನಿಮಾಕ್ಕೆ ಈಗಾಗಲೇ `ಕಾಟೇರ’ ಮತ್ತು `ರಾಬರ್ಟ್’ ಎರಡು ಟೈಟಲ್ ಅಂತಿಮವಾಗಿದೆ. ಈ ಹಿಂದೆ ದರ್ಶನ್ `ಚೌಕಾ’ ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾದಲ್ಲಿ ದರ್ಶನ್ ಹೆಸರು ರಾಬರ್ಟ್ ಆಗಿತ್ತು. ಆದ್ದರಿಂದ ಈ ಹೆಸರನ್ನು ನಿರ್ಮಾಪಕರು ಅಂತಿಮ ಮಾಡಿ ನೊಂದಣಿ ಕೂಡ ಮಾಡಿಸಿದ್ದಾರೆ.
Advertisement
ಈ ಸಿನಿಮಾಕ್ಕೆ ತರುಣ್ ಸುಧೀರ್ ನಿರ್ದೇಶನ ಮಾಡುತ್ತಿದ್ದಾರೆ. ದರ್ಶನ್ ಗಾಗಿ ತರುಣ್ ಅವರ ಬಳಿ ಎರಡು ಕಥೆಗಳು ರೆಡಿ ಇದೆ. ಇಬ್ಬರು ಸೇರಿ ಯಾವುದನ್ನು ಆಯ್ಕೆ ಮಾಡುತ್ತಾರೂ ಆ ಸಿನಿಮಾವನ್ನು ಮಾಡುತ್ತೀವಿ ಎಂದು ನಿರ್ಮಾಪಕ ತಿಳಿಸಿದ್ದಾರೆ. ಸಿನಿಮಾ ಮಾಡುವುದು ಅಂತಿಮಾವಾದರೆ ಸೆಪ್ಟಂಬರ್ ಅಥವಾ ಅಕ್ಟೋಬರ್ ನಲ್ಲಿ ಚಿತ್ರದ ಮುಹೂರ್ತ ನಡೆಯಲಿದ್ದು, ನವೆಂಬರ್ ಗೆ ಶೂಟಿಂಗ್ ಶುರುಮಾಡುವ ಯೋಜನೆ ಚಿತ್ರತಂಡ ಹಾಕಿಕೊಂಡಿದೆ ಎಂದು ತಿಳಿದು ಬಂದಿದೆ.