ಕನ್ನಡದ ಸ್ಟಾರ್ ನಟ ಡಾಲಿ ಧನಂಜಯ್ (Actor Dhananjay) ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ‘ಉತ್ತರಕಾಂಡ’ ಚಿತ್ರದ ಶೂಟಿಂಗ್ ಬಳಿಕ ‘ಅಣ್ಣ ಫ್ರಂ ಮೆಕ್ಸಿಕೋ’ (Anna From Mexico) ಚಿತ್ರೀಕರಣದಲ್ಲಿ ಡಾಲಿ ಭಾಗಿಯಾಗಿದ್ದಾರೆ. ಶೂಟಿಂಗ್ ಫೋಟೋಗಳು ಅಭಿಮಾನಿಗಳ ಗಮನ ಸೆಳೆಯುತ್ತಿವೆ.
- Advertisement 2
ಇದೀಗ ‘ಅಣ್ಣ ಫ್ರಂ ಮೆಕ್ಸಿಕೋ’ ಆ್ಯಕ್ಷನ್ ಭಾಗದ ಚಿತ್ರೀಕರಣ ನಡೆಯಲಿದ್ದು, ಮೇ 13ರಿಂದ ಟಾಕಿ ಭಾಗಗಳು ಆರಂಭ ಆಗಲಿದೆ. ಅಣ್ಣ ಫ್ರಂ ಮೆಕ್ಸಿಕೋ ಸೆಟ್ನಲ್ಲಿ ಡಾಲಿ ಬಿಳಿ ಅಂಗಿ ಮತ್ತು ಪಂಚೆಯನ್ನು ಧರಿಸಿ ಗ್ರಾಮೀಣ ಭಾಗದ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಅಂದಹಾಗೆ, ಈ ಚಿತ್ರದಲ್ಲಿ ಡಾಲಿ ಜೊತೆ ನಾಗಭೂಷಣ್, ರಂಗಾಯಣ ರಘು, ಹಿರಿಯ ನಟಿ ಉಮಾಶ್ರೀ ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ.
- Advertisement 3
View this post on Instagram
- Advertisement 4
‘ಬಡವ ರಾಸ್ಕಲ್’ ಚಿತ್ರದ ಡೈರೆಕ್ಟರ್ ಶಂಕರ್ ಗುರು (Director Shankar Guru) ಇದೀಗ ಮತ್ತೊಮ್ಮೆ ಡಾಲಿಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಮತ್ತೆ ‘ಬಡವ ರಾಸ್ಕಲ್’ ಕಾಂಬಿನೇಷನ್ ಈ ಚಿತ್ರದ ಮೂಲಕ ಒಂದಾಗುತ್ತಿದೆ. ಸೂಪರ್ ಹಿಟ್ ಕೊಟ್ಟ ಜೋಡಿ ಮತ್ತೆ ಹೊಸ ಕಥೆ ಹೇಳಲು ಹೊರಟಿರುವುದು ಕೇಳಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.
ಜೀಬ್ರಾ, ‘ಪುಷ್ಪ 2’ (Pushpa 2) ಸೇರಿದಂತೆ ಹಲವು ಸಿನಿಮಾಗಳು ಧನಂಜಯ್ ಕೈಯಲ್ಲಿವೆ. ವಿದ್ಯಾಪತಿ, ಜೆಸಿ-ದಿ ಯೂನಿವರ್ಸಿಟಿ ಎಂಬ ಚಿತ್ರಗಳನ್ನು ಡಾಲಿ ನಿರ್ಮಾಣ ಮಾಡುತ್ತಿದ್ದಾರೆ.