ಟಾಲಿವುಡ್‌ನ ಜನಪ್ರಿಯ ಹಾಸ್ಯ ನಟ ಬಾಬು ಮೋಹನ್ ಸಿನಿಮಾ ಮತ್ತು ರಾಜಕೀಯ ಎರಡರಲ್ಲೂ ಸಕ್ಸಸ್ ಕಂಡವರು. ತೆರೆಯ ಮೇಲೆ ನಕ್ಕು ನಗಿಸಿದ್ದ ಹಾಸ್ಯ ನಟನಿಗೆ ವಿಷವಿಟ್ಟು ಕೊಲ್ಲಲು ಯತ್ನಿಸಿದ್ದ ಘಟನೆಯನ್ನು ಇದೀಗ ರಿವೀಲ್ ಮಾಡಿದ್ದಾರೆ. ರಾಜಕೀಯ ರಂಗದಿಂದ ಕೊಲೆ ಯತ್ನ ನಡೆದ ಕುರಿತು ನಟ ಮಾಹಿತಿ ಬಿಚ್ಚಿಟ್ಟಿದ್ದಾರೆ.

ತಮ್ಮ ಮೇಲೆ ಕೊಲೆ ಯತ್ನ ನಡೆದ ವಿಷಯವನ್ನು ಬಾಬು ಮೋಹನ್ ರಿವೀಲ್ ಮಾಡಿದ್ದಾರೆ. ಬಾಬು ಮೋಹನ್ ಸಿನಿಮಾದಲ್ಲಿದ್ದಾಗ ಪಾನ್ ತಿನ್ನುವ ಅಭ್ಯಾಸ ಮಾಡಿಕೊಂಡಿದ್ದರಂತೆ. ಅದು ಒಂದು ರೀತಿ ಚಟ ಆಗಿಬಿಟ್ಟಿತಂತೆ. ರಾಜಕೀಯಕ್ಕೆ ಸೇರಿದಾಗಲೂ ಪಾನ್ ತಿನ್ನುವ ಅಭ್ಯಾಸ ಕೈಬಿಡಲಿಲ್ಲ. ಇದರಿಂದಲೇ ಒಮ್ಮೆ ಬಾಬು ಮೋಹನ್ ಮೇಲೆ ಕೊಲೆ ಯತ್ನವೂ ಆಗಿತ್ತು. ಇದನ್ನೂ ಓದಿ:ಜಹೀರ್ ಇಕ್ಬಾಲ್ ಜೊತೆ ಸೋನಾಕ್ಷಿ ಸಿನ್ಹಾ ಡೇಟಿಂಗ್: ಮದುವೆ ಗಾಸಿಪ್‌ಗೆ ನಟಿಯ ಸ್ಪಷ್ಟನೆ
ನಾನು ದಿನಕ್ಕೆ 25-30 ಪಾನ್ ತಿನ್ನುತ್ತಿದ್ದೆ. ಬಾಕ್ಸ್ನಲ್ಲಿ ಪಾನ್ ಕಟ್ಟಿಸಿಕೊಂಡು ಹೋಗುತ್ತಿದ್ದೆ. ನಾನು ಹೈದರಾಬಾದ್‌ಗೆ ಬರಬೇಕಾದರೆ ದಾರಿಯಲ್ಲಿ ಒಬ್ಬ ಪರಿಚಿತ ಪಾನ್ ಶಾಪ್‌ನಲ್ಲಿ ಪಾನ್ ಕಟ್ಟಿಸಿಕೊಳ್ಳುವುದು ಅಭ್ಯಾಸ. ಹೀಗೆ ಒಮ್ಮೆ ಪಾನ್ ಕಟ್ಟಿಸಿಕೊಂಡು ಸ್ವಲ್ಪ ದೂರ ಬಂದಿದ್ದೆ ಅಷ್ಟೆ. ಪಾನ್ ಕಟ್ಟಿಕೊಟ್ಟವನ ಪತ್ನಿಯೇ ನನಗೆ ಕರೆ ಮಾಡಿ ಪಾನ್‌ನಲ್ಲಿ ವಿಷ ಸೇರಿಸಿರುವ ವಿಷಯ ಹೇಳಿದರು. ಆಕೆಯ ಗಂಡನನ್ನು ಬೆದರಿಸಿ ಪಾನ್‌ನಲ್ಲಿ ವಿಷ ಬೆರೆಸಿ ಕೊಡುವಂತೆ ಹೇಳಲಾಗಿತ್ತಂತೆ. ಪಾಪ ಆತ ಭಯಕ್ಕೆ ಪಾನ್‌ನಲ್ಲಿ ವಿಷ ಹಾಕಿ ಕೊಟ್ಟಿದ್ದ. ಆ ವಿಷಯ ಗೊತ್ತಾದ ಮೇಲೆ ರಾಜಕೀಯದಲ್ಲಿ ಎಂಥೆಂಥ ಜನರಿರುತ್ತಾರೆ, ರಾಜಕೀಯ ಎಷ್ಟು ಅಪಾಯಕಾರಿ ಎಂಬುದು ಗೊತ್ತಾಯಿತು ಎಂದು ಬಾಬು ಮೋಹನ್ ಹೇಳಿಕೊಂಡಿದ್ದಾರೆ.
Live Tv
[brid partner=56869869 player=32851 video=960834 autoplay=true]


