– ರೈತರ ಜಮೀನು ಕಿತ್ಕೊಂಡು ಇನ್ನೊಂದು ಏರ್‌ಪೋರ್ಟ್ ಬೇಕಾ?
ಬೀದರ್: ಬಿಪಿಎಲ್ ಕಾರ್ಡ್ (BPL Card) ಯಾರಿಗೆ ಸಿಗಬೇಕೊ ಅವರಿಗೆ ಸಿಕ್ಕಿಲ್ಲ, ಅರ್ಹತೆ ಇಲ್ಲದವರಿಗೆ ಬಿಪಿಎಲ್ ಕಾರ್ಡ್ ಸಿಗುತ್ತಿದೆ. ಹೀಗಾಗಿ ಮೊದಲು ಬಿಪಿಎಲ್ ಕಾರ್ಡ್‌ಗಳನ್ನು ಸರ್ಕಾರ ಪರಿಷ್ಕರಣೆ ಮಾಡಬೇಕು ಎಂದು ನಟ ಚೇತನ್ (Actor Darshan) ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಜಿಲ್ಲೆಯಲ್ಲಿ ಮಾತಾನಾಡಿದ ಅವರು, ಒಂದು ತಿಂಗಳ ಹಿಂದೆ ಸರ್ಕಾರ ಬಿಪಿಎಲ್ ಕಾರ್ಡ್‌ಗಳನ್ನು ಪರಿಷ್ಕರಣೆ ಮಾಡುತ್ತಾರೆ ಎಂದಿದ್ದರು. ಆದರೆ ಇನ್ನೂ ಮಾಡಿಲ್ಲ. ಪರಿಷ್ಕರಣೆ ಮಾಡಿದರೆ ರೇಷನ್ ಕಾರ್ಡ್ ವಿಚಾರದಲ್ಲಿ ಏನಾಗಿದೆ ಎಂದು ಗೊತ್ತಾಗುತ್ತದೆ. ಆದರೆ ನಮಗೆ ಸಮಸ್ಯೆಯಾಗುತ್ತಿರುವುದು ಸರ್ಕಾರದ ನಿರಾಸಕ್ತಿ, ಸಮಸ್ಯೆಗೆ ಪರಿಹಾರ ನೀಡಬೇಕು ಎಂಬ ಮನಸ್ಥಿತಿ ಸರ್ಕಾರದಲ್ಲಿ ಇಲ್ಲ ಎಂದು ಕಿಡಿಕಾರಿದ್ದಾರೆ.ಇದನ್ನೂ ಓದಿ: BBK 11: ನಾಮಿನೇಷನ್‌ನಲ್ಲಿ ಒಡೆದ ಒಗ್ಗಟ್ಟು- ತ್ರಿವಿಕ್ರಮ್ ಮೇಲೆ ಉಗ್ರಂ ಮಂಜು ಕೆಂಡ
ಇದು ಬಿಟ್ಟು ಬರೀ ವೈಯಕ್ತಿಕ ಟೀಕೆ ಮಾಡುವುದೆ ಆಗಿದೆ. ವೈಯಕ್ತಿಕ ಪ್ರತಿಷ್ಠೆಗಾಗಿ ರಾಜಕೀಯ ಮಾಡಿದರೆ ಉತ್ತಮ ಕೆಲಸಗಳು ಆಗಲ್ಲ. ಉಳ್ಳವರ ಬಳಿ ಬಿಪಿಎಲ್ ಕಾರ್ಡ್‌ಗಳು ಇದ್ದರೆ, ಅದನ್ನು ಕಿತ್ತುಕೊಂಡು ಬಂದು ಇಲ್ಲದವರಿಗೆ ಸರ್ಕಾರ ನೀಡಬೇಕು. ಪರಿಷ್ಕರಣೆ ಜೊತೆಗೆ ರೇಷನ್ ಕಾರ್ಡ್‌ಗಳ ಬಗ್ಗೆ ತನಿಖೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಇನ್ನೂ ವಕ್ಫ್‌ನಿಂದ ರೈತರ ಜಮೀನು ಪಹಣಿ ಬದಲಾವಣೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ವಕ್ಫ್ ಜಮೀನು ಅಲ್ಲಾಗೆ ಸೇರಿದ್ದು ಎಂದು ಹೇಳುತ್ತಾರೆ. ಯಾವ ಉದ್ದೇಶಕ್ಕಾಗಿ ಜಾಗ ದಾನ ಮಾಡಿರಬಹುದು ಗೊತ್ತಿಲ್ಲ. ಆದರೆ ವಕ್ಫ್ ಜಾಗ ಕೂಡಾ ಸರ್ಕಾರದಾಗಿದ್ದು, ಸರ್ಕಾರದ ಜಾಗ ಅಂದ್ರೆ ಅದು ನಮ್ಮ ಜನರ ಜಾಗ ಎಂದರ್ಥ. ರೈತರ ಭೂಮಿ ಅಂದರೆ ಅದು ಬಹಳ ಸೂಕ್ಷ್ಮವಾದ ವಿಚಾರ. ಬೆಂಗಳೂರಿನಲ್ಲಿ ಎರಡನೇ ಏರ್‌ಪೋರ್ಟ್ ಮಾಡುವುದಕ್ಕೆ 4,500 ಎಕರೆ ರೈತರ ಜಮೀನು ಕಿತ್ತುಕೊಳ್ಳುತ್ತಿದ್ದು, ಬಂಡವಾಳಶಾಹಿ ರಾಜಧಾನಿಯಲ್ಲಿ ತಾಂಡವಾಡುತ್ತಿದೆ. ರೈತರ ಭೂಮಿ ಕಿತ್ತುಕೊಂಡು ಭೂಮಾಫಿಯಾಗಳು ಬೆಳೆಯುತ್ತವೆ. ಆದರೆ ರೈತರ ಜಮೀನು ಕಿತ್ತುಕೊಂಡು ಇನ್ನೊಂದು ಏರ್‌ಪೋರ್ಟ್ ಬೇಕಾ? ಎಂದು ಪ್ರಶ್ನಿಸಿದರು.ಇದನ್ನೂ ಓದಿ: ಅರ್ಹರ ರೇಷನ್ ಕಾರ್ಡ್ ರದ್ದಾಗಿದ್ರೆ ಮರು ಅರ್ಜಿ ಸಲ್ಲಿಕೆಗೆ ವ್ಯವಸ್ಥೆ ಮಾಡ್ತೀವಿ: ಮುನಿಯಪ್ಪ