ಆಂಧ್ರಪ್ರದೇಶಕ್ಕೆ ಕರ್ನಾಟಕದ ಕುಮ್ಕಿ ಆನೆ ಹಸ್ತಾಂತರ
ಆಂಧ್ರಪ್ರದೇಶ ಡಿಸಿಎಂ ಪವನ್ ಕಲ್ಯಾಣ್ (Pawan Kalyan) ಅವರು ಕರ್ನಾಟಕಕ್ಕೆ ಆಗಮಿಸಿದ್ದಾರೆ. ವಿಧಾನಸೌಧದ ಮೆಟ್ಟಿಲುಗಳ ಮೇಲೆ ರಾಜ್ಯದ ಅರಣ್ಯ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆಂಧ್ರಪ್ರದೇಶಕ್ಕೆ 4 ಕುಮ್ಕಿ ಆನೆಗಳನ್ನು ಹಸ್ತಾಂತರಿಸಿದೆ. ಈ ವೇಳೆ, ಜಯಹೇ ಕರ್ನಾಟಕ ಮಾತೆ ಎಂದು ಕನ್ನಡದಲ್ಲಿ (Kannada) ಪವನ್ ಕಲ್ಯಾಣ್ ಮಾತನಾಡಿದ್ದಾರೆ. ಇದನ್ನೂ ಓದಿ:ತಿಂಗಳಿಗೆ 40 ಲಕ್ಷ ಕೊಡಿ – ರವಿ ಮೋಹನ್ ಬಳಿ ಭಾರೀ ಜೀವನಾಂಶ ಕೇಳಿದ ಆರತಿ!
ಈ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ಸಚಿವರಾದ ಈಶ್ವರ್ ಖಂಡ್ರೆ, ದಿನೇಶ್ ಗುಂಡೂರಾವ್, ಜಾರ್ಜ್, ಭೈರತಿ ಸುರೇಶ್ ಸೇರಿದಂತೆ ಅನೇಕರು ಭಾಗಿಯಾಗಿದ್ದರು. ಈ ವೇಳೆ ಪವನ್ ಕಲ್ಯಾಣ್, ಭಾರತ ಜನನಿಯ ತನುಜಾತೆ ‘ಜಯಹೇ ಕರ್ನಾಟಕ ಮಾತೆ’ ಎಂದು ಭಾಷಣ ಆರಂಭಿಸಿದ್ದಾರೆ. ಈ ಪುಣ್ಯಭೂಮಿಗೆ ಹಾಗೂ ಕರ್ನಾಟಕ ಜನತೆಗೆ ನಮಿಸುತ್ತೇನೆ ಎಂದಿದ್ದಾರೆ. ಭಾಷಣದುದ್ದಕ್ಕೂ ಕುವೆಂಪು ಅವರ ಸಾಲುಗಳನ್ನು ಅಲ್ಲಲ್ಲಿ ಬಳಸಿಕೊಂಡರು. ಸಾಧ್ಯವಾದಷ್ಟು ಕನ್ನಡವನ್ನೇ ತಮ್ಮ ಭಾಷಣದಲ್ಲಿ ಬಳಸಿದ್ದಾರೆ. ಇದನ್ನೂ ಓದಿ: ‘ಆರ್ಯ 3’ ಟೈಟಲ್ ರಿಜಿಸ್ಟರ್ ಮಾಡಿಸಿದ ನಿರ್ಮಾಪಕ- ಸಾಥ್ ನೀಡ್ತಾರಾ ಅಲ್ಲು ಅರ್ಜುನ್?
ಕಳೆದ ವರ್ಷ ನಾನು ಇಲ್ಲಿಗೆ ಬಂದಿದ್ದೆ. ಆಗ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಕುಮ್ಕಿ ಆನೆಗಳನ್ನು ಹಸ್ತಾಂತರದ ಬಗ್ಗೆ ಚರ್ಚಿಸಿದ್ದೆವು. ಅಂದು ಆಡಿದ ಮಾತಿನಂತೆ ಇಂದು ಕುಮ್ಕಿ ಆನೆಗಳನ್ನು ಹಸ್ತಾಂತರ ಮಾಡಿದಕ್ಕೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್, ಸಚಿವ ಈಶ್ವರ್ ಖಂಡ್ರೆ ಅವರಿಗೆ ಕನ್ನಡದಲ್ಲಿ ಪವನ್ ಕಲ್ಯಾಣ್ ಧನ್ಯವಾದ ಹೇಳಿದ್ದಾರೆ.
ನನ್ನೊಂದಿಗೆ ರಾಜಕೀಯಕ್ಕೆ ಹೊಸದಾಗಿ ಬಂದವರ ರೀತಿ ಸಿಎಂ ಎಂದಿಗೂ ಮಾತಾಡಲಿಲ್ಲ. ನಾವು ರಾಜಕೀಯವಾಗಿ ಬೇರೆ ಬೇರೆ ಕಡೆ ಇದ್ದರೂ ಜನರ ವಿಚಾರ ಬಂದಾಗ ನಾವು ಒಂದೇ ಎಂದಿದ್ದಾರೆ. ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರಕ್ಕೆ ನಾನು ಧನ್ಯವಾದ ಹೇಳ್ತೀನಿ. ಸಹೋದರ ರಾಜ್ಯದಂತೆ ನಮ್ಮ ಜೊತೆ ಕರ್ನಾಟಕ ನಿಂತಿದೆ. ಕುಮ್ಕಿ ಆನೆಗಳನ್ನ ನಮಗೆ ಕೊಟ್ಟಿದ್ದಕ್ಕೆ ಕರ್ನಾಟಕದ ಜನತೆಗೆ ಧನ್ಯವಾದ ಹೇಳುತ್ತೇನೆ. ಇದರ ಸಂಪೂರ್ಣ ಜವಾಬ್ದಾರಿಯನ್ನ ನಾನು ತೆಗೆದುಕೊಳ್ಳುತ್ತೇನೆ. ಇದು ಕರ್ನಾಟಕ ಮತ್ತು ಆಂಧ್ರಪ್ರದೇಶದ ಬಾಂಧವ್ಯಕ್ಕೆ ಮೊದಲ ಹೆಜ್ಜೆ ಎಂದರು.
ರಕ್ತಚಂದನ ಸ್ಮಗ್ಲಿಂಗ್ ಅಕ್ರಮಗಳಿಗೂ ಕಡಿವಾಣ ಹಾಕುವ ಜವಾಬ್ದಾರಿ ಕೂಡ ನಮ್ಮ ಮೇಲಿದೆ. ಕುಮ್ಕಿ ಆನೆಗಳ ಜೊತೆ ಅದರ ತರಬೇತಿ ಸೇರಿ ಅನೇಕ ಯೋಜನೆಗೆ ಒಪ್ಪಂದಗಳನ್ನು ಕರ್ನಾಟಕದೊಂದಿಗೆ ಮಾಡಿಕೊಳ್ಳಲಾಗಿದೆ. ನಮ್ಮ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಅವರ ಪರವಾಗಿಯೂ ಕರ್ನಾಟಕಕ್ಕೆ ಧನ್ಯವಾದ ಎಂದಿದ್ದಾರೆ. ಭಾಷಣದ ಕೊನೆಯಲ್ಲಿ ಜೈ ಕರ್ನಾಟಕ, ಜೈ ಆಂಧ್ರ, ಜೈ ಭಾರತ ಎಂದು ಪವನ್ ಕಲ್ಯಾಣ್ ಹೇಳಿದ್ದಾರೆ.