ಇತ್ತೀಚೆಗೆ ನಂದಮೂರಿ ಬಾಲಕೃಷ್ಣ (Nandamuri Balakrishna) ಭಾರೀ ಸುದ್ದಿಯಲ್ಲಿದ್ದಾರೆ. ಕಾರ್ಯಕ್ರಮವೊಂದರಲ್ಲಿ ನಟಿ ಅಂಜಲಿರನ್ನು ತಳ್ಳಿದಕ್ಕೆ ಭಾರೀ ಚರ್ಚೆಯಾಗಿತ್ತು. ವಿವಾದಕ್ಕೆ ನಟಿ ಸ್ಪಷ್ಟನೆ ನೀಡಿ ಬಾಯಿ ಮುಚ್ಚಿಸಿದ್ದರು. ಆದರೆ ಈಗ ಬಾಲಯ್ಯ ಮದ್ಯ ವ್ಯಸನದ ಬಗ್ಗೆ ಅಳಿಯ ಶ್ರೀಭರತ್ (Shri Bharath) ನೀಡಿರುವ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ.
ಇತ್ತೀಚೆಗೆ ವಿಶ್ವಕ್ ಸೇನ್, ನೇಹಾ ಶೆಟ್ಟಿ ನಟನೆಯ ‘ಗ್ಯಾಂಗ್ಸ್ ಆಫ್ ಗೋದಾವರಿ’ ಚಿತ್ರದ ಪ್ರಿ ರಿಲೀಸ್ ಕಾರ್ಯಕ್ರಮದಲ್ಲಿ ಬಾಲಯ್ಯ ಮುಖ್ಯ ಅತಿಥಿಯಾಗಿ ಬಂದಿದ್ದರು. ಈ ವೇಳೆ, ವೇದಿಕೆಯಲ್ಲಿ ನಟಿ ಅಂಜಲಿ ಅವರನ್ನು ಬಾಲಯ್ಯ ತಳ್ಳಿದ್ದರು. ನಟನ ಈ ನಡೆಗೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಆದರೆ ಸ್ವತಃ ಅಂಜಲಿ ಅವರೇ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಇದನ್ನೂ ಓದಿ:40 ಜೀವಂತ ಗುಂಡುಗಳ ಸಮೇತ ಚೆನ್ನೈ ಏರ್‌ಪೋರ್ಟ್‌ನಲ್ಲಿ ಸಿಕ್ಕಿಬಿದ್ದ ನಟ ಕರುಣಾಸ್
ಕಾರ್ಯಕ್ರಮದಲ್ಲಿ ಬಾಲಯ್ಯ ಮದ್ಯ ಸೇವಿಸಿದ್ದಕ್ಕೆ ಹೀಗೆ ವರ್ತಿಸಿದ್ದರು. ಎಂದೆಲ್ಲಾ ಆರೋಪಗಳು ವ್ಯಕ್ತವಾಗಿತ್ತು. ಅಂಜಲಿ ಜೊತೆಗಿನ ನಟನ ವರ್ತನೆಯನ್ನು ಖಂಡಿಸಿದ ಬೆನ್ನಲ್ಲೇ ಬಾಲಯ್ಯ ಕಿರಿಯ ಅಳಿಯನ ಶ್ರೀ ಭರತ್ ಹಳೆಯ ಸಂದರ್ಶನದ ವಿಡಿಯೋ ವೈರಲ್ ಆಗುತ್ತಿದೆ. ನಮ್ಮ ಮಾವ ಮ್ಯಾನ್ಷನ್ ಹೌಸ್ ಬ್ರ್ಯಾಂಡ್ ಅನ್ನು ಕುಡಿಯುತ್ತಾರೆ. ಇದು ತಿಳಿದ ಮೇಲೆ ಆ ಕಂಪನಿಯ ಸ್ಟಾಕ್ಸ್ ಮೌಲ್ಯ ಹೆಚ್ಚಾಯಿತು ಎಂದು ನಕ್ಕಿದ್ದಾರೆ. ಬಿಸಿನೀರಿನಲ್ಲಿ ಬೆರೆಸಿ ಕುಡಿಯುತ್ತಾರಂತೆ? ಹೌದಾ ಎಂದು ನಿರೂಪಕ ಕೇಳಿದಾಗ, ಹೌದು ನಿಜ ಎಂದು ಭರತ್ ಪ್ರತಿಕ್ರಿಯೆ ನೀಡಿದ್ದಾರೆ.
ಮಾವನ ಬಳಿ ಒಂದು ಬ್ಯಾಗ್ ಇರುತ್ತದೆ. ಅದರಲ್ಲಿ ಸದಾ ಬಿಸಿ ನೀರು ಮತ್ತು ಮದ್ಯದ ಬಾಟಲ್ ಇರುತ್ತದೆ. ಅವರು ಎಲ್ಲಿಗೆ ಹೋದರೂ ಆ ಬ್ಯಾಗ್ ಇರಬೇಕು. ಅಮೇರಿಕಾಗೆ ಹೋದರೂ ತೆಗೆದುಕೊಂಡು ಹೋಗ್ತಾರೆ ಎಂದು ವರ್ಷಗಳ ಹಿಂದೆ ನೀಡಿರುವ ಈಗ ವೈರಲ್ ಆಗಿದೆ. ಮತ್ತೆ ಅಂಜಲಿ ವಿಚಾರಕ್ಕೆ ಕನೆಕ್ಟ್ ಮಾಡಿ ಬಾಲಯ್ಯರನ್ನು ಟ್ರೋಲ್ ಮಾಡುತ್ತಿದ್ದಾರೆ.