ಬಾಲಿವುಡ್ ನಟ ಅರ್ಜುನ್ ಕಪೂರ್ (Arjun Kapoor) ಅವರು ಮಲೈಕಾ ಅರೋರಾ (Malaika Arora) ಜೊತೆ ಬ್ರೇಕಪ್ ಆದ್ಮೇಲೆ ತಮಗಿರುವ ಗಂಭೀರ ಕಾಯಿಲೆಯ ಬಗ್ಗೆ ಮೌನ ಮುರಿದಿದ್ದಾರೆ. ಸಂದರ್ಶನವೊಂದರಲ್ಲಿ ತಮಗಿರುವ ಅನಾರೋಗ್ಯದ ಸಮಸ್ಯೆ ಬಗ್ಗೆ ಮುಕ್ತವಾಗಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ನನ್ನ ಜೀವ ಇರುವವರೆಗೂ ದರ್ಶನ್ ನನ್ನ ಮಗನೇ: ಸುಮಲತಾ
- Advertisement -
ಹಶಿಮೊಟೊ (Hashimoto) ಎಂಬ ಆರೋಗ್ಯ ಸಮಸ್ಯೆಯಿಂದ ಕಾಯಿಲೆಯಿಂದಲೂ ಬಳಲುತ್ತಿರುವುದಾಗಿ ಅರ್ಜುನ್ ಕಪೂರ್ ಹೇಳಿಕೊಂಡಿದ್ದಾರೆ. ಅವರೊಳಗೆ ರೋಗನಿರೋಧಕ ಶಕ್ತಿ, ಅವರ ಥೈರಾಯ್ಡ್‌ಗೆ ಎಂದು ಹಾನಿ ಮಾಡುತ್ತಿತ್ತಂತೆ. ಇದರಲ್ಲಿ ತೂಕವೂ ಹೆಚ್ಚುತ್ತದೆ. ಇದರಿಂದ ನನ್ನ ದೇಹವೂ ಸಾಕಷ್ಟು ತೊಂದರೆ ಎದುರಿಸುತ್ತಿದೆ. ನನಗೆ 30 ವರ್ಷವಿದ್ದಾಗ ಈ ಕಾಯಿಲೆ ಬಂದಿತ್ತು. ನನ್ನ ತಾಯಿ ಮೋನಾ ಕಪೂರ್ ಅವರಿಗೂ ಈ ಕಾಯಿಲೆ ಇತ್ತು. ಅವರ ಸಹೋದರಿ ಅಂಶುಲಾ ಕಪೂರ್‌ಗೂ ಇದೆ ಎಂದು ಅವರು ಬಹಿರಂಗಪಡಿಸಿದ್ದಾರೆ.
- Advertisement -
- Advertisement -
ಹಶಿಮೊಟೊ ಖಾಯಿಲೆಯ ಜೊತೆಗೆ ನಾನು ಖಿನ್ನತೆಗೆ ಒಳಗಾಗಿದ್ದೇನೆ ಎಂದು ನನಗೆ ತಿಳಿದಿರಲಿಲ್ಲ. ನಾನು ಎಂದಿಗೂ ನಕಾರಾತ್ಮಕ ವ್ಯಕ್ತಿಯಾಗಿರಲಿಲ್ಲ. ಆದರೆ ಆ ಸಮಯದಲ್ಲಿ ನಾನು ತುಂಬಾ ನಕಾರಾತ್ಮಕವಾಗಿ ಯೋಚಿಸುತ್ತಿದ್ದೆ. ಬೇರೆಯವರು ಕೆಲಸ ಮಾಡುವುದನ್ನು ಕಂಡಾಗ ನನಗೆ ಈ ಕೆಲಸ ಮಾಡಲು ಆಗುವುದಿಲ್ಲ ಎಂದು ಅನಿಸುತ್ತಿತ್ತು. ನನಗೆ ಸಿನಿಮಾದಲ್ಲಿ ಅವಕಾಶ ಸಿಗುತ್ತದೆಯೇ? ನಂತರ ಏನು ನಡೆಯುತ್ತಿದೆ ಎಂದು ನನಗೆ ಅರ್ಥವಾಗದಿದ್ದಾಗ, ನಾನು ವೈದ್ಯರ ಸಹಾಯವನ್ನು ಕೇಳಿದೆ. ಆಗ ನನಗೆ ಲಘು ಖಿನ್ನತೆ ಇದೆ ಎಂದು ತಿಳಿಯಿತು. ಅದಕ್ಕಾಗಿ ಟ್ರೀಟ್‌ಮೆಂಟ್ ಪಡೆದುಕೊಳ್ಳುತ್ತಿದ್ದೇನೆ ಎಂದು ಅರ್ಜುನ್ ಕಪೂರ್ ತಿಳಿಸಿದ್ದಾರೆ.
- Advertisement -
ಅರ್ಜುನ್ ಕಪೂರ್ ಈ ಸಂದರ್ಶನದ ವಿಡಿಯೋ ವೈರಲ್ ಆಗುತ್ತಿದ್ದಂತೆ ಮಲೈಕಾ ಅರೋರಾ ಜೊತೆ ಈ ಕಾರಣಕ್ಕೆ ಬ್ರೇಕಪ್ ಆಯ್ತಾ? ಎಂದೆಲ್ಲಾ ನೆಟ್ಟಿಗರು ಕಾಲೆಳೆದಿದ್ದಾರೆ.