‘ಫ್ಲರ್ಟ್’ ಮಾಡಲು ರೆಡಿಯಾದ ನಟ ಚಂದನ್

Public TV
1 Min Read
chandan kumar 3

ಕಿರುತೆರೆಯ ಯಶಸ್ವಿ ನಟ, ನಿರ್ಮಾಪಕ ಚಂದನ್ (Chandan) ಇದೀಗ ನಿರ್ದೇಶನಕ್ಕೆ ಮುಂದಾಗಿದ್ದಾರೆ. ಕಿರುತೆರೆಯಲ್ಲಿ ಸಾಕಷ್ಟು ಧಾರಾವಾಹಿಗಳನ್ನು ಮಾಡಿರುವ ಮತ್ತು ಕೆಲ ಕನ್ನಡ ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿರುವ ಚಂದನ್, ಇದೇ ಮೊದಲ ಬಾರಿಗೆ ನಿರ್ದೇಶನದ ಜೊತೆಗೆ ನಿರ್ಮಾಣ ವನ್ನೂ ಮಾಡಲಿದ್ದಾರೆ. ಜೊತೆಗೆ ಗೆಳೆಯರು ಇವರಿಗೆ ಸಾಥ್ ನೀಡಲಿದ್ದಾರೆ.

chandan kumar 1

ಚಂದನ್ ನಿರ್ದೇಶನದ ಮೊದಲ ಚಿತ್ರಕ್ಕೆ ‘ಫ್ಲರ್ಟ್’ (Flirt) ಎಂದು ಹೆಸರಿಡಲಾಗಿದ್ದು, ಈಗಾಗಲೇ ಪ್ರಿ ಪ್ರೊಡಕ್ಷನ್ ಕೆಲಸವನ್ನೂ ಅವರು ಮುಗಿಸಿದ್ದಾರೆ.  ಮೊನ್ನೆಯಷ್ಟೇ ಚಂದನ್ ಅವರ ಹುಟ್ಟು ಹಬ್ಬವಾಗಿದ್ದು, ಅಂದು ಸಿನಿಮಾದ ಫಸ್ಟ್ ಲುಕ್ ಕೂಡ ರಿಲೀಸ್ ಆಗಿದೆ. ಈ ಸಿನಿಮಾದ ಫಸ್ಟ್ ಲುಕ್ ಕುತೂಹಲ ಮೂಡಿಸುತ್ತಿದೆ.  ಇದನ್ನೂ ಓದಿ:‘ರಣಹದ್ದು’ ಫಸ್ಟ್ ಲುಕ್ ರಿಲೀಸ್ ಮಾಡಿದ ಜಂಭದ ಹುಡುಗಿ

chandan kumar 2

ಅರ್ಜುನ್ ಸರ್ಜಾ ನಿರ್ದೇಶನದಲ್ಲಿ ಮೂಡಿ ಬಂದ ಪ್ರೇಮ ಬರಹದಲ್ಲಿ ಚಂದನ್ ನಾಯಕನಾಗಿದ್ದರು. ಆನಂತರ ಅವರು ಯಾವುದೇ ಸಿನಿಮಾದಲ್ಲಿ ನಟಿಸಿರಲಿಲ್ಲ. ಇದೀಗ ಫ್ಲರ್ಟ್ ಸಿನಿಮಾದಲ್ಲಿ ನಟಿಸುವುದರ ಜೊತೆಗೆ ನಿರ್ಮಾಣ ಮತ್ತು ನಿರ್ದೇಶನವನ್ನೂ ಅವರು ಮಾಡಲಿದ್ದಾರೆ. ಸಿನಿಮಾದ ಬಗ್ಗೆ ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿಯನ್ನು ಅವರು ನೀಡಲಿದ್ದಾರೆ.

 

ಲಕ್ಷ್ಮಿ ಬಾರಮ್ಮ, ರಾಧಾ ಕಲ್ಯಾಣ ಸೇರಿದಂತೆ ಹಲವು ಯಶಸ್ವಿ ಧಾರಾವಾಹಿಗಳಿಗೆ ಚಂದನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಕಿರುತೆರೆಯಲ್ಲಿ ಚಂದನ್ ಅವರಿಗೆ ಸಾಕಷ್ಟು ಅಭಿಮಾನಿಗಳು ಇದ್ದಾರೆ. ಹಿರಿತೆರೆಯಲ್ಲೂ ಯಶಸ್ಸು ಕಾಣಲು ಚಂದನ್ ಹಲವಾರು ರೀತಿಯಲ್ಲಿ ಕಸರತ್ತು ಮಾಡುತ್ತಿದ್ದಾರೆ. ಫ್ಲರ್ಟ್ ಸಿನಿಮಾ ಅಂಥದ್ದೊಂದು ಯಶಸ್ಸು ತಂದುಕೊಡಲಿದೆಯಾ ಎಂದು ಕಾದು ನೋಡಬೇಕು.

Web Stories

Share This Article