ಮಾಲಿವುಡ್‌ನಲ್ಲಿ (Mollywood) ಹೇಮಾ ಕಮಿಟಿ ಸಂಚಲನ ಸೃಷ್ಟಿಸಿದ ಬೆನ್ನಲ್ಲೇ ಸ್ಯಾಂಡಲ್‌ವುಡ್‌ನಲ್ಲೂ (Sandalwood) ಮಹಿಳೆಯರ ಸುರಕ್ಷತೆಗೆ ಕಮಿಟಿಯಾಗಬೇಕು ಎಂದು ಫೈರ್ ಸಂಸ್ಥೆ ಇಂದು (ಸೆ.5) ಸಿಎಂಗೆ ಮನವಿ ಸಲ್ಲಿಸಿದ ಬಳಿಕ ನಟ ಚೇತನ್ ಅಹಿಂಸಾ ಪ್ರತಿಕ್ರಿಯೆ ನೀಡಿದ್ದಾರೆ. ಎಷ್ಟೋ ತಲೆಮಾರಿನಿಂದ ಮಹಿಳೆಯರು ಲೈಂಗಿಕ ಕಿರುಕುಳ ಎದುರಿಸುತ್ತಿದ್ದಾರೆ ಅದನ್ನು ಕಿತ್ತೆಸೆಯಬೇಕು ಎಂದು ನಟ ಚೇತನ್ (Actor Chethan) ಮಾತನಾಡಿದ್ದಾರೆ.
Advertisement
ಇಂದು 153 ಜನ ಕಲಾವಿದರು ಸಹಿ ಮಾಡಿರುವ ಪ್ರತಿಯನ್ನು ಸಿಎಂಗೆ ಸಲ್ಲಿಸಿದ್ದೇವೆ. ಸದ್ಯದಲ್ಲೇ ಇದರ ಬಗ್ಗೆ ಚರ್ಚೆ ನಡೆಸಲು ಮತ್ತೊಂದು ಸಭೆ ಮಾಡೋಣ ಎಂದು ಅವರು ತಿಳಿಸಿದ್ದಾರೆ ಎಂದು ಚೇತನ್ ಮಾತನಾಡಿದ್ದಾರೆ. ಚಿತ್ರರಂಗದಲ್ಲಿ ಎಷ್ಟೋ ತಲೆಮಾರಿನಿಂದ ಲೈಂಗಿಕ ಕಿರುಕುಳ ಇದೆ ಅಂತ ಕೂಗು ಕೇಳಿ ಬರುತ್ತಿದೆ. ಅದನ್ನ ಕಿತ್ತು ಎಸೆಯಬೇಕು ಅಂತ ಈ ಫೈರ್ ಸಂಸ್ಥೆ ಮುಂದಾಗಿದೆ ಎಂದಿದ್ದಾರೆ ಚೇತನ್. ಇದನ್ನೂ ಓದಿ:ಇಂಡಸ್ಟ್ರಿಯಲ್ಲಿ ಲೈಂಗಿಕ ಕಿರುಕುಳ ಮೀರಿ ಹಲವು ಸಮಸ್ಯೆಗಳಿವೆ: ಶೃತಿ ಹರಿಹರನ್
Advertisement
Advertisement
ಕಾಸ್ಟಿಂಗ್ ಕೌಚ್ ಬಗ್ಗೆ ಸಿಎಂ ಗಮನಕ್ಕೆ ತಂದಿದ್ದೀವಿ. ಈ ಥರ ಸಮಸ್ಯೆ ಇದೆಯಾ ಅಂತ ಸಿಎಂ ಕೇಳಿದ್ದು ಅಸಮಾಧಾನ ಆಯಿತು. ಹೇಮಾ ವರದಿ ರಚನೆ ಆಗೋಕೆ ಸಾಕಷ್ಟು ಟೈಮ್ ತೆಗೆದುಕೊಳ್ತು. ಅಲ್ಲಿ ಆದಂತೆ ಸ್ಯಾಂಡಲ್‌ವುಡ್‌ನಲ್ಲೂ ಸಮಿತಿ ರಚನೆಯಾಗಬೇಕು. ಈ ಅನ್ಯಾಯದ ವಿರುದ್ದ ಸಾಕಷ್ಟು ಜನ ಕೈಜೋಡಿಸಿದ್ದಾರೆ. ಈ ಕೆಲಸಕ್ಕೆ ಸ್ಟಾರ್ ನಟ, ನಟಿಯರು ಬೆಂಬಲಿಸಿದ್ದಾರೆ. ಇನ್ನೂ ಹೋಮ ಹವನ ಮಾಡುವುದರಿಂದ ಒಳಿತಾಗುವುದಲ್ಲ ಎಂದಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲಿ ಸಮಿತಿ ರಚಿಸುವ ನಿರ್ಣಯಕ್ಕೆ ಸಿಎಂ ಬೆಂಬಲವಿದೆ ಎಂಬ ನಂಬಿಕೆಯಿದೆ ಎಂದು ಚೇತನ್ ಮಾತನಾಡಿದ್ದಾರೆ.
Advertisement
ಅಂದಹಾಗೆ, 2017ರಲ್ಲಿ ಸ್ಥಾಪನೆಯಾದ ಆಂತರಿಕ ದೂರು ಸಮಿತಿ. ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಲೈಂಗಿಕ ಕಿರುಕುಳ ಹಾಗೂ ಇತರ ಸಮಸ್ಯೆಗಳು ಎದುರಾದರೆ, ಅದನ್ನು ವಿರುದ್ಧ ಹೋರಾಡುವ ಒಂದು ಕಮಿಟಿ. ಕೆಲವು ವರ್ಷಗಳು ಈ ಸಮಿತಿ ಸೈಲೆಂಟ್ ಆಗಿತ್ತು. ಈಗ ಮಲಯಾಳಂ ಚಿತ್ರರಂಗದಲ್ಲಿ ಹೇಮಾ ಕಮಿಟಿ ವರದಿ ಸಂಚಲನ ಸೃಷ್ಟಿಸಿದ ಬಳಿಕ ಮತ್ತೆ ಕಾರ್ಯೋನ್ಮುಖವಾಗಿದೆ.