ಸ್ಟಾರ್ ನಟರು ತಮ್ಮ ಹುಟ್ಟುಹಬ್ಬವನ್ನ ಅಭಿಮಾನಿಗಳ ಜೊತೆ ಆಚರಿಸಿಕೊಳ್ಳಲು ಇಷ್ಟಪಡೋದುಂಟು. ಆದರೆ ಕೆಲವು ಮುಖ್ಯ ಕಾರಣಕ್ಕೆ ಸ್ಟಾರ್‌ಗಳು ಅಭಿಮಾನಿಗಳೊಂದಿಗೆ (Fans) ಹುಟ್ಟುಹಬ್ಬ ಆಚರಿಸಿಕೊಳ್ಳೋದನ್ನ ಮಿಸ್ ಮಾಡ್ಕೊಳ್ತಾರೆ. ಇದೀಗ ಡಾಲಿ ಧನಂಜಯ್ (Daali Dhananjay) ಕೂಡ ಈ ಬಾರಿ ಹುಟ್ಟುಹಬ್ಬವನ್ನ ಅಭಿಮಾನಿಗಳ ಜೊತೆ ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿ ಕಾರಣವನ್ನೂ ತಿಳಿಸಿದ್ದಾರೆ ನಟ ರಾಕ್ಷಸ ಧನಂಜಯ್.
View this post on Instagram
ಆಗಸ್ಟ್ 23ಕ್ಕೆ ಧನಂಜಯ್ ಹುಟ್ಟುಹಬ್ಬ (Birthday) ಆಚರಿಸಿಕೊಳ್ತಿದ್ದಾರೆ. ಆದರೆ ಈ ಬಾರಿ ಧನಂಜಯ್ ಅಭಿಮಾನಿಗಳೊಂದು ಆಚರಿಸಿಕೊಳ್ತಿಲ್ಲ. ಕೆಲಸದ ನಿಮಿತ್ತ ಹೊರಗಡೆ ಹೋಗುವ ಕಾರಣಕ್ಕೆ ಸಂಭ್ರಮಾಚರಣೆಯನ್ನ ನಿಮ್ಮೊಂದಿಗೆ ಮಾಡುತ್ತಿಲ್ಲ ಎಂದಿದ್ದಾರೆ ಡಾಲಿ. ಅಂದಹಾಗೆ ಇದೀಗ ಧನಂಜಯ್ ಐತಿಹಾಸಿಕ ಹಲಗಲಿ (Halagali) ಚಿತ್ರ ಸೇರಿದಂತೆ ಹಲವು ಚಿತ್ರಗಳಲ್ಲಿ ಬ್ಯುಸಿ ಇದ್ದಾರೆ.
ಇನ್ನು 666 ಸಿನಿಮಾದಲ್ಲಿ ಶೂಟಿಂಗ್ ನಿಮಿತ್ತ ಬೇರೆ ಊರಿನಲ್ಲಿ ಇರುವ ಸಾಧ್ಯತೆ ಇದೆ. ಹೀಗಾಗಿ ಧನಂಜಯ್ ಈ ಬಾರಿ ಫ್ಯಾನ್ಸ್ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ತಿಲ್ಲ. ಈ ಬಾರಿ ಬಹುತೇಕ ಸ್ಟಾರ್‌ಗಳು ಫ್ಯಾನ್ಸ್ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡಿಲ್ಲ. ಅವರ ಸಾಲಿಗೆ ಇದೀಗ ಡಾಲಿ ಧನಂಜಯ್ ಕೂಡ ಸೇರಿದ್ದಾರೆ.